ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ಬಿ ಎಮ್ ಟಿ ಸಿ ಬಸ್ ಮೇಲೆ, ಯಾರಿಗೂ ಪ್ರಾಣಾಪಾಯವಿಲ್ಲ!
ಇಂಥ ಭಾರಿ ಗಾತ್ರದ ಮರ ಚಿಕ್ಕ ಚಿಕ್ಕ ವಾಹನ, ಮನುಷ್ಯರ ಮೇಲೆ ಬಿದ್ದಿದ್ದರೆ ಅದು ನಿಶ್ಚಿತವಾಗಿಯೂ ಮಾರಣಾಂತಿಕವಾಗಿ ಪರಿಣಮಿಸುತಿತ್ತು. ಈ ಹಿನ್ನೆಲೆಯಲ್ಲಿ ನಾವು ಬಿ ಎಮ್ ಟಿ ಸಿ ಬಸ್ ಗೆ ಋಣಿಯಾಗಿರಬೇಕು ಮಾರಾಯ್ರೇ.
ಬೆಂಗಳೂರು ನಗರ ಸಾರಿಗೆ ಸಂಸ್ಥೆಯ ಬಸ್ಸುಗಳ (BMTC) ಹಣೆಬರಹವೇ ಸರಿ ಇದ್ದಂತಿಲ್ಲ ಮಾರಾಯ್ರೇ. ಕೆಲ ಬಸ್ಗಳು ರಸ್ತೆ ಮೇಲೆ ಚಲಿಸುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡು (catch fire) ಉರಿದುಬಿಟ್ಟರೆ ಬೇರೆ ಕೆಲವು ಬಸ್ಗಳ ಮೇಲೆ ಈ ವಿಡಿಯೋನಲ್ಲಿ ಕಾಣುವ ಹಾಗೆ ಬೃಹತ್ ಗಾತ್ರದ ಮರಗಳು ಉರುಳಿ ಬೀಳುತ್ತವೆ (uprooted). ಈ ಘಟನೆ ನಡೆದಿರೋದು ಗೊರುಗುಂಟೆಪಾಳ್ಯ ಸಿಗ್ನಲ್ (Goruguntepalya signal) ಬಳಿ. ಬಸ್ಸಲ್ಲಿ ಕೆಲ ಪ್ರಯಾಣಿಕರಿದ್ದಿದ್ದು ನಿಜವಾದರೂ ಅದೃಷ್ಟವಶಾತ್, ಯಾರಿಗೂ ಪ್ರಾಣಾಪಾಯವಾಗಿಲ್ಲ. ಗಮನಿಸಬೇಕಿರುವ ಸಂಗತಿ ಏನೆಂದರೆ ಬಸ್ ನಿಂದಾಗಿ ಕೆಲವರ ಪ್ರಾಣ ಉಳಿದಿದೆ. ಹೇಗೆ ಅಂತೀರಾ? ಯೋಚಿಸಿ ನೋಡಿ, ಮರ ರಸ್ತೆ ಮೇಲೆ ಉರುಳಿ ಬೀಳುವಾಗ ಬಸ್ ಅಲ್ಲಿಗೆ ಬಂದಿರದೆ ಹೋಗಿದ್ದರೆ ಅದು ದ್ವಿಚಕ್ರ ವಾಹನ, ಕಾರು ಇಲ್ಲವೇ ಪಾದಾಚಾರಿಗಳ ಮೇಲೆ ಅಪ್ಪಳಿಸುತಿತ್ತು.
ಇಂಥ ಭಾರಿ ಗಾತ್ರದ ಮರ ಚಿಕ್ಕ ಚಿಕ್ಕ ವಾಹನ, ಮನುಷ್ಯರ ಮೇಲೆ ಬಿದ್ದಿದ್ದರೆ ಅದು ನಿಶ್ಚಿತವಾಗಿಯೂ ಮಾರಣಾಂತಿಕವಾಗಿ ಪರಿಣಮಿಸುತಿತ್ತು. ಈ ಹಿನ್ನೆಲೆಯಲ್ಲಿ ನಾವು ಬಿ ಎಮ್ ಟಿ ಸಿ ಬಸ್ ಗೆ ಋಣಿಯಾಗಿರಬೇಕು ಮಾರಾಯ್ರೇ. ಬಸ್ ನಡುರಸ್ತೆಯಲ್ಲಿ ನಿಂತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಬಿ ಬಿ ಎಮ್ ಪಿ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅದು ಸಹ ಸೂಕ್ಷ್ಮದ ಕೆಲಸವೇ. ಮರದ ಕೊಂಬೆಗಳನ್ನು ರಸ್ತೆಯ ಈ ಬದಿಯೇ ಅಂದರೆ ಬಸ್ಸಿನ ಎಡಭಾಗ ಬೀಳುವಂತೆ ಮಾಡಬೇಕು. ಆ ಕಡೆ ಬೀಳಿಸಿದರೆ ರಸ್ತೆಯಲ್ಲಿ ಸಂಚರಿಸುತ್ತಿರುವ ಜನ ಮತ್ತು ವಾಹನಗಳ ಮೇಲೆ ಬೀಳುತ್ತವೆ. ಅದು ಅಪಾಯಕ್ಕೆ ಆಹ್ವಾನವಿದ್ದಂತೆ.
ಹಾಗಾಗೇ, ರೆಂಬೆಗಳನ್ನು ಹಗ್ಗದಿಂದ ಕಟ್ಟಿ ಎಡಭಾಗದಲ್ಲಿ ಬೀಳುವಂತೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಚಪ್ಪಲಿ ಏಟು ನೀಡಿ ಬುದ್ದಿ ಕಲಿಸಿದ ಅತಿಥಿ ಉಪನ್ಯಾಸಕಿಯರು, ವಿಡಿಯೋ ವೈರಲ್