AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಸ್ಟ್ ಹಾಕಿದವನ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಂಡಿದ್ದರೂ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ತಪ್ಪು: ಇಮ್ರಾನ್, ಕಾರ್ಪೊರೇಟರ್

ಪೋಸ್ಟ್ ಹಾಕಿದವನ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಂಡಿದ್ದರೂ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದು ತಪ್ಪು: ಇಮ್ರಾನ್, ಕಾರ್ಪೊರೇಟರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Apr 18, 2022 | 8:31 PM

Share

ನಂತರ ಇಮ್ರಾನ್ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದರಂತೆ. ಕರೆ ಸ್ವೀಕರಿಸಿದ ಪೊಲೀಸ ಇನ್ಸ್ ಪೆಕ್ಟರ್ ಕೂಡಲೇ ಇಬ್ಬರು ಕಾನ್ಸ್ಟೇಬಲ್ ಜೊತೆ ತೆರಳಿ ವಾಟ್ಸ್ಯಾಪ್​ನಲ್ಲಿ ಪೋಸ್ಟ್ ಹಾಕಿದ ಯುವಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದರು ಎಂದು ಇಮ್ರಾನ್ ಹೇಳಿದರು.

ಹಳೆ ಹುಬ್ಬಳ್ಳಿಯಲ್ಲಿ (Old Hubballi) ಶನಿವಾರ ರಾತ್ರಿ ನಡೆದ ಗಲಭೆ ಪೊಲೀಸರ ಮತ್ತು ಸರ್ಕಾರದ ನಿದ್ದೆಗೆಡಿಸಿದೆ. ಗಲಭೆ ನಡೆದ ಪ್ರದೇಶ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ (ward number 33) ನಂಬರ್ 33 ರ ಭಾಗವಾಗಿದೆ ಮತ್ತು ಇಮ್ರಾನ್ ಎಲಿಗಾರ್ (Imran Eligar) ಇದನ್ನು ಪ್ರತಿನಿಧಿಸುತ್ತಾರೆ. ಗಲಭೆ ಹೇಗೆ ಸೃಷ್ಟಿಯಾಯಿತು, ಅದಕ್ಕೆ ಕಾರಣಕರ್ತರು ಯಾರು ಮತ್ತು ಘಟನೆ ಬಗ್ಗೆ ಅವರಲ್ಲಿರುವ ಮಾಹಿತಿಯೇನು ಮೊದಲಾದ ಸಂಗತಿಗಳನ್ನು ಟಿವಿ9 ಕನ್ನಡ ವಾಹಿನಿಯ ಹುಬ್ಬಳ್ಳಿ ವರದಿಗಾರ ಇಮ್ರಾನ್ ಅವರನ್ನು ಕೇಳಿದ್ದಾರೆ. ಅಂದು ರಾತ್ರಿ ಸುಮಾರು 8 ಗಂಟೆಗೆ ವಾಟ್ಸ್ಯಾಪ್ ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ತಮಗೊಂದು ಕರೆ ಬಂತು. ಕರೆ ಮಾಡಿದವರು ಸ್ಥಳದಲ್ಲಿ ಘೇರಾಯಿಸುತ್ತಿದ್ದಾರೆ ಎಂದು ಹೇಳಿದರು ಎಂದು ಇಮ್ರಾನ್ ಹೇಳಿದರು.

ನಂತರ ಇಮ್ರಾನ್ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದರಂತೆ. ಕರೆ ಸ್ವೀಕರಿಸಿದ ಪೊಲೀಸ ಇನ್ಸ್ ಪೆಕ್ಟರ್ ಕೂಡಲೇ ಇಬ್ಬರು ಕಾನ್ಸ್ಟೇಬಲ್ ಜೊತೆ ತೆರಳಿ ವಾಟ್ಸ್ಯಾಪ್​ನಲ್ಲಿ ಪೋಸ್ಟ್ ಹಾಕಿದ ಯುವಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದರು ಎಂದು ಇಮ್ರಾನ್ ಹೇಳಿದರು. ಅಮೇಲೆ ಅವನ ವಿರುದ್ಧ ಅನ್ವಯವಾಗುವ ಸೆಕ್ಷನ್ ಗಳ ಅಡಿ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಯಿತು ಎಂದು ತಿಳಿಸಿದ ಅವರು ಠಾಣೆಯಲ್ಲಿ ಇದೆಲ್ಲ ಆಗುತ್ತಿರುವಾಗಲೇ ವಾಟ್ಸ್ಯಾಪ್ ಗಳ ಮುಖಾಂತರ ಸುದ್ದಿ ಹರಡಿ ಜನ ಜಮಾಯಿಸತೊಡಗಿದ್ದರು ಎಂದರು.

ಆದರೆ ಜನ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಬದಲು ಕೆಲ ಕಿಡಿಗೇಡಿಗಳು ಕಲ್ಲು ತೂರಾಟದಲ್ಲಿ ತೊಡಗಿದ್ದು ತಪ್ಪು. ನಾನು ಇದನ್ನು ವಿರೋಧಿಸುತ್ತೇನೆ. ಯಾಕೆಂದರೆ, ಪೊಲೀಸರು ಅದಾಗಲೇ ಕಾನೂನಾತ್ಮಕವಾಗಿ ತೆಗೆದುಕೊಳ್ಳಬೇಕಿದ್ದಎಲ್ಲ ಕ್ರಮಗಳನ್ನು ತೆದುಕೊಂಡಿದ್ದರು ಎಂದು ಇಮ್ರಾನ್ ಹೇಳಿದರು.

ಇದನ್ನೂ ಓದಿ:   ಹುಬ್ಬಳ್ಳಿ ಗಲಭೆ: ಧರ್ಮದ ಹೆಸರಿನಲ್ಲಿ ಶಾಂತಿ ಕದಡುವುದು ಬೇಡ, ಶಾಸಕ ಅಬ್ಬಯ್ಯ ಪ್ರಸಾದ್ ತಾಕೀತು    

Published on: Apr 18, 2022 08:22 PM