ಕಿಯಾರಾ ಹುಟ್ಟುಹಬ್ಬ: ‘ಟಾಕ್ಸಿಕ್’ ಅಡ್ಡದಿಂದ ಬಂತು ‘ನಾಡಿಯಾ’ಳ ಹೊಸ ಪೋಸ್ಟರ್
Kiara Advani Birthday special: ಕಿಯಾರಾ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿದ್ದು, ಟಾಕ್ಸಿಕ್ ಚಿತ್ರತಂಡ ಕಿಯಾರಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಜೊತೆಗೆ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಕಿಯಾರಾ ಅವರು ಎಂದಿನಂತೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಸ್ಟಾರ್ ನಟಿ ಕಿಯಾರಾ ಅಡ್ವಾಣಿ (Kiara Advani) ತಮ್ಮ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಿಯಾರಾ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿದ್ದು, ಟಾಕ್ಸಿಕ್ ಚಿತ್ರತಂಡ ಕಿಯಾರಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಜೊತೆಗೆ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ‘ನಾಡಿಯಾ’ (Nadia) ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಕಿಯಾರಾ ಅವರ ಲುಕ್ ವಿಭಿನ್ನವಾಗಿದ್ದು, ಕೆಂಪು ಬಣ್ಣದ ಉಡುಗೆ ಜೊತೆಗೆ ಕೆಂಪು ಬಣ್ಣದ ಗಾಢ ತುಟಿ ರಂಗು ಪೋಸ್ಟರ್‌ನಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ಕಿಯಾರಾ ಅವರ ಕಿಲ್ಲರ್ ಲುಕ್ ಸಹ ಪೋಸ್ಟರ್ಗೆ ವಿಶೇಷ ಚುಂಬಕತೆಯನ್ನು ನೀಡಿದೆ.
ಕಿಯಾರಾ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಯಶ್ ಹಾಗೂ ಕಿಯಾರಾ ನಟನೆಯ ‘ತಬಾಹಿ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆ ಹಾಡಿನಲ್ಲಿ ಕಿಯಾರಾ ಹಾಗೂ ಯಶ್ ನಡುವೆ ಸಾಕಷ್ಟು ರೊಮ್ಯಾಂಟಿಕ್ ಮತ್ತು ಹಾಟ್ ದೃಶ್ಯಗಳು ಇದ್ದವು. ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಸಿನಿಮಾದ ಮುಖ್ಯ ನಾಯಕಿ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಅವರದ್ದು ಸರ್ಕಸ್ ಒಂದರ ಪ್ರಮುಖ ಪ್ರದರ್ಶನಕಾರ್ತಿಯ ಪಾತ್ರ.
ಇದನ್ನೂ ಓದಿ:ಕಿಯಾರಾ ಬೋಲ್ಡ್ ಅವತಾರಕ್ಕೆ ಸಿದ್ದಾರ್ಥ್ ಫ್ಯಾನ್ಸ್ಗೆ ಬೇಸರ?
ಈ ಹಿಂದೆ ಸಂದರ್ಶನವೊಂದರಲ್ಲಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದ ನಟಿ ಕಿಯಾರಾ, ‘ಟಾಕ್ಸಿಕ್’ ಅತ್ಯಂತ ಭಿನ್ನ ಸಿನಿಮಾ ಎಂದಿದ್ದರು. ಮಾತ್ರವಲ್ಲದೆ, ಆ ಸಿನಿಮಾ ಒಂದು ಮಹಿಳಾ ಪ್ರಧಾನ ಸಿನಿಮಾ ಎಂದು ಸಹ ಹೇಳಿದ್ದರು. ಕಿಯಾರಾ ಅವರ ಈ ಹೇಳಿಕೆ ಸಿನಿಮಾದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಯಶ್ ಅಂಥಹಾ ಮಾಸ್, ಕಮರ್ಶಿಯಲ್ ನಾಯಕ ನಟಿಸಿರುವ ಸಿನಿಮಾವನ್ನು ಕಿಯಾರಾ ಮಹಿಳಾ ಪ್ರಧಾನ ಎಂದಿರುವುದು ಅಭಿಮಾನಿಗಳ ಕುತೂಹಲಕ್ಕೆ ಸಹ ಕಾರಣವಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾವು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಸೇರಿದಂತೆ ಒಟ್ಟು ಐವರು ನಾಯಕಿಯರಿದ್ದಾರೆ. ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಈ ಸಿನಿಮಾನಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Fri, 31 July 26




