ಬಾಲಿವುಡ್​ನಲ್ಲಿ 329 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಕೆಜಿಎಫ್ 2’; ಎಷ್ಟು ದಾಖಲೆಗಳು ಉಡೀಸ್?

ಬಾಲಿವುಡ್​ನಲ್ಲಿ 329 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಕೆಜಿಎಫ್ 2’; ಎಷ್ಟು ದಾಖಲೆಗಳು ಉಡೀಸ್?
ಯಶ್​

ಬಾಲಿವುಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ‘ಕೆಜಿಎಫ್ 2’ ಇನ್ನು ಕೆಲವೇ ಸಿನಿಮಾಗಳನ್ನು ಹಿಂದಿಕ್ಕಿದರೆ ಸಾಕು ಅನ್ನೋದು ವಿಶೇಷ!

TV9kannada Web Team

| Edited By: Rajesh Duggumane

Apr 26, 2022 | 2:27 PM

ಬಾಕ್ಸ್ ಆಫೀಸ್​ನಲ್ಲಿ ಬಾಲಿವುಡ್​ ಸಿನಿಮಾಗಳೇ ಕಲೆಕ್ಷನ್ ಮಾಡಲು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ಬಂಗಾರದ ಬೆಳೆ ತೆಗೆದಿದೆ. ಸಿನಿಮಾ ತೆರೆಕಂಡು ಎರಡು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಆದಾಗ್ಯೂ ಚಿತ್ರದ ಕಲೆಕ್ಷನ್ ತಗ್ಗುತ್ತಿಲ್ಲ. ಎರಡನೇ ಸೋಮವಾರದ ಪರೀಕ್ಷೆಯಲ್ಲೂ ಯಶ್ (Yash) ಸಿನಿಮಾ ಪಾಸ್ ಆಗಿದೆ. ಈ ಸಿನಿಮಾ ಸೋಮವಾರ (ಏಪ್ರಿಲ್ 25) ಬರೋಬ್ಬರಿ 8 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರ ಕಲೆಕ್ಷನ್ 329 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್ 2’ ತೆರೆಕಂಡು ಎರಡು ವಾರ ಪೂರ್ಣಗೊಳ್ಳುವುದರೊಳಗೆ ಹಲವು ದಾಖಲೆಗಳು ಪುಡಿ ಆಗಿವೆ.

ಬಾಲಿವುಡ್​ನಲ್ಲಿ ಸಖತ್ ಸದ್ದು ಮಾಡಿದ ‘ಬಜರಂಗಿ ಭಾಯಿಜಾನ್’ (320.34 ಕೋಟಿ ರೂಪಾಯಿ), ‘ಸುಲ್ತಾನ್’ (300 ಕೋಟಿ ರೂಪಾಯಿ), ‘ಪದ್ಮಾವತ್​’ (302 ಕೋಟಿ ರೂಪಾಯಿ) ದಾಖಲೆಗಳನ್ನು ‘ಕೆಜಿಎಫ್ 2’ ಹಿಂದಿಕ್ಕಿದೆ. ಬಾಲಿವುಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ಇನ್ನು ಕೆಲವೇ ಸಿನಿಮಾಗಳನ್ನು ಹಿಂದಿಕ್ಕಿದರೆ ಸಾಕು ಅನ್ನೋದು ವಿಶೇಷ!

‘ಸಂಜು’ (342.53), ‘ಟೈಗರ್​ ಜಿಂದಾ ಹೈ’ (339.16), ‘ಪಿಕೆ’ (340 ಕೋಟಿ ರೂಪಾಯಿ) ಸಿನಿಮಾಗಳನ್ನು ‘ಕೆಜಿಎಫ್ 2’ ಹಿಂದಿಕ್ಕಬಹುದು ಎಂದು ಬಣ್ಣಿಸಲಾಗುತ್ತಿದೆ. ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎಂದರೆ ಅದು ಆಮಿರ್ ಖಾನ್ ನಟನೆಯ ‘ದಂಗಲ್’. ಈ ಚಿತ್ರ ಬಾಲಿವುಡ್​ನಲ್ಲಿ 387 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದನ್ನು ‘ಕೆಜಿಎಫ್ 2’ ಹಿಂದಿಕ್ಕಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಇದೆ. ಈ ಚಿತ್ರ ಹಿಂದಿಯಲ್ಲಿ 510 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

‘ಕೆಜಿಎಫ್ 2’ ರಿಲೀಸ್ ಆಗಿ ಒಂದು ವಾರದ ಬಳಿಕ ತೆರೆಗೆ ಬಂದ ‘ಜೆರ್ಸಿ’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳು ಸಿಕ್ಕವು. ಇದರಿಂದ ಸಿನಿಮಾ ತೀವ್ರ ಗತಿಯಲ್ಲಿ ಸೊರಗಿದೆ. ಮೊದಲ ದಿನ ಈ ಚಿತ್ರ ಗಳಿಸಿದ್ದು ಕೇವಲ 3.75 ಕೋಟಿ ರೂಪಾಯಿ. ಮೊದಲ ವಾರಾಂತ್ಯಕ್ಕೆ ಈ ಸಿನಿಮಾ 14.75 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಸೋಮವಾರದ ಕಲೆಕ್ಷನ್ ಮತ್ತಷ್ಟು ತಗ್ಗುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ

ರಜನಿ ನಟನೆಯ ‘2.0’ ಚಿತ್ರವನ್ನು ಹಿಂದಿಕ್ಕಿದ ‘ಕೆಜಿಎಫ್: ಚಾಪ್ಟರ್ 2’; ಹೊಸ ದಾಖಲೆ ಬರೆದ ಯಶ್ ಸಿನಿಮಾ

Follow us on

Related Stories

Most Read Stories

Click on your DTH Provider to Add TV9 Kannada