ಹಿಂದೆಂದು ನೋಡಿರದ, ಕೇಳಿರದ ಸೈಬರ್ ಲೋಕದ ಮತ್ತೊಂದು ಕರಾಳ ಮುಖ ಅನಾವರಣ ಮಾಡಲಿದೆ ‘ಟಕ್ಕರ್’..!

ಹಿಂದೆಂದು ನೋಡಿರದ, ಕೇಳಿರದ ಸೈಬರ್ ಲೋಕದ ಮತ್ತೊಂದು ಕರಾಳ ಮುಖ ಅನಾವರಣ ಮಾಡಲಿದೆ ‘ಟಕ್ಕರ್’..!
ಟಕ್ಕರ್ ಟ್ರೇಲರ್

ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಕಮೆಂಟ್ ಬಾಕ್ಸ್​ನಲ್ಲೂ ಸಾಕಷ್ಟು ಜನ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: Rajesh Duggumane

Apr 29, 2022 | 7:44 PM

ಇತ್ತೀಚೆಗೆಷ್ಟೇ ಟಕ್ಕರ್ ಸಿನಿಮಾದಿಂದ ಹಾಡೊಂದು ರಿಲೀಸ್ ಆಗಿತ್ತು. ಆನೆ ನಡೆದ್ದೆ ದಾರಿ ಎಂಬ ಸಾಲುಗಳಿವೆ. ಹಾಡಿನಲ್ಲಿ ಫೈಟು, ಡೈಲಾಗ್ ಸಾಲುಗಳು. ಅದು ಪಕ್ಕಾ ಹೀರೊ ಬಿಲ್ಡಪ್ ಗೆ ಹೇಳಿ ಮಾಡಿಸಿದ್ದ ಸಾಂಗ್. ಈಗಾಗ್ಲೆ ಸಾಕಷ್ಟು ಸಿನಿಮಾ ಅಪ್ಡೇಟ್ ಗಳಲ್ಲಿ ಇದು ಮಾಸ್ ಸಿನಿಮಾ ಅಂತೆಲ್ಲಾ ಸೂಚನೆಗಳನ್ನು ನೀಡಲಾಗಿತ್ತು. ಎಷ್ಟೊ ಮಾಸ್ ಸಿನಿಮಾಗಳನ್ನು ನೋಡಿಲ್ಲ, ಅದೇ ಪೈಟು, ಅದೇ ಲವ್ವು ಅಂದ್ಕೊಂಡಿದ್ದವರಿಗೆ ವಾರೆವ್ಹಾ.. ಟ್ರೇಲರ್ ಬಿಟ್ಟು ಸಿನಿಮಾದೊಳಗೆ ಇಂಥದ್ದೊಂದು ವಿಚಾರ ಅಡಗಿದೆಯಾ ಅಂತ ತೋರಿಸಿಕೊಟ್ಟಿದ್ದಾರೆ.

ಟಕ್ಕರ್ ಸಿನಿಮಾ ಮೇ6ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಅದಕ್ಕಾಗಿಯೇ ಸಿನಿಮಾ ತಂಡ ಭರ್ಜರಿ ಓಡಾಟ ನಡೆಸುತ್ತಾ, ಮಾಧ್ಯಮದವರ ಮುಂದೆ ಬಂದು ಸಾಂಗ್ ರಿಲೀಸ್ ಮಾಡಿ, ಟ್ರೇಲರ್ ರಿಲೀಸ್ ಮಾಡಿ, ಸಿನಿಮಾ ನಿರೀಕ್ಷೆ ಬಗ್ಗೆ ಒಂದಷ್ಟು ಮಾತುಕತೆ ನಡೆಸಿತ್ತು. ಆದ್ರೆ ಟ್ರೇಲರ್ ನೋಡಿದವರ ಆ ಮಾತು ಕೇಳಿದ್ದಕ್ಕಿಂತ ಹೆಚ್ಚಿನ ನಿರೀಕ್ಷೆ ಸೃಷ್ಟಿಸಿದೆ.

ಸೈಬರ್ ಲೋಕದ ಕರಾಳವಾದ ಮತ್ತೊಂದು ಮುಖ ಈ ಸಿನಿಮಾದಲ್ಲಿ ಅನಾವರಣವಾಗುವುದು ಗ್ಯಾರಂಟಿಯಾಗಿದೆ. ಸೈಬರ್ ಕ್ರೈಂ ಅಂತ ಬಂದಾಗ ಹ್ಯಾಕರ್ಸ್, ಫೇಕರ್ಸ್ ಬಗ್ಗೆ ಅಷ್ಟೇ ಕೇಳಿದ್ವಿ. ಮೋಸಗಾರರಿಂದ ಅಕೌಂಟ್ ನಿಂದ ಹಣ ನಾಪತ್ತೆಯಾಗಿರುವುದನ್ನಷ್ಟೇ ನೋಡಿದ್ವಿ. ಆದ್ರೆ ಈ ಕಾಣದ ಕ್ರೂರಿಗಳ ವರ್ತನೆಯಿಂದ ಗೊತ್ತಿಲ್ಲದ ಅದೆಷ್ಟೊ ಹೆಣ್ಣು ಮಕ್ಕಳ ಲೈಫ್ ಕೂಡ ಹಾಳಾಗಿದೆ ಎಂಬ ಸತ್ಯವೂ ಬಯಲಾಗಲಿದೆ.  ಸಿನಿಮಾ ನೋಡಿದಾಗ ಒಂದೆರಡು ಉದಾಹರಣೆಗಳು ಸಿಗದೆ ಇರದು. ಅಂಥ ಅಪಾಯದಿಂದ ಎಚ್ಚರವಾಗಿರಲು ಸಿನಿಮಾ ಸಹಾಯವೂ ಆಗಬಹುದು.

ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಕಮೆಂಟ್ ಬಾಕ್ಸ್ ನಲ್ಲೂ ಸಾಕಷ್ಟು ಜನ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಒಂದೊಳ್ಳೆ ಸಂದೇಶವಿರುವ ಸಿನಿಮಾವಿದೆ ಎಂದಿದ್ದಾರೆ. ಸೈಬರ್ ಲೋಕದ ಕೋಣೆಯಲ್ಲಿ ಕೂತು ಎಲ್ಲರನ್ನು ಆಟವಾಡಿಸುವ ಭಜರಂಗಿ ಲೋಕಿ ಈ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರ ಮನಸ್ಸಲ್ಲಿ ಬೇರೆ ರೀತಿಯಲ್ಲಿಯೇ ಕಾಡುತ್ತಾರೆ. ಹೀರೋ ವಿಲನ್ ನಡುವೆ ಈ ಟಕ್ಕರ್ ಜೋರಾಗಿದ್ದು ಗೆಲುವು ಯಾರಿಗೆ ಎಂಬುದನ್ನು ಮೇ 6ಕ್ಕೆ ಥಿಯೇಟರ್ ನಲ್ಲಿಯೇ ನೋಡಬೇಕು.

ಸೈಬರ್ ಕ್ರೈಂ ಕಥೆ ಇರುವ ಈ ಸಿನಿಮಾವನ್ನು ಕಮರ್ಷಿಯಲ್ ಆಗಿ ರಘುಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ನಾಗೇಶ್ ಕೋಗಿಲು ಚಿತ್ರವನ್ನು ನಿರ್ಮಾಣ ಮಾಡಿದ್ದು, ಕದ್ರಿ ಮಣಿಕಾಂತ್ ಸಂಗೀತ, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಸಾಧುಕೋಕಿಲ, ಭಜರಂಗಿ ಲೋಕಿ, ಶ್ರೀಧರ್, ಜೈಜಗದೀಶ್, ಸುಮಿತ್ರ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

ಮನರಂಜನೆಯ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಮೇ 6ರಿಂದ ಟಕ್ಕರ್; ಟ್ರಾವೆಲ್-ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಮನೋಜ್ ಕುಮಾರ್ ರೆಡಿ

Follow us on

Related Stories

Most Read Stories

Click on your DTH Provider to Add TV9 Kannada