AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ

Acharya Movie | Ram Charan | Chiranjeevi: ಈ ಮೊದಲು ‘ಆಚಾರ್ಯ’ ಚಿತ್ರಕ್ಕೆ ತ್ರಿಷಾ ನಾಯಕಿಯೆಂದು ಹೇಳಲಾಗಿತ್ತು. ಅವರು ನಂತರ ಚಿತ್ರದಿಂದ ಹಿಂದೆಸರಿದಿದ್ದರು. ಆ ಪಾತ್ರಕ್ಕೆ ಕಾಜಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಚಿತ್ರದಲ್ಲಿ ಕಾಜಲ್ ಪಾತ್ರ ಕಾಣಿಸಿಕೊಂಡಿಲ್ಲ. ಈ ಎಲ್ಲಾ ಗೊಂದಲಗಳಿಗೆ ನಿರ್ದೇಶಕ ಕೊರಟಾಲ ಶಿವ ಉತ್ತರ ನೀಡಿದ್ದಾರೆ.

Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
ಕಾಜಲ್ ಅಗರ್ವಾಲ್
TV9 Web
| Updated By: shivaprasad.hs|

Updated on: Apr 26, 2022 | 8:19 AM

Share

ಚಿರಂಜೀವಿ (Chiranjeevi) ನಟನೆಯ ‘ಆಚಾರ್ಯ’ (Acharya) ಶೀಘ್ರದಲ್ಲೇ ರಿಲೀಸ್ ಆಗುತ್ತಿದೆ. ರಾಮ್ ಚರಣ್ (Ram Charan) ಚಿತ್ರವನ್ನು ನಿರ್ಮಾಣ ಮಾಡಿರುವುದಲ್ಲದೇ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ತೆಲುಗು ಶೈಲಿಯ ಆಕ್ಷನ್- ಎಂಟರ್ ಟೈನರ್ ಚಿತ್ರ ಇದಾಗಿರಲಿದೆ ಎಂಬುದು ಟ್ರೈಲರ್ ನಲ್ಲಿ ಸಾಬೀತಾಗಿದೆ. ಈ ನಡುವೆ ಚಿತ್ರದಲ್ಲಿ ನಾಯಕಿ ಕಾಜಲ್ ಅಗರ್ವಾಲ್ (Kajal Aggarwal) ಪಾತ್ರ ನಾಪತ್ತೆಯಾಗಿರುವುದರ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ತೆಲುಗು ಚಿತ್ರತಂಡದ ಬಹುಬೇಡಿಕೆಯ ನಟಿಯಾಗಿರುವ ಕಾಜಲ್‌ ಅಗರ್ವಾಲ್ ಇತ್ತೀಚೆಗಷ್ಟೇ ತಾಯಿಯಾಗಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಚಿತ್ರಗಳಿಂದ ಬ್ರೇಕ್ ಪಡೆದಿದ್ದಾರೆ. ಈ ಮೊದಲು ಅವರು ‘ಆಚಾರ್ಯ’ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಇದರಿಂದ ಚಿತ್ರದಲ್ಲಿ ಕಾಜಲ್ ನಾಯಕಿ‌ ಎಂದೇ ಭಾವಿಸಲಾಗಿತ್ತು. ಆದರೆ ಟ್ರೈಲರ್​ನಲ್ಲಿ‌ ಕಾಜಲ್ ಪಾತ್ರವೇ ಮಾಯವಾಗಿತ್ತು. ಇದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಕಾಜಲ್ ಕೂಡ ‘ಆಚಾರ್ಯ’ ಬಗ್ಗೆ ಮೌನವಹಿಸಿದ್ದರು. ಪ್ರಿ-ರಿಲೀಸ್ ಈವೆಂಟ್​ನಲ್ಲಿ ಯಾರೂ ಕಾಜಲ್ ಬಗ್ಗೆ ಮಾತನಾಡಿರಲಿಲ್ಲ. ಇದು ಚಿತ್ರತಂಡ ಹಾಗೂ ಕಾಜಲ್ ನಡುವೆ ವೈಮನಸ್ಸು ಮೂಡಿದೆಯೇ ಎಂಬ ಅನುಮಾನ ಹುಟ್ಟಿಸಿತ್ತು.

ಈ ಮೊದಲು ‘ಆಚಾರ್ಯ’ ಚಿತ್ರಕ್ಕೆ ತ್ರಿಷಾ ನಾಯಕಿಯೆಂದು ಹೇಳಲಾಗಿತ್ತು. ಅವರು ನಂತರ ಚಿತ್ರದಿಂದ ಹಿಂದೆಸರಿದಿದ್ದರು. ಆ ಪಾತ್ರಕ್ಕೆ ಕಾಜಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಚಿತ್ರದಲ್ಲಿ ಕಾಜಲ್ ಪಾತ್ರ ಕಾಣಿಸಿಕೊಂಡಿಲ್ಲ. ಈ ಎಲ್ಲಾ ಗೊಂದಲಗಳಿಗೆ ನಿರ್ದೇಶಕ ಕೊರಟಾಲ ಶಿವ ಉತ್ತರ ನೀಡಿದ್ದಾರೆ. ಎಬಿಎನ್ ತೆಲುಗು ಜತೆ ಮಾತನಾಡುತ್ತಾ ನಿರ್ದೇಶಕ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ ಎನ್ನುವುದನ್ನು ವಿವರಿಸಿದ್ದಾರೆ.‌ ಜತೆಗೆ ಪಾತ್ರ ಕಾಣಿಸದಿರಲು ವೈಮನಸ್ಸು ಕಾರಣವಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ‌.

ಕಾಜಲ್ ಪಾತ್ರ ಇಲ್ಲದಿರುವ ಬಗ್ಗೆ ಕೊರಟಾಲ ಶಿವ ಹೇಳಿದ್ದೇನು?

ಸಂದರ್ಶನದಲ್ಲಿ ಶಿವ ಅವರಿಗೆ, ಕಾಜಲ್ ಪಾತ್ರದಲ್ಲಿ ಚಿತ್ರದಲ್ಲಿ ಏಕಿಲ್ಲ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ‘ಆಚಾರ್ಯ’ ನಿರ್ದೇಶಕ ಉತ್ತರಿಸಿದ್ದಾರೆ. ‘‘ಚಿರಂಜೀವಿ ಕಾಣಿಸಿಕೊಂಡಿರುವ ಪಾತ್ರದ ಗೆಳತಿಯ ಪಾತ್ರಕ್ಕೆ ಕಾಜಲ್​ರನ್ನು ಆಯ್ಕೆ ಮಾಡಲಾಗಿತ್ತು. ಅವರ ಪಾತ್ರ ತಿಳಿ ಹಾಸ್ಯ ಮಿಶ್ರಣದಿಂದ ಕೂಡಿತ್ತು. ಚಿರಂಜೀವಿ- ಕಾಜಲ್ ಹಾಡೊಂದಕ್ಕೂ ಹೆಜ್ಜೆಹಾಕಬೇಕಿತ್ತು. ಕಾಜಲ್ 3-4 ದಿನ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಆದರೆ ನಂತರ ಕೊರೊನಾ ಮೊದಲ ಲಾಕ್​ಡೌನ್ ಆಯಿತು’’

‘‘ಲಾಕ್​ಡೌನ್ ಸಮಯದಲ್ಲಿ ಶೂಟ್ ಆದ ದೃಶ್ಯಗಳನ್ನು ನೋಡುತ್ತಿದ್ದೆ. ಅವುಗಳನ್ನು ನೋಡಿದಾಗ ಬಹುಬೇಡಿಕೆಯ ನಟಿಯಾಗಿರುವ ಕಾಜಲ್​ ಅವರ ಇಮೇಜ್​ಗೆ ಸೂಕ್ತವಾದ ಪಾತ್ರ ಅದಾಗಿರಲಿಲ್ಲ ಎನ್ನಿಸಿತು. ಜತೆಗೆ ಅವರ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆಯೂ ಇರಲಿಲ್ಲ. ಖ್ಯಾತ ನಟಿಯೊಬ್ಬರ ಇಮೇಜ್​ಅನ್ನು ಈ ಪಾತ್ರದ ಮೂಲಕ ಕೆಳಗಿಳಿಸುತ್ತಿದ್ದೇನೆಯೇ ಎಂದನ್ನಿಸಿತು. ಹೀಗಾಗಿ ಈ ವಿಚಾರವನ್ನು ಕಾಜಲ್​ಗೆ ತಿಳಿಸಿದೆ. ಇದನ್ನು ಅರ್ಥ ಮಾಡಿಕೊಂಡ ನಟಿ, ನಾವು ಮುಂದೆ ಯಾವಾಗಲಾದರೂ ಜತೆಯಾಗಿ ಕೆಲಸ ಮಾಡೋಣ ಎಂದರು..’’ ಎಂದು ವಿವರಿಸಿದ್ದಾರೆ ಕೊರಟಾಲ ಶಿವ. ಈ ಮೂಲಕ ಗೊಂದಲ ಪರಿಹರಿಸುವ ಯತ್ನವನ್ನು ನಿರ್ದೇಶಕ ಮಾಡಿದ್ದಾರೆ.

ರಾಮ್ ಚರಣ್ ಹಾಗೂ ಚಿರಂಜೀವಿ ಪೂರ್ಣ ಪ್ರಮಾಣದಲ್ಲಿ ತೆರೆಹಂಚಿಕೊಂಡ ಮೊದಲ ಚಿತ್ರವಾಗಿದೆ ‘ಆಚಾರ್ಯ’. ಈ ಹಿಂದೆ ರಾಮ್ ಚರಣ್ ನಟನೆಯ ‘ಬ್ರೂಸ್​ಲೀ: ದಿ ಫೈಟರ್’ ಚಿತ್ರದಲ್ಲಿ ಚಿರಂಜೀವಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ತಂದೆ- ಮಗನ ಕಾಂಬಿನೇಷನ್ ಬಗ್ಗೆ ಕುತೂಹಲ ಮೂಡಿದೆ. ಏಪ್ರಿಲ್ 29ರಂದು ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: ಶೀಘ್ರವೇ ಆರಂಭಗೊಳ್ಳಲಿದೆ ‘ಕಾಫಿ ವಿತ್ ಕರಣ್’ ಶೋ; ಅತಿಥಿಯಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ

Rashmika Mandanna: ಮದ್ಯದ ಕಂಪನಿ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ