‘ಹುಡುಗರು’ ಚಿತ್ರದ ಶೂಟಿಂಗ್​ ವೇಳೆ ಪುನೀತ್​ ಹೇಗೆ ಇರ್ತಿದ್ರು? ಆ ದಿನಗಳ ಮೆಲುಕು ಹಾಕಿದ ಶ್ರೀನಗರ ಕಿಟ್ಟಿ

Srinagar Kitty | Puneeth Rajkumar: ಪುನೀತ್​ ರಾಜ್​ಕುಮಾರ್​ ಅವರ ಸ್ನೇಹವನ್ನು ಶ್ರೀನಗರ ಕಿಟ್ಟಿ ನೆನಪು ಮಾಡಿಕೊಂಡಿದ್ದಾರೆ. ‘ಹುಡುಗರು’ ಚಿತ್ರದ ಶೂಟಿಂಗ್​ ಸಮಯವನ್ನು ಅವರು ಮೆಲುಕು ಹಾಕಿದ್ದಾರೆ.

TV9kannada Web Team

| Edited By: Madan Kumar

Apr 19, 2022 | 1:48 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಪ್ರತಿ ದಿನವೂ ಒಂದಿಲ್ಲೊಂದು ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾರೆ. ಅದರಲ್ಲೂ ಪುನೀತ್​ ಜೊತೆ ಕೆಲಸ ಮಾಡುವ ಅವಕಾಶ ಪಡೆದಿದ್ದವರಿಗೆ ಹೆಚ್ಚು ನೆನಪುಗಳು ಕಾಡುತ್ತವೆ. ನಟ ಶ್ರೀನಗರ ಕಿಟ್ಟಿ ಅವರು ‘ಹುಡುಗರು’ (Hudugaru Kannada Movie) ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾದಲ್ಲಿ ಹೀರೋ ಸ್ನೇಹಿತರ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ಲೂಸ್​ ಮಾದ ಯೋಗಿ ಅಭಿನಯಿಸಿದ್ದರು. ಮೂರು ಮುಖ್ಯ ಪಾತ್ರಗಳ ಮೇಲೆ ಕಥೆ ಮೂಡಿಬಂದಿತ್ತು. ಹಾಗಾಗಿ ಪುನೀತ್​ ಜೊತೆ ಹೆಚ್ಚು ದಿನಗಳ ಕಾಲ ಶೂಟಿಂಗ್​ನಲ್ಲಿ ಭಾಗವಹಿಸಲು ಕಿಟ್ಟಿಗೆ ಅವಕಾಶ ಸಿಕ್ಕಿತ್ತು. ಆ ನೆನಪುಗಳನ್ನು ಅವರು ಈಗ ಪುನಃ ನೆನಪು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ‘ರಾಜಿ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಶ್ರೀನಗರ ಕಿಟ್ಟಿ (Srinagar Kitty) ಗೆಸ್ಟ್​ ಆಗಿ ಆಗಮಿಸಿದ್ದರು. ಆ ವೇಳೆ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು.

ಇದನ್ನೂ ಓದಿ:

ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ

ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಸಲುವಾಗಿ ಫ್ಯಾನ್ಸ್​ ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ; ಏನಿದು ಕಿರಿಕ್​?

Follow us on

Click on your DTH Provider to Add TV9 Kannada