ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಚಪ್ಪಲಿ ಏಟು ನೀಡಿ ಬುದ್ದಿ ಕಲಿಸಿದ ಅತಿಥಿ ಉಪನ್ಯಾಸಕಿಯರು, ವಿಡಿಯೋ ವೈರಲ್

ಉಪನ್ಯಾಸಕ ಅಮಿತ್ ನಿತ್ಯ ಕಾಲೇಜಿಗೆ ಮದ್ಯಸೇವಿಸಿ ಬಂದು ಸ್ಟಾಫ್ ರೂಮ್ನಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದನಂತೆ. ಹಲವು ಬಾರಿ ವಾರ್ನಿಂಗ್ ಕೊಟ್ಟರೂ ಚಾಳಿ ಬಿಡದ ಹಿನ್ನೆಲೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ರೂಮ್‌ನಲ್ಲೇ ಅತಿಥಿ ಉಪನ್ಯಾಸಕಿಯರು ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾರೆ.

ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಚಪ್ಪಲಿ ಏಟು ನೀಡಿ ಬುದ್ದಿ ಕಲಿಸಿದ ಅತಿಥಿ ಉಪನ್ಯಾಸಕಿಯರು, ವಿಡಿಯೋ ವೈರಲ್
ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಚಪ್ಪಲಿ ಏಟು ನೀಡಿ ಬುದ್ದಿ ಕಲಿಸಿದ ಅತಿಥಿ ಉಪನ್ಯಾಸಕಿಯರು, ವಿಡಿಯೋ ವೈರಲ್
Follow us
| Updated By: ಆಯೇಷಾ ಬಾನು

Updated on:Apr 16, 2022 | 7:58 AM

ಬೆಳಗಾವಿ: ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯ ಸರ್ದಾರ್ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ. ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲೇಜಿನ ಸ್ಟಾಫ್ ರೂಮ್ನಲ್ಲಿ ಅತಿಥಿ ಉಪನ್ಯಾಸಕಿಯರು ಹಿಗ್ಗಾಮಗ್ಗಾ ಥಳಿಸಿದ್ದಾರೆ.

ಉಪನ್ಯಾಸಕ ಅಮಿತ್ ನಿತ್ಯ ಕಾಲೇಜಿಗೆ ಮದ್ಯಸೇವಿಸಿ ಬಂದು ಸ್ಟಾಫ್ ರೂಮ್ನಲ್ಲಿ ಲೈಂಗಿಕ ಕಿರುಕುಳ ನೀಡ್ತಿದ್ದನಂತೆ. ಹಲವು ಬಾರಿ ವಾರ್ನಿಂಗ್ ಕೊಟ್ಟರೂ ಚಾಳಿ ಬಿಡದ ಹಿನ್ನೆಲೆ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ರೂಮ್‌ನಲ್ಲೇ ಅತಿಥಿ ಉಪನ್ಯಾಸಕಿಯರು ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾರೆ. ಅತಿಥಿ ಉಪನ್ಯಾಸಕಿಯರು ಥಳಿಸುವ ವಿಡಿಯೋ ವೈರಲ್ ಆಗಿದೆ. ಉಪನ್ಯಾಸಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ ಸಿಬಿಐ ಅಧಿಕಾರಿ ಸೋಗಿನಲ್ಲಿ ವಂಚಿಸುತ್ತಿದ್ದ ಚಂದು ಅಲಿಯಾಸ್ ಲಕ್ಷ್ಮೀಕಾಂತ್‌ನನ್ನ ತುಮಕೂರು ಪೊಲೀಸರು ಬಂಧಿಸಿದ್ದಾರೆ. ನಕಲಿ ಸಿಬಿಐ ಆಫೀಸರ್, ಆರೋಪಿ ಚಂದು ಬಂಧನ ಭೀತಿಯಿಂದ ಆತ್ಮಹತ್ಯೆ ಬೆದರಿಕೆ ಹಾಕಿದ್ದ. ತನ್ನ ಸಾವಿಗೆ SP, ಪೊಲೀಸ್ ಇಲಾಖೆ ಕಾರಣವೆಂದು ಬೆದರಿಕೆ ಹಾಕಿದ್ದ. ನಕಲಿ ಸಿಬಿಐ ಆಫೀಸರ್ ಆಟಾಟೋಪಕ್ಕೆ ಕೊನೆಗೂ ಎಸ್ಪಿ ರಾಹುಲ್ ಬ್ರೇಕ್ ಹಾಕಿದ್ದಾರೆ. ತುಮಕೂರು ಪೊಲೀಸರು ಆರೋಪಿ ಚಂದು ಅರಸ್ಟ್ ಮಾಡಿದ್ದಾರೆ.

ಆರೋಪಿ, ಸಿಬಿಐ ಅಧಿಕಾರಿ ಸೋಗಿನಲ್ಲಿ ಮಹಿಳೆಯನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ. ನೊಂದ ಮಹಿಳೆ 4 ತಿಂಗಳ ಹಿಂದೆ ತುಮಕೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆರೋಪಿ ಚಂದು ಜಾಮೀನು ಪಡೆದು ಹೊರಬಂದಿದ್ದ. ಮಹಿಳೆ ಏ.12ರಂದು ಮತ್ತೊಮ್ಮೆ ಠಾಣೆಗೆ ದೂರು ನೀಡಿದ್ದರು. ಆರೋಪಿ ಚಂದು ಬಂಧನಕ್ಕೆ ಒತ್ತಾಯ ಮಾಡಿದ್ದರು. ಮಹಿಳೆ ದೂರು ಆಧರಿಸಿ ಆರೋಪಿಯನ್ನ ಬಂಧಿಸಲು ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಸೂಚಿಸಿದ್ದರು. ಬಂಧನ ಭೀತಿಯಿಂದ ಆತ್ಮಹತ್ಯೆ ನಾಟಕವಾಡಿದ್ದ ಚಂದು ಕೊನೆಗೂ ಅರೆಸ್ಟ್ ಆಗಿದ್ದಾನೆ. ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಚಂದು ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ಲೋನ್ ಪಡೆದಿದ್ದ. ಹಲವರಿಗೆ ರಿವಾಲ್ವರ್ ತೋರಿ ಬೆದರಿಕೆ ಹಾಕಿದ್ದ. ರಾಜಕಾರಣಿಗಳ ಸಂಬಂಧಿ, ಸಿಬಿಐ ಅಧಿಕಾರಿ ಸೋಗಿನಲ್ಲಿ ಜನರನ್ನು ಪರಿಚಯಿಸಿಕೊಂಡು ವಂಚಿಸುತ್ತಿದ್ದ. ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ. ಲೈಂಗಿಕ‌ ಕಿರುಕುಳ, ವಂಚನೆ, ಬೆದರಿಕೆವೊಡ್ಡಿದ್ದ ಹಿನ್ನೆಲೆ ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಇಳಿದ ಕಾಂಗ್ರೆಸ್; 9 ತಂಡ ರಚಿಸಿ ರಾಜ್ಯಾದ್ಯಂತ ಹೋರಾಟ, ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ತಟ್ಟಲಿದೆ ಬಿಸಿ

ಚಾಣಕ್ಯ ನೀತಿ: ನಿಮ್ಮನ್ನು ಶ್ರೇಷ್ಠರಾಗಿಸುತ್ತವೆ ಈ ಕೆಲಸಗಳು; ನಿಮ್ಮ ಕುಟುಂಬಕ್ಕೂ ಇದು ಶ್ರೇಯಸ್ಕರ

Published On - 7:43 am, Sat, 16 April 22