Video: ಕರುವಿನ ಜತೆಗೆ ಫ್ರೆಂಡ್‌ಶಿಪ್ ಬೆಳೆಸಿದ ಬೆಕ್ಕಣ್ಣ, ವೈರಲ್ ಆಯ್ತು ದೃಶ್ಯ
ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ಕರುವಿನ ಜತೆಗೆ ಬೆಕ್ಕು ಸ್ನೇಹ ಬೆಳೆಸಿಕೊಂಡಿದೆ. ಈ ಪ್ರಾಣಿಗಳ ನಡುವಿನ ಫ್ರೆಂಡ್‌ಶಿಪ್‌ನ ಕ್ಯೂಟ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೇ ಈ ಸ್ನೇಹ (friendship). ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಮನುಷ್ಯರಷ್ಟೇ ಅಲ್ಲ, ಈ ಪ್ರಾಣಿಗಳು ಕೂಡ ಸ್ನೇಹ ಬೆಳೆಸಿಕೊಳ್ಳುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಹೌದು, ಕರು ಹಾಗೂ ಬೆಕ್ಕಿನ ಫ್ರೆಂಡ್ ಶಿಪ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಕ್ಕಣ್ಣನ ಜತೆಗೆ ಕರುವಿನ ಫ್ರೆಂಡ್ ಶಿಪ್
ಹೆರ್ಡರ್ ಹೋಪ್ ಸ್ಟೇಡ್ (herderhopestead) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕರು ಹಾಗೂ ಬೆಕ್ಕಿನ ಫ್ರೆಂಡ್ ಶಿಪ್ ನೋಡಬಹುದು. ತನ್ನ ಪಕ್ಕ ಕುಳಿತಿದ್ದ ಬೆಕ್ಕನ್ನು ಕರು ಮುದ್ದಾಡುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ನಿದ್ದೆಗೆ ಜಾರಿದ ಕಂದಮ್ಮನಿಗೆ ಸೊಂಡಿಲಿನಿಂದ ಗಾಳಿ ಬೀಸಿ ಮಲಗಿಸಿದ ತಾಯಾನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇವರಿಬ್ಬರೂ ಬೆಸ್ಟ್ ಫ್ರೆಂಡ್ ಎಂದೆನಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಟ್ ಪಾರ್ಟ್ನರ್ಸ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾನೇ ಮುದ್ದಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ




