AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿಯಲ್ಲಿ 400 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಯಶ್​ ಚಿತ್ರ ಗಳಿಸಿದ್ದು 1100 ಪ್ಲಸ್​ ಕೋಟಿ

KGF Chapter 2 Box Office Collection: ವಿಶ್ವ ಮಾರುಕಟ್ಟೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ 24 ದಿನಗಳಲ್ಲಿ 1100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರಪೂರ ಲಾಭ ಆಗಿದೆ.

ಹಿಂದಿಯಲ್ಲಿ 400 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಯಶ್​ ಚಿತ್ರ ಗಳಿಸಿದ್ದು 1100 ಪ್ಲಸ್​ ಕೋಟಿ
ಯಶ್​
TV9 Web
| Edited By: |

Updated on:May 07, 2022 | 11:36 AM

Share

ಕನ್ನಡದ ಸಿನಿಮಾ ಈ ಮಟ್ಟಕ್ಕೆ ಸಾಧನೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪರಭಾಷೆಯ ಘಟಾನುಘಟಿಗಳು ಮಾಡಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕುವ ಮಟ್ಟಕ್ಕೆ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಗೆದ್ದು ಬೀಗಿದೆ. ಈ ಸಿನಿಮಾ ತೆರೆಕಂಡು 23 ದಿನ ಕಳೆದಿದೆ. ವಿಶ್ವಾದ್ಯಂತ ಅಬ್ಬರಿಸಿರುವ ರಾಕಿ ಭಾಯ್​ ಭರ್ಜರಿ ಕಲೆಕ್ಷನ್​ ಮಾಡಿದ್ದಾನೆ. ಹಿಂದಿ ಪ್ರೇಕ್ಷಕರು ಈ ಸಿನಿಮಾಗೆ ಭರಪೂರ ಮೆಚ್ಚುಗೆ ನೀಡಿದ್ದಾರೆ. ಅದರ ಪರಿಣಾಮವಾಗಿ ಬಾಲಿವುಡ್​ ಮಾರ್ಕೆಟ್​ನಲ್ಲಿ ‘ಕೆಜಿಎಫ್​ 2’ (KGF 2) ಅಭೂತಪೂರ್ವ ಗೆಲುವು ಕಂಡಿದೆ. ಹಿಂದಿ ವರ್ಷನ್​ನಿಂದ ಯಶ್​ (Yash) ಸಿನಿಮಾಗೆ ಆಗಿರುವುದು ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್​! ಮೂಲ ಹಿಂದಿ ಸಿನಿಮಾಗಳೇ 100 ಕೋಟಿ ರೂ. ಕ್ಲಬ್​ ಸೇರುವುದು ಕಷ್ಟ ಆಗಿರುವ ಈ ಕಾಲದಲ್ಲಿ ‘ಕೆಜಿಎಫ್ 2’ ಚಿತ್ರ ಹಿಂದಿಗೆ ಡಬ್​ ಆಗಿ ಈ ಸಾಧನೆ ಮಾಡಿರುವುದು ನಿಜಕ್ಕೂ ಗ್ರೇಟ್​. ಈ ಚಿತ್ರದ ಯಶಸ್ಸು ಕಂಡು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಜಾಗತಿಕ ಸಿನಿಮಾರಂಗದ ಮಂದಿಯೆಲ್ಲ ಬೆಕ್ಕಸ ಬೆರಗಾಗಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 1’ ತೆರೆಕಂಡಾಗ ಅದು ಹಿಂದಿಯಲ್ಲಿ ಮಾಡಿದ್ದ ಲೈಫ್​ಟೈಮ್​ ಕಲೆಕ್ಷನ್​ 44.09 ಕೋಟಿ ರೂ. ಮಾತ್ರ. ಆದರೆ ಈಗ ಆ ಚಿತ್ರದ ಸೀಕ್ವೆಲ್​ನಿಂದ ಬಾಕ್ಸ್​ ಆಫೀಸ್​ನಲ್ಲಿ ಸುನಾಮಿಯೇ ಸೃಷ್ಟಿ ಆಗಿದೆ. ಮೊದಲ ದಿನ ‘ಕೆಜಿಎಫ್​ 2’ ಸಿನಿಮಾ ಹಿಂದಿಯಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಈಗ ಒಟ್ಟು 23 ದಿನಕ್ಕೆ ಹಿಂದಿ ವರ್ಷನ್​ನಿಂದ 400 ಕೋಟಿ ರೂಪಾಯಿ ಕಮಾಯಿ ಆಗಿದೆ. ಈ ಸಾಧನೆಯಿಂದ ಯಶ್​ ಅವರು ಮತ್ತೊಂದು ಎತ್ತರಕ್ಕೆ ಏರಿದ್ದಾರೆ.

ಇದನ್ನೂ ಓದಿ
Image
‘ಕೆಜಿಎಫ್​ 2’ ನೋಡಿದ್ಮೇಲೆ ‘ಕೆಜಿಎಫ್​ 3’ ಬಗ್ಗೆ ಶಿವಣ್ಣ ಹೇಳಿದ್ದೇನು? ಇಲ್ಲಿದೆ ‘ಸೆಂಚುರಿ ಸ್ಟಾರ್​’ ಮಾತು
Image
Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ
Image
‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ
Image
ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಎದುರು ಬಿಡುಗಡೆ ಆಗಲು ಬಾಲಿವುಡ್​ನ ಸ್ಟಾರ್​ ನಟರ ಚಿತ್ರಗಳು ಕೂಡ ಹೆದರಿಕೊಂಡವು. ಆದರೂ ಹುಂಬತನ ಮಾಡಿ ರಿಲೀಸ್​ ಆಗಿದ್ದ ತಮಿಳಿನ ‘ಬೀಸ್ಟ್​’ ಚಿತ್ರ ನೆಲ ಕಚ್ಚಿತು. ನಂತರದ ವಾರಗಳಲ್ಲಿ ಬಿಡುಗಡೆಯಾದ ಹಿಂದಿಯ ‘ಜೆರ್ಸಿ’, ‘ಹೀರೋಪಂತಿ 2’, ‘ರವ್​ವೇ 34’ ಮುಂತಾದ ಸಿನಿಮಾಗಳು ಕೂಡ ‘ಕೆಜಿಎಫ್​ 2’ ಎದುರು ನಿಲ್ಲಲು ಸಾಧ್ಯವಾಗದೇ ಸೋಲೊಪ್ಪಿಕೊಂಡವು. ಹೀಗೆ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ತನ್ನ ಅಧಿಪತ್ಯ ಮೆರೆದಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾಗೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರಪೂರ ಲಾಭ ಆಗಿದೆ. ವಿಶ್ವಾದ್ಯಂತ ಈ ಸಿನಿಮಾ 24 ದಿನಗಳಲ್ಲಿ 1100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಸಿನಿಮಾ ಮಾಡಿದ ದಾಖಲೆಯನ್ನು ಮುರಿಯಲು ಇನ್ಯಾರಿಗೆ ಸಾಧ್ಯ ಎಂದು ದೊಡ್ಡ ದೊಡ್ಡ ಸ್ಟಾರ್​ ಹೀರೋಗಳೆಲ್ಲ ಅತ್ತಿತ್ತ ನೋಡುವಂತಾಗಿದೆ. ಸಂಜಯ್​ ದತ್​, ರವೀನಾ ಟಂಡನ್​ ಅವರು ‘ಕೆಜಿಎಫ್​ 2’ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು. ಹಿಂದಿ ಪ್ರೇಕ್ಷಕರಿಗೆ ಈ ಚಿತ್ರ ಆಪ್ತವಾಗಲು ಇದು ಕೂಡ ಒಂದು ಕಾರಣ.

ರವಿ ಬಸ್ರೂರು ಅವರ ಸಂಗೀತ, ಭುವನ್​ ಗೌಡ ಛಾಯಾಗ್ರಹಣ, ಶಿವಕುಮಾರ್​ ಅವರ ಕಲಾ ನಿರ್ದೇಶನ, ಯಶ್​ ಮ್ಯಾನರಿಸಂ, ಎಲ್ಲ ಕಲಾವಿದರ ನಟನೆ, ತಾಯಿ ಸೆಂಟಿಮೆಂಟ್​, ಮೈ ನವಿರೇಳಿಸುವ ಆ್ಯಕ್ಷನ್​ ಸನ್ನಿವೇಶ, ಸರಿಸಾಟಿ ಇಲ್ಲದ ಮೇಕಿಂಗ್​, ಬೃಹತ್​ ಸೆಟ್​ಗಳು ಸೇರಿದಂತೆ ಅನೇಕ ಅಂಶಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಜಯಭೇರಿ ಬಾರಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Sat, 7 May 22

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!