ರಾಕಿ ಭಾಯ್​ ತಾಯಿ ಪಾತ್ರ ಮಾಡಿದ ‘ಕೆಜಿಎಫ್​ 2’ ನಟಿ ಅರ್ಚನಾ ಜೋಯಿಸ್​ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​

ನಟಿ ಅರ್ಚನಾ ಜೋಯಿಸ್​ ಅವರು ನಟನೆ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ‘ಕೆಜಿಎಫ್​ 2’ ಚಿತ್ರದಲ್ಲಿ ಅವರ ಪಾತ್ರಕ್ಕೆ ಮಹತ್ವ ಸಿಕ್ಕಿದೆ.

TV9kannada Web Team

| Edited By: Madan Kumar

Apr 20, 2022 | 9:54 AM

‘ಕೆಜಿಎಫ್​ 2’ (KGF Chapter 2) ಸಿನಿಮಾದ ಮೂಲಕ ನಟಿ ಅರ್ಚನಾ ಜೋಯಿಸ್​ ಅವರು ಮನೆ ಮಾತಾಗಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. ‘ಕೆಜಿಎಫ್​’ ಸಿನಿಮಾದ ಎರಡೂ ಪಾರ್ಟ್​ನಲ್ಲಿ ಅವರ ಅಭಿನಯ ಜನಮನ ಗೆದ್ದಿದೆ. ಕಥಾನಾಯಕ ರಾಕಿ ಭಾಯ್​ ಅಮ್ಮನಾಗಿ ಅರ್ಚನಾ ಜೋಯಿಸ್ (Archana Jois)​ ಮಿಂಚಿದ್ದಾರೆ. ಕೋಲಾರದ (Kolar) ಜಯನಗರದ ಸಪಲಮ್ಮ ದೇವಾಲಯಕ್ಕೆ ಅವರು ಇತ್ತೀಚೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ಅಲ್ಲದೇ ಅಭಿಮಾನಿಗಳು ಅರ್ಚನಾ ಜೋಯಿಸ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಚಿತ್ರರಂಗದಲ್ಲಿ ಅರ್ಚನಾ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಅವರು ಅಭಿನಯಿಸಿರುವ ‘ಮ್ಯೂಟ್’​ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿರುವ ಆ ಚಿತ್ರದ ಟ್ರೇಲರ್​ ಅನ್ನು ರವೀನಾ ಟಂಡನ್​ ಬಿಡುಗಡೆ ಮಾಡಿದ್ದು ವಿಶೇಷ.

ಇದನ್ನೂ ಓದಿ:

ಇನ್ನೊಂದು ಪ್ಯಾನ್​​ ಇಂಡಿಯಾ ಚಿತ್ರದಲ್ಲಿ ‘ಕೆಜಿಎಫ್​ 2’ ನಟಿ ಅರ್ಚನಾ; ‘ಮ್ಯೂಟ್​’ ಟ್ರೇಲರ್​ ​ಮೆಚ್ಚಿದ ರವೀನಾ ಟಂಡನ್​

‘ಕೆಜಿಎಫ್​ 2’ನಲ್ಲಿ ರವೀನಾ ಟಂಡನ್​ ಕಂಡು ಥಿಯೇಟರ್​ ಪರದೆಗೆ ದುಡ್ಡು ಎಸೆದ ಫ್ಯಾನ್ಸ್​; ವಿಡಿಯೋ ಹಂಚಿಕೊಂಡ ನಟಿ

Follow us on

Click on your DTH Provider to Add TV9 Kannada