ಚಾಣಕ್ಯ ನೀತಿ: ನಿಮ್ಮನ್ನು ಶ್ರೇಷ್ಠರಾಗಿಸುತ್ತವೆ ಈ ಕೆಲಸಗಳು; ನಿಮ್ಮ ಕುಟುಂಬಕ್ಕೂ ಇದು ಶ್ರೇಯಸ್ಕರ

Chanakya Niti: ಆಚಾರ್ಯ ಚಾಣಕ್ಯರು ಹೇಳಿರುವ ಜೀವನ ಪಾಠಗಳು ಎಂದಿಗೂ ಜೀವನಕ್ಕೆ ದಿಕ್ಸೂಚಿಯಾಗಬಲ್ಲವು. ಅವರು ಹೇಳಿರುವಂತೆ ಈ ಕೆಲಸಗಳು ನಮ್ಮನ್ನು ಶ್ರೇಷ್ಠರಾಗಿಸುತ್ತವೆ. ಮೊದಲು ಅಗತ್ಯವಿರುವವರಿಗೆ ಆಹಾರ ನೀಡಿ ನಂತರ ನೀವು ತಿನ್ನುವುದು, ಪ್ರೀತಿಯಲ್ಲಿ- ದಾನದಲ್ಲಿ ಏನನ್ನೂ ನಿರೀಕ್ಷಿಸದಿರುವುದು ಹಾಗೂ ನಮ್ಮ ಜ್ಞಾನವನ್ನು ನಿಜ ಜೀವನದಲ್ಲಿ ಅನುಷ್ಠಾನಗೊಳಿಸುವುದರಿಂದ ವ್ಯಕ್ತಿ ಶ್ರೇಷ್ಠನಾಗುತ್ತಾನೆ ಎನ್ನುತ್ತಾರೆ ಚಾಣಕ್ಯರು. ಇದು ಕುಟುಂಬಕ್ಕೂ ಶ್ರೇಯಸ್ಕರ ಎಂದಿದ್ದಾರೆ ಅವರು.

shivaprasad.hs
|

Updated on: Apr 16, 2022 | 7:00 AM

ಆಚಾರ್ಯ ಚಾಣಕ್ಯರು ಜೀವನಕ್ಕೆ ಅಗತ್ಯವಾದ ನೀತಿಪಾಠಗಳನ್ನು ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಅವು ಈ ಕಾಲಕ್ಕೂ ಪ್ರಸ್ತುತವಾದವುಗಳು. ಕಾರಣ, ವ್ಯಕ್ತಿಗಳ ನಡೆನುಡಿಗೆ ಬಂದಾಗ ಮನುಷ್ಯ ಸ್ವಭಾವ ಸಹಜವಾದದ್ದು, ಅದು ಕಾಲದಿಂದ ಕಾಲಕ್ಕೆ ಬದಲಾಗುವದು ಕಡಿಮೆ. ಹೀಗಾಗಿಯೇ ಅಂದಿನ ನೀತಿಪಾಠಗಳು ಇಂದಿಗೂ ಪ್ರಸ್ತುತ. ಚಾಣಕ್ಯ ನೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಮಾಡಬೇಕಾದ ನಾಲ್ಕು ಕಾರ್ಯಗಳನ್ನು ತಿಳಿಸಲಾಗಿದೆ. ಇದನ್ನು ಕಾರ್ಯಗತಗೊಳಿಸಿದವರ ವ್ಯಕ್ತಿತ್ವ ಶ್ರೇಷ್ಠವಾಗುತ್ತದೆ ಎನ್ನುತ್ತಾನೆ ಚಾಣಕ್ಯ. ಅಲ್ಲದೇ ಇದು ಕುಟುಂಬಕ್ಕೂ ಶ್ರೇಯಸ್ಕರವಂತೆ.

1 / 5
ಆಚಾರ್ಯ ಚಾಣಕ್ಯ ಹೇಳುವಂತೆ ಮೊದಲು ಅಗತ್ಯವಿರುವವರಿಗೆ ಆಹಾರವನ್ನು ನೀಡಿ. ನಂತರ ಏನು ಉಳಿಯುತ್ತದೆಯೋ ಅದು ನಿಮ್ಮ ಆಹಾರ. ಅಂತಹ ಆಹಾರವು ಕುಟುಂಬದಲ್ಲಿ ಸಮೃದ್ಧಿಯನ್ನು ತರುತ್ತದೆ ಮತ್ತು ಮನಸ್ಸನ್ನು ಶುದ್ಧ ಮತ್ತು ಧನಾತ್ಮಕವಾಗಿಸುತ್ತದೆ.

2 / 5
ಸಂಬಂಧಕ್ಕೆ ತಕ್ಕಂತೆ ಪ್ರೀತಿಯ ಸ್ವರೂಪ ಬದಲಾಗುತ್ತದೆ. ಪ್ರೀತಿಯಲ್ಲಿ ಯಾರಿಂದಲೂ ಏನನ್ನೂ ನಿರೀಕ್ಷಿಸಬಾರದು. ಪ್ರೀತಿ ಯಾವಾಗಲೂ ನಿಸ್ವಾರ್ಥವಾಗಿರಬೇಕು. ಆಗ ಮಾತ್ರ ಅದು ಶುದ್ಧ ಪ್ರೀತಿ ಎಂದು ಕರೆಯಲ್ಪಡುತ್ತದೆ. ಈ ನಿಸ್ವಾರ್ಥ ಪ್ರೀತಿಯ ವ್ಯಾಖ್ಯಾನವನ್ನು ಶ್ರೀಕೃಷ್ಣನು ಜಗತ್ತಿಗೆ ವಿವರಿಸಿದ್ದಾನೆ. ಅದರಂತೆ ಚಾಣಕ್ಯರೂ ಹೇಳಿದ್ದು, ಪ್ರೀತಿ ನಿಸ್ವಾರ್ಥವಾಗಿರಬೇಕು. ಅದು ಕುಟುಂಬದಲ್ಲಿನ ಸಂಬಂಧವನ್ನು ಚೆನ್ನಾಗಿಡುತ್ತದೆ.

3 / 5
ಕೇವಲ ಕೆಲವು ಗ್ರಂಥಗಳು ಮತ್ತು ಪುರಾಣಗಳನ್ನು ಓದುವುದರಿಂದ ಮತ್ತು ಅವುಗಳನ್ನು ಕಂಠಪಾಠ ಮಾಡುವುದರಿಂದ ನೀವು ಬುದ್ಧಿವಂತರಾಗುವುದಿಲ್ಲ. ಒಬ್ಬ ನಿಜವಾದ ಬುದ್ಧಿವಂತ ವ್ಯಕ್ತಿ ಆ ವಿಷಯಗಳನ್ನು ತನ್ನ ಜೀವನದಲ್ಲಿ ಅನುಷ್ಠಾನಗೊಳಿಸುತ್ತಾನೆ. ಯಾರ ಜ್ಞಾನವು ಪಾಪ ಕರ್ಮಗಳಲ್ಲಿ ಪಾಲ್ಗೊಳ್ಳದಂತೆ ತಡೆಯುತ್ತದೆಯೋ, ಆ ವ್ಯಕ್ತಿ ನಿಜವಾಗಿಯೂ ಬುದ್ಧಿವಂತ ಎನ್ನುತ್ತಾನೆ ಚಾಣಕ್ಯ.

4 / 5
ಆಚಾರ್ಯ ಚಾಣಕ್ಯರು ನಿಸ್ವಾರ್ಥದಿಂದ ನೀಡುವ ಮತ್ತು ರಹಸ್ಯವಾಗಿ ನೀಡುವ ದಾನವೇ ಅತ್ಯುತ್ತಮ ದಾನ ಎಂದು ಹೇಳಿದ್ದಾರೆ. ನೀವು ಕೂಡ ದಾನದ ಮೂಲಕ ಖ್ಯಾತಿಯನ್ನು, ಗೌರವವನ್ನು ನಿರೀಕ್ಷಿಸಿದರೆ ಅದು ವ್ಯರ್ಥವಾಗುತ್ತದೆ. ನಿಸ್ವಾರ್ಥ ಮನಸ್ಸಿನಿಂದ ದಾನ ಮಾಡುವುದನ್ನು ಚಾಣಕ್ಯರು ಹೇಳುತ್ತಾರೆ.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ