Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಗ್ಧ ಹಿಂದೂಗಳು ಸಾಯುತ್ತಿದ್ದರೆ ಮುಸಲ್ಮಾನರ ಮನೇಲಿ ಬಿರಿಯಾನಿ ತಿನ್ನುವ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ: ಬಸನಗೌಡ ಯತ್ನಾಳ್

ಮುಗ್ಧ ಹಿಂದೂಗಳು ಸಾಯುತ್ತಿದ್ದರೆ ಮುಸಲ್ಮಾನರ ಮನೇಲಿ ಬಿರಿಯಾನಿ ತಿನ್ನುವ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ: ಬಸನಗೌಡ ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 18, 2022 | 10:43 PM

ಫೇಸ್ ಬುಕ್ ನಲ್ಲಿ ನಮ್ಮ ಎಷ್ಟು ನಾಯಕರು ಜಮೀರ್ ಜೊತೆ ಹಲ್ಲು ಕಿಸಿಯುತ್ತಾ ಪೋಸ್ ನೀಡಿದ್ದಾರೆ ಅಂತ ಜನ ನೋಡುತ್ತಿದ್ದಾರೆ. ಮುಗ್ಧ ಹಿಂದೂಗಳು ಸಾಯುತ್ತಿದ್ದರೆ ಜಮೀರ್ ಮನೆಗೆ ಹೋಗಿ ಬಿರ್ಯಾನಿ ತಿನ್ನುವ ಸಾಕಷ್ಟು ನಾಯಕರು ನಮ್ಮಲಿದ್ದಾರೆ, ಎಂದು ಯತ್ನಾಳ್ ಹೇಳಿದರು.

ವಿಜಯನಗರ: ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ಟೀಕಿಸಲಾರಂಭಿಸಿದರೆ, ತಮ್ಮ ಪಕ್ಷ, ವಿರೋಧ ಪಕ್ಷ, ಬೇರೆಯವರ ಪಕ್ಷ ಅಂತ ತಾರತಮ್ಯ ಮಾಡೋದಿಲ್ಲ. ಮೊನ್ನೆಯಷ್ಟೇ ಅವರು ಕಾಂಗ್ರೆಸ್ (Congress) ಪಕ್ಷದಲ್ಲಂತೆ ತಮ್ಮ ಪಕ್ಷದಲ್ಲೂ ಒಬ್ಬ ಸದಸ್ಯ ಸಿಡಿ ತಯಾರಿಸುವ ಫ್ಯಾಕ್ಟರಿ (CD factory) ಇಟ್ಟುಕೊಂಡಿದ್ದಾರೆ ಎಂದಿದ್ದರು. ಸೋಮಾವಾರ ಅವರು ವಿಜಯನಗರನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತಾಡುವಾಗ ತಮ್ಮ ಪಕ್ಷದವರನ್ನೇ ತರಾಟೆಗೆ ತೆಗೆದುಕೊಂಡರು. ಉತ್ತರ ಕರ್ನಾಟಕದ ಕಲಬುರಗಿ, ಹುಬ್ಬಳ್ಳಿ ಧಾರವಾಡ, ರಾಯಚೂರು, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಕೋಮು ಗಲಭೆಯನ್ನು ಉಂಟುಮಾಡುವ ಶಕ್ತಿಗಳಿವೆ ಮತ್ತು ಗುಪ್ತಚರ ಇಲಾಖೆಯಲ್ಲಿ ಅವರ ಬಗ್ಗೆ ಮಾಹಿತಿ ಇರುತ್ತದೆ. ಹಾಗಾಗಿ, ಹಿಂದೂಗಳ ಮೆರವಣಿಗೆಗೆ ಅವಕಾಶ ನೀಡುವ ಮೊದಲು ಮತೀಯ ಶಕ್ತಿಗಳ ಮನೆಗಳ ಮೇಲೆ ಸರ್ಚ್ ಆಪರೇಶನ್ ನಡೆಸಬೇಕು. ಯಾರ ಮಾಳಿಗೆ ಮೇಲೆ ಕಲ್ಲುಗಳನ್ನು ಶೇಖರಿಸಲಾಗಿದೆ, ಯಾವನ ಮನೆಯಲ್ಲಿ ತಲ್ವಾರ್ ಇದೆ ಅಂತ ನೋಡಬೇಕು ಎಂದು ಯತ್ನಾಳ್ ಹೇಳಿದರು.

ಉತ್ತರ ಪ್ರದೇಶದಲ್ಲಿ ಮುಸಲ್ಮಾನರ ಸಂಖ್ಯೆ ಜಾಸ್ತಿಯಿದ್ದರೂ ರಾಮನವಮಿ ಸಂದರ್ಭದಲ್ಲಿ ಒಂದೇ ಒಂದು ಕಲ್ಲು ತೂರಾಟದ ಪ್ರಸಂಗ ನಡೆಯಲಿಲ್ಲ. ನಮ್ಮಲ್ಲೂ ಗೃಹ ಸಚಿವರು ನೋಡೋಣ, ಪರಿಶೀಲಿಸುತ್ತಿದ್ದೇವೆ ಮೊದಲಾದ ಹೇಳಿಕೆಗಳನ್ನು ನೀಡುತ್ತಾ ಹೊತ್ತುಗಳೆಯಬಾರದು. ಕೂಡಲೇ ಕ್ರಿಯಾಶೀಲರಾಗಬೇಕು ಎಂದು ಯತ್ನಾಳ್ ಹೇಳಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಗಾಗಿತ್ತು, ಹೀಗಾಗಿತ್ತು ಅಂತ ಹೇಳುವುದರಲ್ಲಿ ಏನೂ ಅರ್ಥವಿಲ್ಲ, ನಿಮ್ಮ ಸರಕಾರ ಏನು ಮಾಡುತ್ತಿದೆ ಅಂತ ಜನ ಕೇಳುತ್ತಾರೆ. ನಿಮ್ಮ ಕೆಲಸ ಮಾಡಿ ತೋರಿಸಿ ಅಂತ ಆವರು ಹೇಳಿದರು.

ಇತ್ತೀಚಿಗೆ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದಾಗ ಸರ್ಕಾರ ಕ್ರಮ ಜರುಗಿಸಿದ್ದರೆ ಎಲ್ಲ ಸರಿಯಾಗಿರುತಿತ್ತು. ಅದರೆ ಸರ್ಕಾರಕ್ಕೆ ಅದು ಬೇಕಿಲ್ಲ. ಅವರೊಂದಿಗೆ ನಿಮ್ಮ ಅಡ್ಜಸ್ಟ್ ಮೆಂಟ್ ಅಂತ ಜನ ಮಾತಾಡಿಕೊಳುತ್ತಾರೆ. ಫೇಸ್ ಬುಕ್ ನಲ್ಲಿ ನಮ್ಮ ಎಷ್ಟು ನಾಯಕರು ಜಮೀರ್ ಜೊತೆ ಹಲ್ಲು ಕಿಸಿಯುತ್ತಾ ಪೋಸ್ ನೀಡಿದ್ದಾರೆ ಅಂತ ಜನ ನೋಡುತ್ತಿದ್ದಾರೆ. ಮುಗ್ಧ ಹಿಂದೂಗಳು ಸಾಯುತ್ತಿದ್ದರೆ ಜಮೀರ್ ಮನೆಗೆ ಹೋಗಿ ಬಿರ್ಯಾನಿ ತಿನ್ನುವ ಸಾಕಷ್ಟು ನಾಯಕರು ನಮ್ಮಲಿದ್ದಾರೆ, ಎಂದು ಯತ್ನಾಳ್ ಹೇಳಿದರು.

ಸರ್ಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕಿದೆ. ನಮ್ಮ ರಾಷ್ಟ್ರೀಯ ಆಧ್ಯಕ್ಷರು ಮುಖ್ಯಮಂತ್ರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ, ಮುಂಬರುವ ದಿನಗಳಲ್ಲಿ ಬದಲಾವಣೆ ಆಗಲಿದೆ ಎಂದು ಶಾಸಕರು ಹೇಳಿದರು.

ಇದನ್ನೂ ಓದಿ:  ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್‌ ಗೃಹ ಸಚಿವರು ಬೇಕಾಗಿದ್ದಾರೆಂದು ಜಾಹೀರಾತು ನೀಡಲಿ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್