Acharya Box Office: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ‘ಆಚಾರ್ಯ’; ಇದುವರೆಗೆ ಆದ ಕಲೆಕ್ಷನ್ ಎಷ್ಟು?

Chiranjeevi | Ram Charan: ’ಆಚಾರ್ಯ’ ಚಿತ್ರದ ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದರೂ ಉತ್ತಮವಾಗಿತ್ತು. ಆದರೆ ಜನರು ಚಿತ್ರವನ್ನು ಇಷ್ಟಪಡಲಿಲ್ಲ. ಪರಿಣಾಮವಾಗಿ ಶನಿವಾರದಿಂದಲೇ ಚಿತ್ರಮಂದಿರಗಳು ಖಾಲಿ ಹೊಡೆಯತೊಡಗಿದವು. ವೀಕೆಂಡ್ ಆಗಿದ್ದರೂ ಕೂಡ ಭಾನುವಾರ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ತಗ್ಗಿತ್ತು. ಸೋಮವಾರವಂತೂ ಗಳಿಕೆ ಪೂರ್ಣವಾಗಿ ಕುಸಿತಕಂಡಿದೆ.

Acharya Box Office: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ‘ಆಚಾರ್ಯ’; ಇದುವರೆಗೆ ಆದ ಕಲೆಕ್ಷನ್ ಎಷ್ಟು?
ಚಿರಂಜೀವಿ-ರಾಮ್ ಚರಣ್
Follow us
| Updated By: shivaprasad.hs

Updated on: May 03, 2022 | 2:40 PM

‘ಆರ್​ಆರ್​ಆರ್’ ಚಿತ್ರದ ನಂತರ ರಾಮ್ ಚರಣ್ (Ram Charan) ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಟಾಲಿವುಡ್​ನ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಚಿತ್ರಗಳಿಗೆ ಅಭಿಮಾನಿಗಳು ಯಾವಾಗಲೂ ತೀವ್ರ ನಿರೀಕ್ಷೆಯಿಂದ ಕಾದಿರುತ್ತಾರೆ. ಈ ಎಲ್ಲಾ ನಿರೀಕ್ಷೆಗಳನ್ನು ಹೊತ್ತು ‘ಆಚಾರ್ಯ’ ತೆರೆಕಂಡಿತ್ತು. ತಂದೆ-ಮಗನ ಜೋಡಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ‘ಆಚಾರ್ಯ’ ತನ್ನ ಮಾಸ್ ಕಂಟೆಂಟ್​ ಇರುವ ಟ್ರೇಲರ್ ಮೂಲಕ ಮೊದಲಿಗೆ ಗಮನ ಸೆಳೆದಿತ್ತು. ಆದರೆ ಚಿತ್ರ ರಿಲೀಸ್ ಆದ ನಂತರ ಬಾಕ್ಸಾಫೀಸ್​ನಲ್ಲಿ (Acharya Box Office Collection) ದಾರುಣವಾಗಿ ಸೋಲು ಕಾಣುತ್ತಿದೆ. ಶುಕ್ರವಾರ ರಿಲೀಸ್ ಆಗಿದ್ದ ಚಿತ್ರದ ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದರೂ ಉತ್ತಮವಾಗಿತ್ತು. ಆದರೆ ಜನರು ಚಿತ್ರವನ್ನು ಇಷ್ಟಪಡಲಿಲ್ಲ. ಪರಿಣಾಮವಾಗಿ ಶನಿವಾರದಿಂದಲೇ ಚಿತ್ರಮಂದಿರಗಳು ಖಾಲಿ ಹೊಡೆಯತೊಡಗಿದವು. ವೀಕೆಂಡ್ ಆಗಿದ್ದರೂ ಕೂಡ ಭಾನುವಾರ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ತಗ್ಗಿತ್ತು. ಸೋಮವಾರವಂತೂ ಗಳಿಕೆ ಪೂರ್ಣವಾಗಿ ಕುಸಿತಕಂಡಿದೆ.

‘ಆಚಾರ್ಯ’ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ‘ಆಂಧ್ರ ಬಾಕ್ಸಾಫೀಸ್’ ವರದಿ ಮಾಡಿದ್ದು, ಚಿತ್ರ ದಾರುಣವಾಗಿ ಸೋಲುಂಡಿದೆ ಎಂದು ತಿಳಿಸಿದೆ. ಕಲೆಕ್ಷನ್ ವಿವರ ನೀಡಿರುವ ಅದು, ಜಾಗತಿಕ ಮಟ್ಟದಲ್ಲಿ ಇದುವರೆಗೆ ಒಟ್ಟಾರೆ 73 ಕೋಟಿ ರೂಗಳನ್ನು ಚಿತ್ರವು ಗಳಿಸಿದೆ ಎಂದು ಮಾಹಿತಿ ನೀಡಿದೆ. ಭಾರತದ ಮಾರುಕಟ್ಟೆಯಲ್ಲಿ ಚಿತ್ರದ ಕಲೆಕ್ಷನ್ 55 ಕೋಟಿ ರೂ ಆಸುಪಾಸಿನಲ್ಲಿದೆ.

‘ಆಚಾರ್ಯ’ ಸೋಮವಾರದ ಕಲೆಕ್ಷನ್ ಎಷ್ಟು?

ಭಾರತದಲ್ಲಿ ‘ಆಚಾರ್ಯ’ ಚಿತ್ರವು ಮೊದಲ ದಿನ 37.1 ಕೋಟಿ ರೂ, ಎರಡನೇ ದಿನ 8.7 ಕೋಟಿ ರೂ, ಮೂರನೇ ದಿನ 6.6 ಕೋಟಿ ರೂ ಕಲೆಕ್ಷನ್ ಮಾಡಿತ್ತು. ಆದರೆ ನಾಲ್ಕನೇ ದಿನವಾದ ಸೋಮವಾರ ಚಿತ್ರವು ಬಹಳ ಕಡಿಮೆ ಮೊತ್ತವನ್ನು ಗಳಿಸಿದೆ ಎನ್ನಲಾಗಿದ್ದು, ಆ ಮೊತ್ತವು ನಗಣ್ಯ ಎಂದು ‘ಆಂಧ್ರ ಬಾಕ್ಸಾಫೀಸ್’ ತನ್ನ ವರದಿಯಲ್ಲಿ ಹೇಳಿದೆ. ಚಿತ್ರವು ಒಟ್ಟಾರೆ 140 ಕೋಟಿ ರೂಗಳಷ್ಟು ಮೊತ್ತಕ್ಕೆ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ ಕಲೆಕ್ಷನ್ 73 ಕೋಟಿ ಆಸುಪಾಸಿನಲ್ಲಿದ್ದು, ಚಿತ್ರವು ಗಳಿಕೆಯಲ್ಲಿ ಸೋತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಕುರಿತ ಟ್ವೀಟ್ ಇಲ್ಲಿದೆ:

ಸೋಮವಾರದ ಕಲೆಕ್ಷನ್ ಕುರಿತ ಟ್ವೀಟ್:

‘ಆಚಾರ್ಯ’ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಮಣಿ ಶರ್ಮ ಸಂಗೀತ ನೀಡಿದ್ದಾರೆ. ಪೂಜಾ ಹೆಗ್ಡೆ, ಜಿಶು ಸೇನ್​ಗುಪ್ತಾ, ಸೋನು ಸೂದ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿರಂಜೀವಿ ಮುಂದಿನ ಚಿತ್ರಗಳು ಯಾವುವು?

ಚಿರಂಜೀವಿ ತಮ್ಮ ಮುಂದಿನ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಗಾಡ್ ಫಾದರ್’ ಚಿತ್ರದ ಕೆಲಸಗಳು ನಡೆಯುತ್ತಿದ್ದು, ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಇದಾಗಿದೆ. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಬಣ್ಣಹಚ್ಚುತ್ತಿರುವುದು ವಿಶೇಷ. ತಮಿಳಿನ ‘ವಿಶ್ವಾಸಂ’ ರಿಮೇಕ್​ನಲ್ಲೂ ಚಿರಂಜೀವಿ ನಟಿಸುತ್ತಿದ್ದಾರೆ.

ಇನ್ನಷ್ಟು ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Acharya Movie Review: ಹಳಿ ತಪ್ಪಿದ ‘ಆಚಾರ್ಯ’ನ ಪಾಠ

Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ