‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ
ಬಹು ನಿರೀಕ್ಷಿತ ಸಿನಿಮಾಗಳು ಎಂದಮೇಲೆ ಸಿನಿಮಾದಲ್ಲಿ ನಟಿಸಿದ ಕಲಾವಿದರು ದೊಡ್ಡ ಮಟ್ಟದ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಾರೆ. ‘ಕೆಜಿಎಫ್’ ಹಿಟ್ ಆದ ಹಿನ್ನೆಲೆಯಲ್ಲಿ ‘ಕೆಜಿಎಫ್ 2’ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಹೀಗಾಗಿ, ಎಲ್ಲಾ ಕಲಾವಿದರು ಹೆಚ್ಚು ಹಣ ಪಡೆದಿದ್ದಾರೆ.
‘ಕೆಜಿಎಫ್ 2’ ಚಿತ್ರದಿಂದ (KGF Chapter 2) ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಬಂಗಾರದ ಬೆಳೆ ತೆಗೆದಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಗಳಿಕೆ ಮುಂದುವರಿಯುತ್ತಲೇ ಇದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು ಇಷ್ಟು ದೊಡ್ಡ ಮಟ್ಟದ ಬಿಸ್ನೆಸ್ ಮಾಡಿದ್ದು ನಿಜಕ್ಕೂ ಹೆಮ್ಮೆಯೇ ಸರಿ. ಈ ಚಿತ್ರದಲ್ಲಿ ಯಶ್ (Yash) ಹೀರೋ ಆಗಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಅಧೀರನ ಪಾತ್ರದಲ್ಲಿ ಸಂಜಯ್ ದತ್ (Sanjay Dutt) ಕಾಣಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಪಾತ್ರವನ್ನು ರವೀನಾ ಟಂಡನ್ ಅದ್ಭುತವಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಇವರು ಪಡೆದಿರುವ ಸಂಭಾವನೆ ಎಷ್ಟು ಎನ್ನುವ ವಿಚಾರ ಈಗ ಹೊರ ಬಿದ್ದಿದೆ.
ಬಹು ನಿರೀಕ್ಷಿತ ಸಿನಿಮಾಗಳು ಎಂದಮೇಲೆ ಸಿನಿಮಾದಲ್ಲಿ ನಟಿಸಿದ ಕಲಾವಿದರು ದೊಡ್ಡ ಮಟ್ಟದ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಾರೆ. ‘ಕೆಜಿಎಫ್’ ಹಿಟ್ ಆದ ಹಿನ್ನೆಲೆಯಲ್ಲಿ ‘ಕೆಜಿಎಫ್ 2’ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಹೀಗಾಗಿ, ಎಲ್ಲಾ ಕಲಾವಿದರು ಹೆಚ್ಚು ಹಣ ಪಡೆದಿದ್ದಾರೆ. ಇವರು ಪಡೆದ ಸಂಭಾವನೆ ಎಷ್ಟು ಎಂಬ ಬಗ್ಗೆ ನ್ಯೂಸ್18 ಇಂಗ್ಲಿಷ್ ವರದಿ ಪ್ರಕಟ ಮಾಡಿದೆ.
- ಯಶ್: ಯಶ್ ಅವರು ‘ಕೆಜಿಎಫ್ 2’ ಚಿತ್ರವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ರಾಕಿ ಪಾತ್ರಕ್ಕೆ ಅವರು 30 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ.
- ಸಂಜಯ್ ದತ್: ನಟ ಸಂಜಯ್ ದತ್ ಅವರು ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಅವರು ಅಧೀರನ ಪಾತ್ರಕ್ಕೆ 9 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.
- ಶ್ರೀನಿಧಿ ಶೆಟ್ಟಿ: ಶ್ರೀನಿಧಿ ಶೆಟ್ಟಿ ಅವರ ಪಾತ್ರ ಎರಡನೇ ಚಾಪ್ಟರ್ನಲ್ಲಿ ಹೆಚ್ಚು ಸ್ಕ್ರೀನ್ಸ್ಪೇಸ್ ಪಡೆದುಕೊಂಡಿದೆ. ಅವರಿಗೆ 2-3 ಕೋಟಿ ರೂಪಾಯಿ ಸಿಕ್ಕಿದೆಯಂತೆ.
- ರವೀನಾ ಟಂಡನ್: ಪ್ರಧಾನಿ ರಮಿಕಾ ಸೇನ್ ಆಗಿ ರವೀನಾ ಮಿಂಚಿದ್ದಾರೆ. ಅವರ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಅವರ ಪಾತ್ರ ದ್ವಿತೀಯಾರ್ಧದಿಂದ ಆರಂಭ ಆಗುತ್ತದೆ. ಅವರು 1.5 ಕೋಟಿ ರೂಪಾಯಿ ಪಡೆದಿದ್ದಾರೆ.
- ಪ್ರಕಾಶ್ ರಾಜ್: ‘ಕೆಜಿಎಫ್ 2’ನ ನಿರೂಪಣೆ ಜವಾಬ್ದಾರಿಯನ್ನು ಪ್ರಕಾಶ್ ರಾಜ್ ಹೊತ್ತಿದ್ದರು. ವಿಜಯೇಂದ್ರ ಇಂಗಳಗಿಯಾಗಿ ಗಮನ ಸೆಳೆದಿದ್ದರು. ಅವರು 80-82 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ.
- ಮಾಳವಿಕಾ ಅವಿನಾಶ್: ಮಾಳವಿಕಾ ಅವಿನಾಶ್ ಅವರು ದೀಪಾ ಹೆಗ್ಡೆ ಆಗಿ ಕಾಣಿಸಿಕೊಂಡಿದ್ದಾರೆ. ಸುದ್ದಿ ವಾಹಿನಿಯ ಮುಖ್ಯ ಸಂಪಾದಕಿಯ ಪಾತ್ರವನ್ನು ಅವರು ಮಾಡಿದ್ದಾರೆ. ಅವರ ಸಂಭಾವನೆ 10-20 ಲಕ್ಷ ರೂಪಾಯಿ ಇದೆ.
- ಅನಂತ್ ನಾಗ್: ಆನಂದ್ ಇಂಗಳಗಿ ಪಾತ್ರ ಮಾಡಿದ ಅನಂತ್ ನಾಗ್ ಅವರು ಮೊದಲ ಚಾಪ್ಟರ್ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಅವರು 50 ಲಕ್ಷ ರೂಪಾಯಿ ರೆಮ್ಯುನರೇಷನ್ ಪಡೆದಿದ್ದಾರೆ ಎನ್ನಲಾಗಿದೆ.
- ಪ್ರಶಾಂತ್ ನೀಲ್: ಇಡೀ ಸಿನಿಮಾದ ಚುಕ್ಕಾಣಿ ಹಿಡಿದಿರುವ ಪ್ರಶಾಂತ್ ನೀಲ್ ಅವರು 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕನ್ನಡದ ನಿರ್ದೇಶಕರೊಬ್ಬರು ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದು ಇದೇ ಮೊದಲು.
ಇದನ್ನೂ ಓದಿ: ಅರುಣ್ ಸಾಗರ್ ಪುತ್ರಿಯ ‘ಕೆಜಿಎಫ್ 2’ ಸಾಂಗ್ ಸೂಪರ್ ಹಿಟ್; ಒಂದು ದಿನದೊಳಗೆ 4.7 ಮಿಲಿಯನ್ ವೀಕ್ಷಣೆ
‘ಕೆಜಿಎಫ್ ರೀತಿಯ ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಹೆಚ್ಚಿಸಿ’: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ
Published On - 3:05 pm, Mon, 25 April 22