ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್

ಮದುವೆ ಆಹ್ವಾನ ಪತ್ರಿಕೆಯಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಡೈಲಾಗ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್
ಯಶ್​, ವೈರಲ್​ ಆಗಿರುವ ಆಮಂತ್ರಣ ಪತ್ರಿಕೆ

KGF Chapter 2: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಡೈಲಾಗ್​ಗಳು ತುಂಬ ಫೇಮಸ್​ ಆಗಿವೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ವಾಯ್ಲೆನ್ಸ್​.. ವಾಯ್ಲೆನ್ಸ್​..’ ಡೈಲಾಗ್​ಗಳು ಬೇರೆ ರೂಪ ಪಡೆದುಕೊಂಡಿದೆ.

TV9kannada Web Team

| Edited By: Madan Kumar

Apr 20, 2022 | 1:46 PM

ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಎಷ್ಟು ಮೋಡಿ ಮಾಡಿದೆ ಎಂಬುದನ್ನು ವಿವರಿಸುವುದು ಕಷ್ಟ. ಪ್ರೇಕ್ಷಕರ ವಲಯದಲ್ಲಿ ಈ ಚಿತ್ರ ಒಂದು ಬಗೆಯ ಗಂಗು ಹಿಡಿಸಿದೆ. ಚಿಕ್ಕ ಟೀಸರ್​ ರಿಲೀಸ್​ ಆದ ದಿನದಿಂದಲೂ ಯಶ್​ ( Yash) ಅಭಿಮಾನಿಗಳು ಈ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ರೇಲರ್​ ಬಿಡುಗಡೆ ಆದಾಗ ಆ ನಿರೀಕ್ಷೆ ದುಪ್ಪಟ್ಟಾಯಿತು. ಈಗ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಪ್ರತಿ ಡೈಲಾಗ್​ ಕೂಡ ವೈರಲ್​ ಆಗಿದೆ. ಅದರಲ್ಲೂ ಯಶ್​ ಹೇಳಿದ ‘ವಾಯ್ಲೆನ್ಸ್​ ವಾಯ್ಲೆನ್ಸ್​ ವಾಯ್ಲೆನ್ಸ್​..’ ಡೈಲಾಗ್​ ದೇಶಾದ್ಯಂತ ಫೇಮಸ್​ ಆಗಿದೆ. ರೀಲ್ಸ್​ ತುಂಬೆಲ್ಲ ಈ ಡೈಲಾಗ್​ ಕೇಳಿಸುತ್ತಿದೆ. ಇದೇ ಡೈಲಾಗ್​ ಇಟ್ಟುಕೊಂಡು ಕೆಲವರು ಹೊಸ ಹೊಸ ವರ್ಷನ್​ ಮಾಡುತ್ತಿದ್ದಾರೆ. ಈಗ ಮದುವೆ ಆಹ್ವಾನ ಪತ್ರಿಕೆಯ ಮೇಲೂ ‘ವಾಯ್ಲೆನ್ಸ್​ ವಾಯ್ಲೆನ್ಸ್​ ವಾಯ್ಲೆನ್ಸ್​..’ ಡೈಲಾಗ್​ನ ಶೈಲಿಯಲ್ಲಿ ಒಂದು ಸಾಲು ಬರೆಯಲಾಗಿದೆ. ಆ ಮದುವೆ ಕಾರ್ಡ್ (Wedding Card)​ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ಅದರಲ್ಲಿ ಬರೆದಿರುವುದು ಏನು? ಈ ಮದುವೆ ಎಲ್ಲಿ ನಡೆಯುತ್ತಿದೆ? ಇಲ್ಲಿದೆ ಪೂರ್ತಿ ಮಾಹಿತಿ.

ಚಂದ್ರಶೇಖರ್​ ಮತ್ತು ಶ್ವೇತಾ ಎಂಬುವವರು ಮೇ 13ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಳಗಾವಿಯಲ್ಲಿ ಇವರ ಮದುವೆ ನಡೆಯಲಿದೆ. ವಿವಾಹದ ಆಮಂತ್ರಣ ಪತ್ರಿಕೆಯನ್ನು ಇಂಗ್ಲಿಷ್​ನಲ್ಲಿ ಮುದ್ರಿಸಲಾಗಿದೆ. ಇದರಲ್ಲಿ ಈ ರೀತಿ ಒಂದು ಸಾಲು ಬರೆಯಲಾಗಿದೆ. ‘ಮ್ಯಾರೇಜ್​ ಮ್ಯಾರೇಜ್​ ಮ್ಯಾರೇಜ್​.. ಐ ಡೋಂಟ್​ ಲೈಕ್​ ಇಟ್​. ಐ ಅವಾಯ್ಡ್​.. ಬಟ್​ ಮೈ ರಿಲೇಟಿವ್ಸ್​ ಲೈಕ್​ ಮ್ಯಾರೇಜ್​. ಐ ಕಾಂಟ್​ ಅವಾಯ್ಡ್​’ ಎಂದು ಬರೆದಿರುವುದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಬಾಕ್ಸ್​ ಆಫೀಸ್​ನಲ್ಲಿ ‘ಕೆಜಿಎಫ್​ 2’ ಆರ್ಭಟ:

ವಿಶ್ವಾದ್ಯಂತ ‘ಕೆಜಿಎಫ್​ 2’ ಸಿನಿಮಾ ಧೂಳೆಬ್ಬಿಸಿದೆ. ಎಲ್ಲ ಭಾಷೆಗಳಿಂದ ಈಗಾಗಲೇ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಆಗಿದೆ. ಚಿತ್ರಕ್ಕೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಭರ್ಜರಿ ಲಾಭದಲ್ಲಿದೆ. ಯಶ್​ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಬಹು ದೊಡ್ಡ ಗೆಲುವು ಸಿಕ್ಕಿದೆ. ‘ಕೆಜಿಎಫ್​ 2’ ಸಿನಿಮಾದ ಲೈಫ್​ ಟೈಮ್​ ಕಲೆಕ್ಷನ್​ ಎಷ್ಟಾಗಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಅವರು ನಟಿಸಿದ್ದಾರೆ. ಉತ್ತರ ಭಾರತದ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಪ್ರಕಾಶ್​ ರೈ, ರಾವ್​ ರಮೇಶ್​ ಮುಂತಾದ ಕಲಾವಿದರ ನಟನೆಯಿಂದಾಗಿ ಚಿತ್ರದ ತೂಕ ಹೆಚ್ಚಿದೆ. ಈ ಸಿನಿಮಾ ಮಾಡುತ್ತಿರುವ ದಾಖಲೆಗಳನ್ನು ಕಂಡು ಪರಭಾಷೆ ಮಂದಿ ಕೂಡ ಫಿದಾ ಆಗಿದ್ದಾರೆ. ವಿಶಾಲ್​, ಕಾರ್ತಿ, ಜಗಪತಿ ಬಾಬು, ಶಿವಕಾರ್ತಿಕೇಯನ್​, ಕೃತಿ ಕರಬಂಧ ಸೇರಿದಂತೆ ಅನೇಕರು ‘ಕೆಜಿಎಫ್​ 2’ ಸಿನಿಮಾದ ಸಾಧೆನಯನ್ನು ಕೊಂಡಾಡುತ್ತಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ ಹಿಂದಿ ಮಾರುಕಟ್ಟೆಯಲ್ಲೂ ಅತ್ಯುತ್ತಮ ಕಲೆಕ್ಷನ್​ ಆಗುತ್ತಿದೆ. ಮೊದಲ ದಿನ 53.95 ಕೋಟಿ ರೂಪಾಯಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ, ನಾಲ್ಕನೇ ದಿನ 50.35 ಕೋಟಿ, ಐದನೇ ದಿನ 25.57 ಕೋಟಿ ಹಾಗೂ ಆರನೇ ದಿನ 19.14 ಕೋಟಿ ರೂಪಾಯಿ ಕಲೆಕ್ಷನ್​ ಹಿಂದಿ ಅವತರಣಿಕೆಯಿಂದ ಆಗಿದೆ.

ಇದನ್ನೂ ಓದಿ:

ರಾಕಿ ಭಾಯ್​ ತಾಯಿ ಪಾತ್ರ ಮಾಡಿದ ‘ಕೆಜಿಎಫ್​ 2’ ನಟಿ ಅರ್ಚನಾ ಜೋಯಿಸ್​ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​

‘RRR​’ ಚಿತ್ರದ ಹಿಂದಿ ಕಲೆಕ್ಷನ್​ ಹಿಂದಿಕ್ಕಲು ‘ಕೆಜಿಎಫ್​ 2’ ಸಿನಿಮಾಗೆ ಇನ್ನೆಷ್ಟು ಕೋಟಿ ರೂ. ಬಾಕಿ? ​ಇಲ್ಲಿದೆ ಲೆಕ್ಕ

Follow us on

Related Stories

Most Read Stories

Click on your DTH Provider to Add TV9 Kannada