‘ಬಾಲಿವುಡ್​ ಮೇಲೆ ಸ್ಯಾಂಡಲ್​ವುಡ್​ ಎಸೆದ ಅಣುಬಾಂಬ್​ ಇದು’: ಯಶ್​ ಗೆಲುವನ್ನು ಹೀಗೆ ವರ್ಣಿಸಿದ ಆರ್​ಜಿವಿ

Ram Gopal Varma | Yash: ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಯಶ್​ಗೆ ಅವರು ಭರಪೂರ ಮೆಚ್ಚುಗೆ ನೀಡಿದ್ದಾರೆ.

‘ಬಾಲಿವುಡ್​ ಮೇಲೆ ಸ್ಯಾಂಡಲ್​ವುಡ್​ ಎಸೆದ ಅಣುಬಾಂಬ್​ ಇದು’: ಯಶ್​ ಗೆಲುವನ್ನು ಹೀಗೆ ವರ್ಣಿಸಿದ ಆರ್​ಜಿವಿ
ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 16, 2022 | 11:32 AM

ಈಗ ಎಲ್ಲ ಕಡೆಯೂ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಸುದ್ದಿಯೇ ಕೇಳಿಬರುತ್ತಿದೆ. ಎಲ್ಲ ಸಿನಿಪ್ರಿಯರ ವಲಯದಲ್ಲೂ ಈ ಚಿತ್ರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕನ್ನಡ ಚಿತ್ರವೊಂದು ಹೀಗೆ ರಾಷ್ಟ್ರಮಟ್ಟದಲ್ಲಿ ಗೆದ್ದು ಬೀಗಿರುವುದಕ್ಕೆ ಪರಭಾಷೆ ಸಿನಿಮಂದಿ ಬೆರಗಾಗಿದ್ದಾರೆ. ಮೊದಲ ದಿನವೇ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಗಳಿಸಿರುವುದು ಈ ಚಿತ್ರದ ಹೆಚ್ಚುಗಾರಿಕೆ. ನಟ ಯಶ್​ (Yash) ಅವರಿಗೆ ‘ಕೆಜಿಎಫ್​ 2’ ಸಿನಿಮಾದಿಂದ ಬೃಹತ್ ಗೆಲುವು ಸಿಕ್ಕಿದೆ. ಈ ಯಶಸ್ಸಿನ ಬಗ್ಗೆ ಭಾರತೀಯ ಚಿತ್ರರಂಗದ ಅನೇಕರು ಮಾತನಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತಂಡ ಮಾಡಿರುವ ಸಾಧನೆಯನ್ನು ಹಲವು ಸೆಲೆಬ್ರಿಟಿಗಳು ಕೊಂಡಾಡುತ್ತಿದ್ದಾರೆ. ಈಗ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಬಾಲಿವುಡ್​ ಎದುರು ಕನ್ನಡ ಚಿತ್ರರಂಗ ಹೇಗೆ ಬೆಳೆದು ನಿಂತಿದೆ ಎಂಬುದನ್ನು ಅವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.

‘ಕೆಜಿಎಫ್​’ ಸಿನಿಮಾದಲ್ಲಿ ರಾಕಿ ಮುಂಬೈಗೆ ಹೋಗಿ ತನ್ನ ಪ್ರಾಬಲ್ಯ ಮೆರೆಯುತ್ತಾನೆ. ರಿಯಲ್​ ಲೈಫ್​ನಲ್ಲಿಯೂ ಹಾಗೆಯೇ ಆಗಿದೆ ಎಂಬುದು ರಾಮ್​ ಗೋಪಾಲ್​ ವರ್ಮಾ ಅವರ ಅಭಿಪ್ರಾಯ. ‘ವಿಲನ್​ಗಳಿಗೆ ಗುಂಡಿಕ್ಕಲು ರಾಕಿ ಭಾಯ್​ ಹೇಗೆ ಮುಂಬೈಗೆ ಬರುತ್ತಾನೋ ಅದೇ ರೀತಿಯಲ್ಲಿ ಬಾಲಿವುಡ್​ ಸ್ಟಾರ್​ ನಟರ ಓಪನಿಂಗ್​ ಕಲೆಕ್ಷನ್​ಗೆ ಯಶ್​ ಗುಂಡಿಕ್ಕುತ್ತಿದ್ದಾರೆ. ಈ ಚಿತ್ರದ ಟೋಟಲ್​ ಗಳಿಕೆಯು ಬಾಲಿವುಡ್​ ಮೇಲೆ ಕನ್ನಡ ಚಿತ್ರರಂಗ ಎಸೆಯುವ ಅಣುಬಾಂಬ್​ ಆಗಿರಲಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

‘ಪ್ರಶಾಂತ್​ ನೀಲ್ ನಿರ್ದೇಶನ ಮಾಡಿರುವ ‘ಕೆಜಿಎಫ್​ 2’ ಒಂದು ಗ್ಯಾಂಗ್​ಸ್ಟರ್​ ಸಿನಿಮಾ ಮಾತ್ರವಲ್ಲ, ಬಾಲಿವುಡ್​ ಚಿತ್ರರಂಗದವರಿಗೆ ಇದು ಒಂದು ಹಾರರ್​ ಸಿನಿಮಾ. ಈ ಚಿತ್ರದ ಗೆಲುವು ಬಾಲಿವುಡ್​ನವರಿಗೆ ಹಲವು ವರ್ಷಗಳ ಕಾಲ ದುಸ್ವಪ್ನವಾಗಿ ಕಾಡಲಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ. ‘ಹಿಂದಿ ಚಿತ್ರರಂಗದ ವಿಚಾರ ಬಿಟ್ಟುಬಿಡಿ. ತಮಿಳು ಮತ್ತು ತೆಲುಗು ಚಿತ್ರರಂಗದವರು ಕೂಡ ಕೆಜಿಎಫ್​ ಸಿನಿಮಾ ಬರುವವರೆಗೆ ಕನ್ನಡ ಫಿಲ್ಮ್​ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಆರ್​ಜಿವಿ ಹೇಳಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಗೆಲುವಿನಿಂದಾಗಿ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಆಗಿದೆ. ಯಶ್​ ಅವರ ಮಾರುಕಟ್ಟೆ ವಿಸ್ತಾರ ಆಗಿದೆ. ಈ ಚಿತ್ರದಲ್ಲಿ ಸಂಜಯ್​ ದತ್​, ರವೀನಾ ಟಂಡನ್​, ಪ್ರಕಾಶ್​ ರಾಜ್​, ರಾವ್​ ರಮೇಶ್​ ಮುಂತಾದ ಸ್ಟಾರ್​ ಕಲಾವಿದರು ನಟಿಸಿದ್ದಾರೆ. ಯಶ್​ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಧೂಳೆಬ್ಬಿಸುತ್ತಿರುವುದರಿಂದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭಾರೀ ಪ್ರಮಾಣದ ಲಾಭ ಆಗುತ್ತಿದೆ. ಹಿಂದಿ ಅವತರಣಿಕೆಯಲ್ಲಿ ‘ಕೆಜಿಎಫ್​ 2’ ಸಿನಿಮಾ ಅತಿ ಹೆಚ್ಚು ಕಲೆಕ್ಷನ್​ ಮಾಡುತ್ತಿದೆ. ದಕ್ಷಿಣ ಭಾರತದಲ್ಲೂ ಇದರ ನಾಗಾಲೋಟ ಮುಂದುವರಿದಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಎದುರು ‘ಬೀಸ್ಟ್​’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಆ ಚಿತ್ರಕ್ಕಿಂತಲೂ ‘ಕೆಜಿಎಫ್​ 2’ ಚೆನ್ನಾಗಿದೆ ಎಂದು ಸ್ವತಃ ತಮಿಳುನಾಡಿನ ಸಿನಿಪ್ರಿಯರೇ ಹೇಳುತ್ತಿದ್ದಾರೆ. ಹಾಗಾಗಿ ಅಲ್ಲಿಯೂ ಈ ಚಿತ್ರ ಸೂಪರ್​ ಹಿಟ್​ ಆಗಿದೆ. ಚಿತ್ರದ ಟೋಟಲ್​ ಕಲೆಕ್ಷನ್​ ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ಬ್ಲಾಕ್​ ಬಸ್ಟರ್​ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್​?

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ