‘ಕೆಜಿಎಫ್ ರೀತಿಯ ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಹೆಚ್ಚಿಸಿ’: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ
‘ಕೆಜಿಎಫ್: ಚಾಪ್ಟರ್ 2’ ಚಿತ್ರ ಎಲ್ಲರಿಗೂ ಒಂದು ಮಾದರಿಯನ್ನು ಹಾಕಿಕೊಟ್ಟಿದೆ. ಈ ಚಿತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ಸೂಚಿಸಿದ್ದಾರೆ.
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರದಿಂದಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ (Sandalwood) ಬಾವುಟ ಎತ್ತರಕ್ಕೆ ಹಾರುವಂತಾಗಿದೆ. ವಿಶ್ವಾದ್ಯಂತ ಈ ಚಿತ್ರ ಅತ್ಯುತ್ತಮ ಕಲೆಕ್ಷನ್ ಮಾಡಿದೆ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿಗೆ ಡಬ್ ಆಗಿ ಬಿಡುಗಡೆ ಆದ ಈ ಸಿನಿಮಾವನ್ನು ಎಲ್ಲ ಭಾಷೆಯ ಜನರು ಮನಸಾರೆ ಮೆಚ್ಚಿಕೊಂಡಿದ್ದಾರೆ. ‘ಕೆಜಿಎಫ್ 2’ ಚಿತ್ರದ ಸಾಧನೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka CM Basavaraj Bommai) ಅವರು ಕೊಂಡಾಡಿದ್ದಾರೆ. ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಗುಣಮಟ್ಟದ ಸಿನಿಮಾಗಳನ್ನು ಮಾಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರೇರಣೆ ನೀಡಬೇಕು. ಈಗ ಕಾಲ ಬದಲಾಗಿದೆ. ಕರ್ನಾಟಕ ಮಾತ್ರವಲ್ಲದೇ ವಿಶ್ವಾದ್ಯಂತ ಜನರು ಕನ್ನಡ ಸಿನಿಮಾ ನೋಡುತ್ತಾರೆ. ‘ಕೆಜಿಎಫ್ 2’ ರೀತಿಯ ಕ್ವಾಲಿಟಿಯಲ್ಲಿ ಎಲ್ಲ ಚಿತ್ರಗಳು ಮೂಡಿಬರಲಿ. ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣದ ಕಾರ್ಯವನ್ನು ಈ ವರ್ಷ ಆರಂಭ ಮಾಡಿಸುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ:
ಅರುಣ್ ಸಾಗರ್ ಪುತ್ರಿಯ ‘ಕೆಜಿಎಫ್ 2’ ಸಾಂಗ್ ಸೂಪರ್ ಹಿಟ್; ಒಂದು ದಿನದೊಳಗೆ 4.7 ಮಿಲಿಯನ್ ವೀಕ್ಷಣೆ
‘ಕೆಜಿಎಫ್: ಚಾಪ್ಟರ್ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್ ಫ್ಯಾನ್ಸ್ ತಕರಾರು