AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ವಿವಾದ: ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿರುವ ತಮಿಳು ಸಿನಿಮಾಗಳು

Cauvery issue: ರಾಜ್ಯದ ರೈತರು, ಕನ್ನಡ ಪರ ಸಂಘಟನೆಗಳವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದೆಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ತಮಿಳುನಾಡು ಸಿಎಂ ವಿರುದ್ಧವೂ ಆಕ್ರೋಶ ಕಟ್ಟೆ ಒಡೆದಿದೆ. ತಮಿಳುನಾಡು ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರದರ್ಶನನ್ನು ಕೆಲವೆಡೆ ನಿಲ್ಲಿಸಲಾಗಿದೆ. ಇನ್ನೂ ಕೆಲವು ತಮಿಳು ಸಿನಿಮಾಗಳು ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿವೆ.

ಕಾವೇರಿ ವಿವಾದ: ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿರುವ ತಮಿಳು ಸಿನಿಮಾಗಳು
Tamil Movies
ಮಂಜುನಾಥ ಸಿ.
|

Updated on: Jul 31, 2026 | 12:30 PM

Share

ಕಾವೇರಿ (Cauvery) ವಿವಾದ ಮತ್ತೆ ಶುರುವಾಗಿದೆ. ರಾಜ್ಯದಲ್ಲಿ ಮಳೆ ಕಡಿಮೆ ಆದಾಗಲೆಲ್ಲ ಕಾವೇರಿ ನೀರಿನ ವಿವಾದ ಏಳುತ್ತದೆ. ಈ ಬಾರಿಯೂ ಅದೇ ಆಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ, 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ. ಆದರೆ ರಾಜ್ಯದ ರೈತರು, ಕನ್ನಡ ಪರ ಸಂಘಟನೆಗಳವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದೆಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ತಮಿಳುನಾಡು ಸಿಎಂ ವಿರುದ್ಧವೂ ಆಕ್ರೋಶ ಕಟ್ಟೆ ಒಡೆದಿದೆ. ತಮಿಳುನಾಡು ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರದರ್ಶನನ್ನು ಕೆಲವೆಡೆ ನಿಲ್ಲಿಸಲಾಗಿದೆ. ಇನ್ನೂ ಕೆಲವು ತಮಿಳು ಸಿನಿಮಾಗಳು ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿವೆ.

ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದಲೂ ಪ್ರದರ್ಶನ ಕಾಣುತ್ತಿದೆ. ನಿನ್ನೆ ಮಂಡ್ಯ ಜಿಲ್ಲೆಯಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಇಂದು ಚಾಮರಾಜನಗರದಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಸಿನಿಮಾದ ಪ್ರದರ್ಶನ ಜಾರಿಯಲ್ಲಿದೆ. ಆದರೆ ಪ್ರತಿಭಟನಾಕಾರರು ಇಲ್ಲಿಯೂ ಸಿನಿಮಾದ ಪ್ರದರ್ಶನವನ್ನು ಬಲವಂತದಿಂದ ನಿಲ್ಲಿಸುವ ಸಾಧ್ಯತೆ ಇದೆ.

‘ಜನ ನಾಯಗನ್’ ಮಾತ್ರವೇ ಅಲ್ಲದೆ ಇನ್ನೂ ಕೆಲವು ತಮಿಳು ಸಿನಿಮಾಗಳ ಪ್ರದರ್ಶನ ಬೆಂಬಗಳೂರಿನಲ್ಲಿ ಪ್ರಸ್ತುತ ಆಗುತ್ತಿದೆ. ತಮಿಳಿನ ‘ಅನ್ಬೆ ಡಯಾನ’ ಸಿನಿಮಾ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ದಿನಕ್ಕೆ ಎರಡು ಶೋ ಮಾತ್ರವೇ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಪರಿ ಇಳವಳಗನ್, ರಮ್ಯಾ ರಂಗನಾಥನ್, ಮಾಜಿ ಸಚಿವೆ ರೋಜಾ ಇನ್ನೂ ಕೆಲವರು ಈ ಸಿನಿಮಾನಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ಹೋರಾಟ: ಮಂಡ್ಯದಲ್ಲಿ ರದ್ದಾಯ್ತು ‘ಜನ ನಾಯಗನ್’ ಶೋ

ಇದರ ಹೊರತಾಗಿ ಇತ್ತೀಚೆಗೆ ಬಿಡುಗಡೆ ಆದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಸಹ ಬೆಂಗಳೂರಿನಲ್ಲಿ ತಮಿಳು ಆವೃತ್ತಿಯ ಪ್ರದರ್ಶನ ಆಗುತ್ತಿದೆ. ಅರುಣಾ ಚಿತ್ರಮಂದಿರ, ಸ್ವಾಗತ್​​ನಲ್ಲಿ ಒಂದು ಶೋ, ವೈಟ್​​ಫೀಲ್ಡ್ ಪಿವಿಆರ್, ಅಲಸೂರು ಐನಾಕ್ಸ್, ಅಮೃತ್ ಡಿಜಿಟಲ್, ಬನ್ನೇರಘಟ್ಟ ಪಿವಿಆರ್​​ಗಳಲ್ಲಿ ‘ಸ್ಪೈಡರ್ ಮ್ಯಾನ್’ ಸಿನಿಮಾದ ತಮಿಳು ಆವೃತ್ತಿ ಪ್ರದರ್ಶನಗೊಳ್ಳುತ್ತಿದೆ.

ಕಾವೇರಿ ವಿವಾದ ಭುಗಿಲೆದ್ದಾಗೆಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತದೆ. ತಮಿಳುನಾಡಿನ ವಾಹನಗಳಿಗೆ ಕರ್ನಾಟಕದಲ್ಲಿ ಕಲ್ಲು ಬಿದ್ದರೆ, ಕರ್ನಾಟಕದ ವಾಹನಗಳಿಗೆ ತಮಿಳುನಾಡಿನಲ್ಲಿ ಕಲ್ಲು ಬೀಳುತ್ತವೆ. ತಮಿಳು ಸಿನಿಮಾಗಳಿಗೆ ನಿಷೇಧ ಹೇರುವುದು ಸಹ ಸಾಮಾನ್ಯ. ಈ ಬಾರಿಯೂ ಸಹ ತಮಿಳು ಸಿನಿಮಾಗಳಿಗೆ ಕರ್ನಾಟಕದಲ್ಲಿ ಅನಧಿಕೃತ ನಿಷೇಧ ಹೇರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಶೇಷಾದ್ರಿಪುರಂ ಮಹಾಲಕ್ಷ್ಮೀ ದೇವಾಲಯದಲ್ಲಿ ಸಡಗರದ ಪೂಜೆ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!
ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಜನರಿಂದ ತುಂಬಿ ಹೋಯ್ತು ಕೆ.ಆರ್ ಮಾರ್ಕೆಟ್!
ಶಿಗ್ಗಾಂವಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ
ಶಿಗ್ಗಾಂವಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ
ಇಂದು ವರಮಹಾಲಕ್ಷ್ಮೀ ಹಬ್ಬದ ಶುಭದಿನ
ಇಂದು ವರಮಹಾಲಕ್ಷ್ಮೀ ಹಬ್ಬದ ಶುಭದಿನ