ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ರೂ. ಬಾಚಿದ ‘ಕೆಜಿಎಫ್​ 2’: ಇನ್ನೂ ನಿಂತಿಲ್ಲ ರಾಕಿ ಭಾಯ್​ ಆರ್ಭಟ

ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ರೂ. ಬಾಚಿದ ‘ಕೆಜಿಎಫ್​ 2’: ಇನ್ನೂ ನಿಂತಿಲ್ಲ ರಾಕಿ ಭಾಯ್​ ಆರ್ಭಟ
ಯಶ್​

KGF Chapter 2 Hindi Box Office Collection: ಹಿಂದಿಯಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಕೆಲವೇ ಸಿನಿಮಾಗಳ ಸಾಲಿಗೆ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಕೂಡ ಸೇರ್ಪಡೆ ಆಗಿದೆ. ಯಶ್​ ಖ್ಯಾತಿ ಇನ್ನಷ್ಟು ಹೆಚ್ಚಿದೆ.

TV9kannada Web Team

| Edited By: Madan Kumar

Apr 24, 2022 | 1:59 PM

ಎಲ್ಲ ನಿರೀಕ್ಷೆಗಳನ್ನೂ ಮೀರಿ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಯಶಸ್ವಿ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಹಲವು ದಾಖಲೆಗಳನ್ನು ಮಾಡಿದೆ. ಬಿಡುಗಡೆಯಾಗಿ 11 ದಿನ ಕಳೆದಿದ್ದರೂ ‘ಕೆಜಿಎಫ್​ 2’ ಚಿತ್ರದ ಆರ್ಭಟ ಕಮ್ಮಿ ಆಗಿಲ್ಲ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೂ ಡಬ್​ ಆಗಿ ಈ ಸಿನಿಮಾ ರಿಲೀಸ್​ ಆಗಿದೆ. ಹಿಂದಿ ಪ್ರೇಕ್ಷಕರು ಈ ಸಿನಿಮಾವನ್ನು ಸಖತ್​ ಮೆಚ್ಚುಕೊಂಡಿದ್ದಾರೆ. ಉತ್ತರ ಭಾರತದ ಸಿನಿಪ್ರಿಯರು ಮುಗಿಬಿದ್ದು ನೋಡಿದ್ದಾರೆ. ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹಿಂದಿ ಕಲೆಕ್ಷನ್ (KGF Chapter 2 Hindi Box Office Collection)​ ಬರೋಬ್ಬರಿ 300 ಕೋಟಿ ರೂ. ದಾಟಿದೆ. ಈ ಕುರಿತು ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿ ದಿನ ಈ ಚಿತ್ರ ಗಳಿಸಿದ ಹಣ ಎಷ್ಟು ಎಂಬುದನ್ನು ಅವರು ವಿವರಿಸಿದ್ದಾರೆ. ಹಿಂದಿ ಮಾರುಕಟ್ಟೆಯಲ್ಲಿ ಒಂದು ಡಬ್ಬಿಂಗ್​ ಸಿನಿಮಾ 300 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವುದು ಎಂದರೆ ಸಣ್ಣ ಮಾತಲ್ಲ. ಆ ಸಾಧನೆಯನ್ನು ಯಶ್​ (Yash) ಮಾಡಿ ತೋರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.

ಏ.14ರಂದು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಬಿಡುಗಡೆ ಆಯಿತು. ಮೊದಲ ದಿನ ಹಿಂದಿ ವರ್ಷನ್​ನಿಂದ ಈ ಸಿನಿಮಾಗೆ ಕಮಾಯಿ ಆಗಿದ್ದು 53.95 ಕೋಟಿ ರೂಪಾಯಿ. ಅಂದಿನಿಂದ ಇಂದಿನವರೆಗೆ (ಏ.24) ಭರ್ಜರಿ ಕಲೆಕ್ಷನ್​ ಆಗಿದೆ. 11ನೇ ದಿನಕ್ಕೆ ಕಾಲಿಟ್ಟರೂ ಕೂಡ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರ ಮಾಡಿದ ಪ್ರತಿದಿನದ ಕಲೆಕ್ಷನ್​ ಲೆಕ್ಕಾಚಾರ ಇಲ್ಲಿದೆ..

1ನೇ ದಿನ: 53.95 ಕೋಟಿ ರೂಪಾಯಿ

2ನೇ ದಿನ: 46.79 ಕೋಟಿ ರೂಪಾಯಿ

3ನೇ ದಿನ: 42.90 ಕೋಟಿ ರೂಪಾಯಿ

4ನೇ ದಿನ: 50.35 ಕೋಟಿ ರೂಪಾಯಿ

5ನೇ ದಿನ: 25.57 ಕೋಟಿ ರೂಪಾಯಿ

6ನೇ ದಿನ: 19.14 ಕೋಟಿ ರೂಪಾಯಿ

7ನೇ ದಿನ: 16.35 ಕೋಟಿ ರೂಪಾಯಿ

8ನೇ ದಿನ: 13.58 ಕೋಟಿ ರೂಪಾಯಿ

9ನೇ ದಿನ: 11.56 ಕೋಟಿ ರೂಪಾಯಿ

10ನೇ ದಿನ: 18.25 ಕೋಟಿ ರೂಪಾಯಿ

10 ದಿನಗಳವರೆಗೆ ಹಿಂದಿಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಒಟ್ಟು ಕಲೆಕ್ಷನ್​ 298.44 ಕೋಟಿ ರೂಪಾಯಿ. 11ನೇ ದಿನವಾದ ಇಂದು (ಏ.24) ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಬರಲಿದ್ದಾರೆ. ಭಾನುವಾರ ಅನಾಯಾಸವಾಗಿ ಈ ಚಿತ್ರ 300 ಕೋಟಿ ರೂ. ಗಡಿ ದಾಟಿದೆ. ಆ ಮೂಲಕ ತ್ರಿಶತಕದ ಕ್ಲಬ್​ ಸೇರಿದ ಕೆಲವೇ ಕೆಲವು ಸಿನಿಮಾಗಳ ಸಾಲಿಗೆ ‘ಕೆಜಿಎಫ್ 2’ ಕೂಡ ಸೇರ್ಪಡೆ ಆದಂತಾಗಿದೆ.

ಪ್ರಶಾಂತ್​ ನೀಲ್ ನಿರ್ದೇಶನದ ಈ ಚಿತ್ರಕ್ಕೆ ವಿಜಯ್​ ಕಿರಗಂದೂರು ಬಂಡವಾಳ ಹೂಡಿದ್ದಾರೆ. ರವೀನಾ ಟಂಡನ್​ ಮತ್ತು ಸಂಜಯ್ ದತ್​ ಅವರು ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಯಶ್​ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 3’ ಕುರಿತ ಟಾಕ್​ ಶುರುವಾಗಿದೆ.

ಇದನ್ನೂ ಓದಿ:

‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್​ ಫ್ಯಾನ್ಸ್​ ತಕರಾರು​

ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್

Follow us on

Related Stories

Most Read Stories

Click on your DTH Provider to Add TV9 Kannada