KGF 3: ‘ಇನ್ನೂ ಭರ್ಜರಿಯಾದ ದೃಶ್ಯಗಳಿವೆ’: ‘ಕೆಜಿಎಫ್​ 3’ ಬಗ್ಗೆ ಮಾಹಿತಿ ಬಹಿರಂಗ ಮಾಡಿದ ಯಶ್​​

Yash | KGF 3: ‘ಕೆಜಿಎಫ್​: ಚಾಪ್ಟರ್​ 3’ ಸಿನಿಮಾ ಆದಷ್ಟು ಬೇಗ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್​ ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಬಗ್ಗೆಯೂ ಅಭಿಮಾನಿಗಳಿಗೆ ಕಾತರ ಇದೆ.

KGF 3: ‘ಇನ್ನೂ ಭರ್ಜರಿಯಾದ ದೃಶ್ಯಗಳಿವೆ’: ‘ಕೆಜಿಎಫ್​ 3’ ಬಗ್ಗೆ ಮಾಹಿತಿ ಬಹಿರಂಗ ಮಾಡಿದ ಯಶ್​​
ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 27, 2022 | 8:03 AM

ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಯಶಸ್ಸು ಸಾಧಿಸಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್​ ಆದ ಈ ಸಿನಿಮಾವನ್ನು ಎಲ್ಲ ಭಾಷೆಯ ಜನರು ಇಷ್ಟಪಟ್ಟಿದ್ದಾರೆ. ನಟ ಯಶ್​ (Rocking Star Yash) ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅನೇಕ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಅವರ ಸಂದರ್ಶನ ಮಾಡುತ್ತಿವೆ. ‘ಕೆಜಿಎಫ್​’ ಸಿನಿಮಾ ಅನೌನ್ಸ್​ ಆದಾಗ ಅದು ಎರಡು ಪಾರ್ಟ್​ನಲ್ಲಿ ಬರುತ್ತದೆ ಎಂಬುದು ತಿಳಿದಿರಲಿಲ್ಲ. ಅದೇ ರೀತಿ ‘ಕೆಜಿಎಫ್​: ಚಾಪ್ಟರ್ 2’ ರಿಲೀಸ್​ ಆಗೋದಕ್ಕಿಂತ ಮುನ್ನ ‘ಕೆಜಿಎಫ್​ 3’ (KGF 3) ಬಗ್ಗೆ ಪ್ರೇಕ್ಷಕರಿಗೆ ಕಲ್ಪನೆ ಇರಲಿಲ್ಲ. ‘ಕೆಜಿಎಫ್​ 2’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ‘ಕೆಜಿಎಫ್​: ಚಾಪ್ಟರ್​ 3’ ಬಗ್ಗೆ ಹಿಂಟ್​ ನೀಡಲಾಗಿದೆ. ಹಾಗಾಗಿ ಎಲ್ಲರೂ 3ನೇ ಚಾಪ್ಟರ್​ ಸಲುವಾಗಿ ಕಾಯುವಂತಾಗಿದೆ. ಈ ಸಿನಿಮಾ ಬಗ್ಗೆ ‘ಹೊಂಬಾಳೆ ಫಿಲ್ಮ್ಸ್​’ ಕಡೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಅಷ್ಟರಲ್ಲಾಗಲೇ ಯಶ್​ ಅವರು ಒಂದು ವಿಚಾರವನ್ನು ಬಾಯಿಬಿಟ್ಟಿದ್ದಾರೆ. ‘ವೆರೈಟಿ’ ಮ್ಯಾಗಜಿನ್​ಗೆ ನೀಡಿದ ಸಂದರ್ಶನದಲ್ಲಿ ಅವರು ‘ಕೆಜಿಎಫ್​: ಚಾಪ್ಟರ್​ 3’ ಬಗ್ಗೆ ಮಾತನಾಡಿದ್ದಾರೆ.

‘ನಾವು ಕೆಜಿಎಫ್​ ಚಾಪ್ಟರ್​ 2 ಸಿನಿಮಾದಲ್ಲಿ ತೋರಿಸಲು ಆಗದೇ ಇರುವ ಹಲವು ವಿಷಯಗಳು ಇವೆ. ಪ್ರಶಾಂತ್​ ನೀಲ್​ ಮತ್ತು ನಾನು ಸಾಕಷ್ಟು ದೃಶ್ಯಗಳ ಬಗ್ಗೆ ಯೋಚಿಸಿದ್ದೇವೆ. ಇನ್ನೂ ಅನೇಕ ಸಾಧ್ಯತೆಗಳಿವೆ ಎಂಬುದು ನಮಗೆ ತಿಳಿದಿದೆ. ಭರ್ಜರಿಯಾದ ದೃಶ್ಯಗಳಿವೆ. ಆದರೆ ಅದೆಲ್ಲವೂ ಒಂದು ಐಡಿಯಾ ಅಷ್ಟೇ. ಸದ್ಯಕ್ಕೆ ಅದನ್ನು ಹಾಗೆಯೇ ಇಟ್ಟಿದ್ದೇವೆ’ ಎಂದು ಯಶ್​ ಹೇಳಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 3’ ಸಿನಿಮಾ ಆದಷ್ಟು ಬೇಗ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್​ ಒಪ್ಪಿಕೊಳ್ಳಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆಯೂ ಅಭಿಮಾನಿಗಳಿಗೆ ಕಾತರ ಇದೆ. ಇತ್ತೀಚೆಗೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸನ್ನು ಇಡೀ ತಂಡ ಸೆಲೆಬ್ರೇಟ್​ ಮಾಡಿದೆ. ಈ ವೇಳೆ ಕತ್ತರಿಸಿದ ಕೇಕ್​ನಲ್ಲಿ ‘ಇದು ಕೇವಲ ಆರಂಭ ಮಾತ್ರ’ ಎಂದು ಬರೆದಿರುವುದು ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಹಾಗಾಗಿ ಯಶ್​, ಪ್ರಶಾಂತ್​ ನೀಲ್​, ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಬರುವ ಪ್ರತಿ ಅಪ್​ಡೇಟ್​ಗಾಗಿ ಸಿನಿಪ್ರಿಯರು ಕಾದಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಲ್ಲಿನ ಮಾರುಕಟ್ಟೆ ತುಂಬ ಚಿಕ್ಕದು ಎಂದು ಹೇಳಲಾಗುತ್ತಿತ್ತು. ಆ ಬಗ್ಗೆಯೂ ಯಶ್​ ಅವರು ಮಾತನಾಡಿದ್ದಾರೆ. ‘ಒಂದು ಹೆಜ್ಜೆಯಿಂದಾಗಿ ನಮ್ಮ ಚಿತ್ರರಂಗದಲ್ಲಿ ಬದಲಾವಣೆ ಸಾಧ್ಯವಾಗಿದೆ. ದೇಶದ ಎಲ್ಲ ಮೂಲೆಗಳಲ್ಲೂ ಜನರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ’ ಎಂದು ಯಶ್​ ಹೇಳಿದ್ದಾರೆ.

ವಿಶ್ವಾದ್ಯಂತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಚಿತ್ರದ ಒಟ್ಟು ಕಲೆಕ್ಷನ್​ ಸಾವಿರ ಕೋಟಿ ರೂಪಾಯಿ ಸಮೀಪದಲ್ಲಿದೆ. ಕೇವಲ ಹಿಂದಿ ವರ್ಷನ್​ನಿಂದಲೇ 300 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಆಗಿದೆ. ಇದರಿಂದ ಯಶ್​ ವೃತ್ತಿ ಜೀವನಕ್ಕೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಅವರ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಚಿತ್ರದ ಗೆಲುವಿಗೆ ಕಾರಣರಾದ ಎಲ್ಲ ಪ್ರೇಕ್ಷಕರಿಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಇತ್ತೀಚೆಗೆ ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ:

‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?

‘ಬಾಲಿವುಡ್​ ಮೇಲೆ ಸ್ಯಾಂಡಲ್​ವುಡ್​ ಎಸೆದ ಅಣುಬಾಂಬ್​ ಇದು’: ಯಶ್​ ಗೆಲುವನ್ನು ಹೀಗೆ ವರ್ಣಿಸಿದ ಆರ್​ಜಿವಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ