ಶೀಘ್ರವೇ ಆರಂಭಗೊಳ್ಳಲಿದೆ ‘ಕಾಫಿ ವಿತ್ ಕರಣ್’ ಶೋ; ಅತಿಥಿಯಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ

ಮೇ ತಿಂಗಳಲ್ಲಿ ‘ಕಾಫಿ ವಿತ್ ಕರಣ್’ ಚ್ಯಾಟ್ ಶೋನ ಶೂಟಿಂಗ್ ಆರಂಭಗೊಳ್ಳಲಿದೆ. ಸ್ಟಾರ್ ನೆಟ್ವರ್ಕ್​ನಲ್ಲಿ ಜೂನ್ ವೇಳೆಗೆ ಈ ಶೋ ಪ್ರಸಾರಗೊಳ್ಳಲಿದೆ ಎನ್ನಲಾಗುತ್ತಿದೆ.

ಶೀಘ್ರವೇ ಆರಂಭಗೊಳ್ಳಲಿದೆ ‘ಕಾಫಿ ವಿತ್ ಕರಣ್’ ಶೋ; ಅತಿಥಿಯಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ-ಕರಣ್
Follow us
| Edited By: Rajesh Duggumane

Updated on: Apr 26, 2022 | 6:00 AM

ಕರಣ್ ಜೋಹರ್ (Karan Johar) ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋ (Koffee With Karan) ತುಂಬಾನೇ ಫೇಮಸ್. ಈ ಚ್ಯಾಟ್ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಕಳೆದ ಬಾರಿ ಪ್ರಸಾರವಾಗಿದ್ದ ಈ ಸೀಸನ್ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಸಾಕಷ್ಟು ಚರ್ಚೆಗಳು ಹುಟ್ಟು ಹಾಕಲು ಈ ಶೋ ಕಾರಣವಾಗಿತ್ತು. ಕರಣ್ ಜೋಹರ್ ನಡೆಸಿಕೊಡುವ ಈ ಶೋ ಸಾಕಷ್ಟು ವಿವಾದಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈಗ ಹೊಸ ಸೀಸನ್ ಆರಂಭಿಸೋಕೆ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಇನ್ನೂ ಹಲವರು ಅತಿಥಿಯಾಗಿ ಬರಲಿದ್ದಾರೆ.

ಕರಣ್ ಜೋಹರ್ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾವನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಮೇ ವೇಳೆಗೆ ಸಿನಿಮಾದ ಸಂಪೂರ್ಣ ಕೆಲಸ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಮೇ ತಿಂಗಳಲ್ಲಿ ‘ಕಾಫಿ ವಿತ್ ಕರಣ್’ ಚ್ಯಾಟ್ ಶೋನ ಶೂಟಿಂಗ್ ಆರಂಭಗೊಳ್ಳಲಿದೆ. ಸ್ಟಾರ್ ನೆಟ್ವರ್ಕ್​ನಲ್ಲಿ ಜೂನ್ ವೇಳೆಗೆ ಈ ಶೋ ಪ್ರಸಾರಗೊಳ್ಳಲಿದೆ ಎನ್ನಲಾಗುತ್ತಿದೆ.

ಈ ಬಾರಿ ಕರಣ್ ಜೋಹರ್ ಶೋ ತುಂಬಾನೇ ವಿಶೇಷವಾಗಿರಲಿದೆ. ವಿವಾದಕ್ಕೆ ಬ್ರೇಕ್ ಹಾಕಲು ಕರಣ್ ಚಿಂತನೆ ನಡೆಸಿದ್ದು, ಅದೇ ರೀತಿಯಲ್ಲಿ ಈ ಶೋ ಸಿದ್ಧಪಡಿಸಲು ಚಿಂತನೆ ನಡೆದಿದೆ. ಈ ಬಾರಿ ಹಲವು ಸ್ಟಾರ್​ಗಳು ಪಾಲ್ಗೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್, ವರುಣ್ ಧವನ್​, ಸಿದ್ದಾರ್ಥ್ ಮಲ್ಹೋತ್ರಾ, ನೀತು ಕಪೂರ್, ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಮೊದಲಾದವರು ಈ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಕೂಡ ಈ ಶೋಗೆ ಕಾಲಿಡಲಿದ್ದಾರೆ.

ಸಿದ್ದಾರ್ಥ್​ ಮತ್ತು ಕಿಯಾರಾ  ನಡುವೆ ಬ್ರೇಕಪ್ ಆಗಿದೆ ಎನ್ನುವ ಮಾತಿದೆ. ಈ ವಿಚಾರ ಕೂಡ ಈ ಶೋನಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ. ಇನ್ನು, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರು ಮದುವೆ ಆಗಿದ್ದಾರೆ. ವಿವಾಹದ ಬಳಿಕ ಅವರು ಇದೇ ಮೊದಲ ಬಾರಿಗೆ ಈ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್​ ಸಿಂಗ್, ಆಲಿಯಾ ಭಟ್​, ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಆಜ್ಮಿ ನಟಿಸುತ್ತಿದ್ದಾರೆ. ಈ ಚಿತ್ರ 2023ರ ಫೆಬ್ರವರಿ 10ರಂದು ತೆರೆಗೆ ಬರುತ್ತಿದೆ. ಧರ್ಮ ಪ್ರೊಡಕ್ಷನ್ ಇದನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: ಬಿಗ್​ಬಾಸ್​ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?

‘ತಲೆ ಉಪಯೋಗಿಸಿ ಸ್ವಂತವಾಗಿ ಏನನ್ನಾದರೂ ಮಾಡಿ’; ಕರಣ್ ಜೋಹರ್​ಗೆ ನೆಟ್ಟಿಗರ ಟೀಕೆ

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್