‘ತಲೆ ಉಪಯೋಗಿಸಿ ಸ್ವಂತವಾಗಿ ಏನನ್ನಾದರೂ ಮಾಡಿ’; ಕರಣ್ ಜೋಹರ್ಗೆ ನೆಟ್ಟಿಗರ ಟೀಕೆ
ವಿನೀತ್ ಶ್ರೀನಿವಾಸನ್ ‘ಹೃದಯಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕಾಲೇಜ್ ಹುಡುಗನೊಬ್ಬ ಜೀವನದಲ್ಲಿ ತನ್ನ ಪ್ಯಾಷನ್ ಬೆನ್ನತ್ತಿ ಹೋಗಿ ದೊಡ್ಡ ಮಟ್ಟದ ಯಶಸ್ಸು ಕಾಣುವ ಕಥೆಯನ್ನು ವಿನೀತ್ ಹೇಳಿದ್ದರು.
ಭಿನ್ನ ಪ್ರಯೋಗಗಳನ್ನು ಮಲಯಾಳಂ ಚಿತ್ರರಂಗದಲ್ಲಿ (Malayam Movie) ಮಾಡುತ್ತಲೇ ಇರುತ್ತಾರೆ. ಅಲ್ಲಿ ಆ್ಯಕ್ಷನ್ ಸಿನಿಮಾಗಳಿಗಿಂತ, ಯಾವುದೇ ವಿಜೃಂಭಣೆ ಇಲ್ಲದೆ ಸಾಗುವ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ. ಈ ವರ್ಷ ತೆರೆಗೆ ಬಂದ ಮಲಯಾಳಂನ ‘ಹೃದಯಂ’ ಸಿನಿಮಾ (Hridayam Movie) ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಮೋಹನ್ಲಾಲ್ ಮಗ ಪ್ರಣವ್ ಮೋಹನ್ಲಾಲ್ ನಟಿಸಿರುವ ಈ ಸಿನಿಮಾ ಯಶಸ್ಸು ಕಂಡಿದೆ. ಕೇವಲ 6 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡ ಈ ಸಿನಿಮಾ 55 ಕೋಟಿ ರೂಪಾಯಿ ಬಾಚಿದೆ. ಈಗ ಈ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಬಾಲಿವುಡ್ನ ಲೀಡಿಂಗ್ ನಿರ್ಮಾಣ ಸಂಸ್ಥೆ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ (Dharma Production) ಈ ಚಿತ್ರದ ರಿಮೇಕ್ ಹಕ್ಕು ಪಡೆದಿದೆ. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ವಿನೀತ್ ಶ್ರೀನಿವಾಸನ್ ‘ಹೃದಯಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕಾಲೇಜ್ ಹುಡುಗನೊಬ್ಬ ಜೀವನದಲ್ಲಿ ತನ್ನ ಪ್ಯಾಷನ್ ಬೆನ್ನತ್ತಿ ಹೋಗಿ ದೊಡ್ಡ ಮಟ್ಟದ ಯಶಸ್ಸು ಕಾಣುವ ಕಥೆಯನ್ನು ವಿನೀತ್ ಹೇಳಿದ್ದರು. ಕಾಲೇಜಿನ ಪ್ರೀತಿ, ಪ್ರೇಮ, ಬ್ರೇಕಪ್, ರ‍್ಯಾಗಿಂಗ್ ಹೀಗೆ ಹತ್ತು ಹಲವು ವಿಚಾರಗಳನ್ನು ಇಟ್ಟುಕೊಂಡು ಹೇಳಿದ್ದ ಕಥೆ ಯುವಜನತೆಗೆ ಕನೆಕ್ಟ್ ಆಗಿತ್ತು. ಈಗ ಇದನ್ನು ರಿಮೇಕ್ ಮಾಡಲು ಧರ್ಮ ಪ್ರೊಡಕ್ಷನ್ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಮುಂದಾಗಿದೆ.
ಹಿಂದಿ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗು ಭಾಷೆಗೂ ಚಿತ್ರವನ್ನು ರಿಮೇಕ್ ಮಾಡಲಾಗುತ್ತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಗಳು ಅಧಿಕೃತ ಘೋಷಣೆ ಮಾಡಿವೆ. ‘ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ನಿಜಕ್ಕೂ ಖುಷಿ ಇದೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ‘ಹೃದಯಂ’ ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ರಿಮೇಕ್ ಹಕ್ಕನ್ನು ಪಡೆದುಕೊಂಡಿದೆ. ಶೀಘ್ರವೇ ಈ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ ಕರಣ್. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.
ಇತ್ತೀಚೆಗೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ಈ ವಿಚಾರ ಇಟ್ಟುಕೊಂಡು ಕೆಲವರು ಟೀಕೆ ಮಾಡಿದ್ದಾರೆ. ‘ದಕ್ಷಿಣ ಭಾರತದಲ್ಲಿ ಯಶಸ್ಸು ಕಂಡ ಎಲ್ಲಾ ಸಿನಿಮಾಗಳನ್ನು ಏಕೆ ಬಾಲಿವುಡ್ಗೆ ರಿಮೇಕ್ ಮಾಡುತ್ತೀರಿ? ಒಂದು ಸಿನಿಮಾವಾದರೂ ಸ್ವಂತ ತಲೆ ಉಪಯೋಗಿಸಿ ಮಾಡಿ’ ಎಂದು ಕೆಲವರು ಕರಣ್ಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಸಂಜಯ್ ಮಗಳು; ಕರಣ್ ಹೆಗಲಿದೆ ಹೊಸ ಜವಾಬ್ದಾರಿ
Karan Johar: ‘ಕೆಜಿಎಫ್ 2’ ಟ್ರೇಲರ್ ರಿಲೀಸ್ಗೆ ಬರ್ತಿದ್ದಾರೆ ಸ್ಟಾರ್ ನಿರೂಪಕ ಕರಣ್ ಜೋಹರ್; ಏನು ಇವರ ವಿಶೇಷ?