ಬಾಲಿವುಡ್​ನಲ್ಲಿ ಹಾಸಿಗೆಯನ್ನೇ ಉದ್ದ ಮಾಡಿ ಕಾಲು ಚಾಚಿದ ರಾಕಿ; ‘ಟೈಗರ್..’, ‘ಪಿಕೆ’ ಕಲೆಕ್ಷನ್ ಹಿಂದಿಕ್ಕಿದ ‘ಕೆಜಿಎಫ್ 2’

ಬಾಲಿವುಡ್​ನಲ್ಲಿ ಹಾಸಿಗೆಯನ್ನೇ ಉದ್ದ ಮಾಡಿ ಕಾಲು ಚಾಚಿದ ರಾಕಿ; ‘ಟೈಗರ್..’, ‘ಪಿಕೆ’ ಕಲೆಕ್ಷನ್ ಹಿಂದಿಕ್ಕಿದ ‘ಕೆಜಿಎಫ್ 2’
ಯಶ್

‘ಕೆಜಿಎಫ್ 2’ ಸಿನಿಮಾ ಬುಧವಾರ 6.25 ಕೋಟಿ ಕಲೆಕ್ಷನ್ ಮಾಡಿದೆ. ಒಂದು ಸಿನಿಮಾ ರಿಲೀಸ್ ಆಗಿ ಮೂರನೇ ವಾರ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ

TV9kannada Web Team

| Edited By: Rajesh Duggumane

Apr 28, 2022 | 2:21 PM

‘ನಾವೇಕೆ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು?. ಹಾಸಿಗೆಯನ್ನೇ ಉದ್ದ ಮಾಡಿಕೊಳ್ಳೋಣ’- ಇದು ‘ಕೆಜಿಎಫ್: ಚಾಪ್ಟರ್​ 2’ನಲ್ಲಿ(KGF Chapter 2)  ಬರುವ ಒಂದು ಡೈಲಾಗ್​. ಬಾಕ್ಸ್ ಆಫೀಸ್ (Box Office)​ ವಿಚಾರದಲ್ಲಿ ಇದು ಅಕ್ಷರಶಃ ಸತ್ಯವಾಗುತ್ತಿದೆ. ಬಾಲಿವುಡ್​ ಅಂಗಳದಲ್ಲಿ ರಾಕಿ ಹಾಸಿಗೆಯನ್ನೇ ಉದ್ದ ಮಾಡಿಕೊಂಡು ಕಾಲು ಚಾಚುತ್ತಿದ್ದಾನೆ. ಬಾಲಿವುಡ್ ಮಂದಿ ಮಾಡಿದ್ದ ಅನೇಕ ದಾಖಲೆಗಳು ‘ಕೆಜಿಎಫ್: ಚಾಪ್ಟರ್​ 2’ ಅಬ್ಬರಕ್ಕೆ ಪುಡಿಪುಡಿ ಆಗಿವೆ. ಸ್ಟಾರ್ ನಟರು ಮಾಡಿದ ದಾಖಲೆಯನ್ನು ಯಶ್ ಸಿನಿಮಾ ಹಿಂದಿಕ್ಕಿದೆ. ಬುಧವಾರದ (ಏಪ್ರಿಲ್ 27) ಕಲೆಕ್ಷನ್ ರಿಪೋರ್ಟ್​ ಹೊರಬಿದ್ದಿದ್ದು, ಮತ್ತೊಂದಷ್ಟು ದಾಖಲೆಗಳು ಸೃಷ್ಟಿ ಆಗಿವೆ.

‘ಕೆಜಿಎಫ್ 2’ ಸಿನಿಮಾ ಬುಧವಾರ 6.25 ಕೋಟಿ ಕಲೆಕ್ಷನ್ ಮಾಡಿದೆ. ಒಂದು ಸಿನಿಮಾ ರಿಲೀಸ್ ಆಗಿ ಮೂರನೇ ವಾರ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಸದ್ಯ, ಯಶ್ ಸಿನಿಮಾ ಒಟ್ಟೂ 343.13 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

‘ಸಂಜು’ (342.53), ‘ಟೈಗರ್​ ಜಿಂದಾ ಹೈ’ (339.16), ‘ಪಿಕೆ’ (340 ಕೋಟಿ ರೂಪಾಯಿ) ಸಿನಿಮಾಗಳನ್ನು ‘ಕೆಜಿಎಫ್ 2’ ಹಿಂದಿಕ್ಕಬಹುದು ಎಂದು ಊಹಿಸಲಾಗಿತ್ತು. ಇದು ನಿಜವಾಗಿದೆ. ಒಂದೇ ದಿನದಲ್ಲಿ ಈ ಮೂರು ಸಿನಿಮಾಗಳನ್ನು ‘ಕೆಜಿಎಫ್ 2’ ಕ್ರಾಸ್ ಮಾಡಿಕೊಂಡು ಮುಂದೆ ಸಾಗಿದೆ. ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎಂದರೆ ಅದು ಆಮಿರ್ ಖಾನ್ ನಟನೆಯ ‘ದಂಗಲ್’. ಈ ಚಿತ್ರ ಬಾಲಿವುಡ್​ನಲ್ಲಿ 387 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದನ್ನು ‘ಕೆಜಿಎಫ್ 2’ ಹಿಂದಿಕ್ಕಲಿದೆಯೇ ಎನ್ನುವ ಪ್ರಶ್ನೆ ಸದ್ಯದ್ದು. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಇದೆ. ಈ ಚಿತ್ರ ಹಿಂದಿಯಲ್ಲಿ 510 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದು ಸದ್ಯಕ್ಕಂತೂ ಯಾವ ಚಿತ್ರದಿಂದಲೂ ಸಾಧ್ಯವಿಲ್ಲ.

‘ಕೆಜಿಎಫ್ 2’ ರಿಲೀಸ್ ಆಗಿ ಒಂದು ವಾರದ ಬಳಿಕ ತೆರೆಗೆ ಬಂದ ‘ಜೆರ್ಸಿ’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳು ಸಿಕ್ಕವು. ಇದರಿಂದ ಸಿನಿಮಾ ತೀವ್ರ ಗತಿಯಲ್ಲಿ ಸೊರಗಿದೆ. ಮೊದಲ ದಿನ ಈ ಚಿತ್ರ ಗಳಿಸಿದ್ದು ಕೇವಲ 3.75 ಕೋಟಿ ರೂಪಾಯಿ. ಮೊದಲ ವಾರಾಂತ್ಯಕ್ಕೆ ಈ ಸಿನಿಮಾ 14.75 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿತ್ತು. ಸೋಮವಾರದ ಚಿತ್ರ 2 ಕೋಟಿ ರೂಪಾಯಿಗೂ ಕಡಿಮೆ ಕಮಾಯಿ ಮಾಡಿತ್ತು.

ಇದನ್ನೂ ಓದಿ: ರಜೆಯ ಮೂಡ್​ನಲ್ಲಿ ‘ಕೆಜಿಎಫ್ 2’ ತಂಡ; ವೈರಲ್​ ಆಗುತ್ತಿವೆ ಫೋಟೋಗಳು

‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ

Follow us on

Related Stories

Most Read Stories

Click on your DTH Provider to Add TV9 Kannada