ಮೇ 6ರಿಂದ ‘ಟಕ್ಕರ್’ ಟ್ರಾವೆಲ್-ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಮನೋಜ್ ಕುಮಾರ್ ರೆಡಿ

ಮೇ 6ರಿಂದ 'ಟಕ್ಕರ್' ಟ್ರಾವೆಲ್-ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಮನೋಜ್ ಕುಮಾರ್ ರೆಡಿ
ಮನೋಜ್ ಕುಮಾರ್

ಎಸ್ ಎಲ್ ಎನ್ ಕ್ರಿಯೇಷನ್ ಬ್ಯಾನರ್ ನಡಿ ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಟಕ್ಕರ್ ಸಿನಿಮಾಗೆ ಕದ್ರಿ ಮಣಿಕಾಂತ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ ನೀಡಿದ್ದಾರೆ.

TV9kannada Web Team

| Edited By: Rajesh Duggumane

Apr 28, 2022 | 9:51 PM

ಬೆಳ್ಳಿ ಪರದೆಯ ಮೇಲೆ ಮೇ 6ರಿಂದ ಟಕ್ಕರ್ ಸಿನಿಮಾದ ಟ್ರಾವೆಲ್ ಶುರುವಾಗ್ತಿದೆ. ಸಾಕಷ್ಟು ಸ್ಪೆಷಾಲಿಟಿಗಳಿಂದ ಕೂಡಿರುವ  ಟಕ್ಕರ್ ಸಿನಿಮಾ ಮೂಲಕ ಯುವ ಪ್ರತಿಭೆ ಮನೋಜ್ ಕುಮಾರ್  ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಟೀಸರ್, ಮೇಕಿಂಗ್ ಹಾಗೂ ಹಾಡುಗಳ ಮೂಲಕ ಕುತೂಹಲ ಹುಟ್ಟು ಹಾಕಿರುವ ಈ ಸಿನಿಮಾದಲ್ಲಿ ಸೈಬರ್ ಕ್ರೈಂ ಕಥಾಹಂದರ, ಆಕ್ಷನ್ ಥ್ರಿಲ್ಲರ್ ಕಂಟೆಂಟ್ ಎಲ್ಲವನ್ನೂ ಹದವಾಗಿ ಬೆರೆಸಿ ಕಥೆ ಹೆಣೆದು ತೆರೆ ಮೇಲೆ ತರಲಾಗಿದೆ.

ಮಾಸ್ ಆ್ಯಂಡ್ ಕ್ಲಾಸ್ ಎರಡು ಆಡಿಯನ್ಸ್ ಗೆ ಇಷ್ಟವಾಗುವ ಟಕ್ಕರ್ ಸಿನಿಮಾದಲ್ಲಿ ಕನ್ನಡತಿ ಖ್ಯಾತಿ ರಂಜನಿ ರಾಘವನ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಅಂಬರೀಶ, ಚಕ್ರವರ್ತಿ ಚಿತ್ರಗಳಲ್ಲಿ ಚಿಕ್ಕ ರೋಲ್ ಗಳಲ್ಲಿ  ಮಿಂಚಿರುವ ಮನೋಜ್ ಕುಮಾರ್ ನಾಯಕ ನಟನಾಗಿ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಕಾಲೇಜ್ ಹುಡುಗನಾಗಿ, ಲವರ್ ಬಾಯ್ ಆಗಿ ಭರ್ಜರಿ ಆಕ್ಷನ್ ಹೀರೋ ಆಗಿ ಮನೋಜ್ ಕಾಣಸಿಗಲಿದ್ದಾರೆ.

ಶೂಟಿಂಗ್ ಮುಗಿಸಿ ರಿಲೀಸ್ ಹೊಸ್ತಿನಲ್ಲಿ ನಿಂತಿರುವ ಟಕ್ಕರ್ ಸಿನಿಮಾಗೆ ರಘು ಶಾಸ್ತ್ರಿ ಓಂಕಾರ ಹಾಕಿದ್ದಾರೆ. ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ತಂತ್ರಜ್ಞಾನದ ಕುರಿತ ಕಥಾವಸ್ತು ಚಿತ್ರದಲ್ಲಿದೆ. ತಂತ್ರಜ್ಞಾನ ಹೇಗೆ ಜನರ ನೆಮ್ಮದಿ ಕೆಡಿಸುತ್ತಿದೆ ಮತ್ತು ಅದರಿಂದ ಹೇಗೆ ಎಚ್ಚರ ವಹಿಸಬೇಕು ಅನ್ನೋದನ್ನು ನಿರ್ದೇಶಕರು ಫ್ರೇಮ್ ಟು ಫ್ರೇಮ್ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಎಸ್ ಎಲ್ ಎನ್ ಕ್ರಿಯೇಷನ್ ಬ್ಯಾನರ್ ನಡಿ ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಟಕ್ಕರ್ ಸಿನಿಮಾಗೆ ಕದ್ರಿ ಮಣಿಕಾಂತ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ ನೀಡಿದ್ದಾರೆ. ನೆಗೆಟಿವ್ ರೋಲ್ ನಲ್ಲಿ ಭಜರಂಗಿ ಲೋಕಿ ಮಿಂಚಿದ್ದು, ಸಾಧುಕೋಕಿಲ, ಶ್ರೀಧರ್, ಜೈಜಗದೀಶ್, ಸುಮಿತ್ರ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ: ‘ಸುದೀಪ್ ಸರ್​ ಪರ ನಾವು ಯಾವತ್ತೂ ಇರ್ತೀವಿ’; ಉಮೇಶ್ ಬಣಕಾರ್

‘ಬಾಲಿವುಡ್​ ಮೇಲೆ ಸ್ಯಾಂಡಲ್​ವುಡ್​ ಎಸೆದ ಅಣುಬಾಂಬ್​ ಇದು’: ಯಶ್​ ಗೆಲುವನ್ನು ಹೀಗೆ ವರ್ಣಿಸಿದ ಆರ್​ಜಿವಿ

Follow us on

Related Stories

Most Read Stories

Click on your DTH Provider to Add TV9 Kannada