ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಎದುರು ಮಕಾಡೆ ಮಲಗಿದ ‘ಬೀಸ್ಟ್’; ಕಲೆಕ್ಷನ್ ಅಂತರ ಎಷ್ಟು?
ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಏಪ್ರಿಲ್ 13ರಂದು ರಿಲೀಸ್ ಆಗಿತ್ತು. ಮರುದಿನ (ಏಪ್ರಿಲ್ 14) ‘ಕೆಜಿಎಫ್ 2’ ತೆರೆಗೆ ಬಂತು. ‘ಬೀಸ್ಟ್’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೇ ಹೆಚ್ಚು ಬಂದವು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನು ಜನರು ಒಪ್ಪಿಕೊಂಡರು.
ತಮಿಳು ಮಂದಿ ಅಷ್ಟು ಸುಲಭವಾಗಿ ಪರಭಾಷೆಯ ಚಿತ್ರಗಳನ್ನು ಒಪ್ಪಿಕೊಳ್ಳುವವರಲ್ಲ. ‘ಆರ್ಆರ್ಆರ್’ ಸಿನಿಮಾ (RRR Movie) ತೆರೆಗೆ ಬಂದಾಗಲೂ ಆ ಚಿತ್ರವನ್ನು ಅಷ್ಟು ಸುಲಭದಲ್ಲಿ ಅವರು ಒಪ್ಪಿಕೊಳ್ಳಲಿಲ್ಲ. ರಾಜಮೌಳಿ ನಿರ್ದೇಶನದ ಈ ಸಿನಿಮಾ ತಮಿಳಿನಿಂದ ಈವರೆಗೆ ಕಲೆಕ್ಷನ್ ಮಾಡಿದ್ದು 58 ಕೋಟಿ ರೂಪಾಯಿ ಮಾತ್ರ. ಆದರೆ, ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು (KGF Chapter 2) ತಮಿಳುಮಂದಿ ಒಪ್ಪಿಕೊಂಡಿದ್ದಾರೆ. ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ (Beast Movie) ಎದುರು ಜನರು ‘ಕೆಜಿಎಫ್ 2’ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಿದೆ. ಐದು ದಿನಕ್ಕೆ ಈ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಏಪ್ರಿಲ್ 13ರಂದು ರಿಲೀಸ್ ಆಗಿತ್ತು. ಅದರ ಮರುದಿನ (ಏಪ್ರಿಲ್ 14) ‘ಕೆಜಿಎಫ್ 2’ ತೆರೆಗೆ ಬಂತು. ‘ಬೀಸ್ಟ್’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೇ ಹೆಚ್ಚು ಬಂದವು. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವನ್ನು ಜನರು ಒಪ್ಪಿಕೊಂಡರು. ಈ ಕಾರಣಕ್ಕೆ ವಿಶ್ವಾದ್ಯಂತ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಆರಂಭಿಸಿತು. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ 5 ದಿನಕ್ಕೆ 200+ ಕಲೆಕ್ಷನ್ ಮಾಡಿದ್ದು ಚಿತ್ರದ ಹೆಮ್ಮೆ. ಈಗ ತಮಿಳುನಾಡಿನಲ್ಲೂ ಚಿತ್ರ ಒಳ್ಳೆಯ ಕಮಾಯಿ ಮಾಡುತ್ತಿದೆ.
ತಮಿಳುನಾಡಿನಲ್ಲಿ ಮೊದಲ ದಿನ (ಏಪ್ರಿಲ್ 14) ಈ ಚಿತ್ರ 8.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಅಭಿಮಾನಿಗಳು ಚಿತ್ರಮಂದಿರದತ್ತ ಹೆಚ್ಚೆಚ್ಚು ಹೆಜ್ಜೆ ಹಾಕಿದ್ದಾರೆ. ಹೀಗಾಗಿ, ಎರಡನೇ ದಿನ 10.61 ಕೋಟಿ ರೂಪಾಯಿ, ಮೂರನೇ ದಿನ 11.50 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನವಾದ ಭಾನುವಾರ ಈ ಸಿನಿಮಾ 12.38 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ವೀಕೆಂಡ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಚಿತ್ರಗಳು ಸೋಮವಾರ ಸೊರಗುತ್ತವೆ. ಆದರೆ, ‘ಕೆಜಿಎಫ್ 2’ ವಿಚಾರದಲ್ಲಿ ಹಾಗಾಗುವ ಮಾತೇ ಇಲ್ಲ. ಈ ಸಿನಿಮಾ ಐದನೇ ದಿನ (ಏಪ್ರಿಲ್ 18) 7.54 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ತಮಿಳುನಾಡಿನಲ್ಲಿ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ. ತಮಿಳಿನಲ್ಲಿ ಅರ್ಧ ಶತಕ ಬಾರಿಸಿದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್ 2’ಗೆ ಸಿಕ್ಕಿದೆ.
#KGFChapter2 TN Box Office
PASSESS the crucial Monday test by crossing ₹50 cr milestone mark.
Day 1 – ₹ 8.24 cr Day 2 – ₹ 10.61 cr Day 3 – ₹ 11.50 cr Day 4 – ₹ 12.38 cr Day 5 – ₹ 7.54 cr Total – ₹ 50.27 cr
— Manobala Vijayabalan (@ManobalaV) April 19, 2022
ಇನ್ನು, ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ‘ಬೀಸ್ಟ್’ ಫೇಲ್ ಆಗಿದೆ. ಈ ಚಿತ್ರ ಸೋಮವಾರ ತಮಿಳುನಾಡಿನಲ್ಲಿ ಕೇವಲ 1.89 ಕೋಟಿ ರೂಪಾಯಿ ಗಳಿಸಿದೆ. ತಮಿಳುನಾಡಿನಲ್ಲಿ ಸಿನಿಮಾದ ಒಟ್ಟೂ ಗಳಿಕೆ 57.15 ಆಗಿದೆ. ಎರಡೂ ಸಿನಿಮಾಗಳ ನಡುವೆ ಸುಮಾರು 7 ಕೋಟಿ ರೂಪಾಯಿ ಅಂತರ ಇದ್ದು, ನ್ನು ಕೆಲವೇ ದಿನಗಳಲ್ಲಿ ಈ ಚಿತ್ರವನ್ನು ‘ಕೆಜಿಎಫ್ 2’ ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ.
#Beast TN Box Office
FAILS the Monday test, PLUMMETS with a fall of another 65.38%.
Day 1 – ₹ 26.40 cr Day 2 – ₹ 10.15 cr Day 3 – ₹ 7.21 cr Day 4 – ₹ 6.04 cr Day 5 – ₹ 5.46 cr Day 6 – ₹ 1.89 cr Total – ₹ 57.15 cr#Vijay
— Manobala Vijayabalan (@ManobalaV) April 19, 2022
3 mins to the 11:45 AM show and still the #Beast is in Green. pic.twitter.com/0CySYyiTVT
— Manobala Vijayabalan (@ManobalaV) April 19, 2022
ಇದನ್ನೂ ಓದಿ: ಸೌತ್ ಚಿತ್ರಗಳ ಎದುರು ಬಾಲಿವುಡ್ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್ 2’ ಅಧೀರ ಸಂಜಯ್ ದತ್