AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿ ನಟನೆಯ ‘2.0’ ಚಿತ್ರವನ್ನು ಹಿಂದಿಕ್ಕಿದ ‘ಕೆಜಿಎಫ್: ಚಾಪ್ಟರ್ 2’; ಹೊಸ ದಾಖಲೆ ಬರೆದ ಯಶ್ ಸಿನಿಮಾ

ಟ್ರೇಡ್​ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ‘ಕೆಜಿಎಫ್ 2’ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ’2.0 ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 800 ಕೋಟಿ ರೂಪಾಯಿ ಗಳಿಸಿತ್ತು. ಇದನ್ನು ‘ಕೆಜಿಎಫ್ 2’ ಹಿಂದಿಕ್ಕಿದೆ.

ರಜನಿ ನಟನೆಯ ‘2.0’ ಚಿತ್ರವನ್ನು ಹಿಂದಿಕ್ಕಿದ ‘ಕೆಜಿಎಫ್: ಚಾಪ್ಟರ್ 2’; ಹೊಸ ದಾಖಲೆ ಬರೆದ ಯಶ್ ಸಿನಿಮಾ
ರಜನಿಕಾಂತ್​-ಯಶ್
TV9 Web
| Edited By: |

Updated on: Apr 25, 2022 | 3:56 PM

Share

‘ಕೆಜಿಎಫ್: ಚಾಪ್ಟರ್​ 2’ (KGF: Chapter 2) ನಾಗಾಲೋಟ ಮುಂದುವರಿದಿದೆ. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾದ ಗಳಿಕೆ ಸದ್ಯಕ್ಕಂತೂ ತಗ್ಗುವ ಸೂಚನೆ ಸಿಗುತ್ತಿಲ್ಲ. ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಚಿತ್ರದ ಗಳಿಕೆ ಕಡಿಮೆ ಆಗಿಲ್ಲ. ಈ ಸಿನಿಮಾ ಭಾನುವಾರ (ಏಪ್ರಿಲ್ 24) ಉತ್ತಮ ಗಳಿಕೆ ಮಾಡಿದೆ. ಹೀಗಾಗಿ, ಚಿತ್ರದ ಒಟ್ಟೂ ಕಲೆಕ್ಷನ್ 818.73 ಕೋಟಿ ರೂಪಾಯಿ ಆಗಿದೆ. ಈ ಮೂಲಕ ರಜನಿಕಾಂತ್ (Rajanikanth) ನಟನೆಯ ‘2.0’ ಚಿತ್ರದ ಕಲೆಕ್ಷನ್​​ಅನ್ನು ಯಶ್ ಸಿನಿಮಾ ಹಿಂದಿಕ್ಕಿದೆ. ‘ಕೆಜಿಎಫ್ 2’ ಮಾಡುತ್ತಿರುವ ಪ್ರತಿ ದಾಖಲೆಗಳು ಕೂಡ ಸ್ಯಾಂಡಲ್​ವುಡ್ (Sandalwood) ಪಾಲಿಗೆ ತುಂಬಾನೇ ವಿಶೇಷವಾಗಿದೆ.

ಟ್ರೇಡ್​ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ‘ಕೆಜಿಎಫ್ 2’ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ’2.0 ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 800 ಕೋಟಿ ರೂಪಾಯಿ ಗಳಿಸಿತ್ತು. ಇದನ್ನು ‘ಕೆಜಿಎಫ್ 2’ ಹಿಂದಿಕ್ಕಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಏಳನೇ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ’ ಎಂದು ಅವರು ಬರೆದುಕೊಂಡಿದ್ದಾರೆ.  ಇನ್ನು, ಕೆಲವೇ ದಿನಗಳಲ್ಲಿ ಆಮಿರ್ ಖಾನ್ ನಟನೆಯ ‘ಪಿಕೆ’ ಚಿತ್ರದ ಕಲೆಕ್ಷನ್​ಅನ್ನು ಈ ಸಿನಿಮಾ ಬೀಟ್ ಮಾಡುವ ಸಾಧ್ಯತೆ ಇದೆ.

ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್ 10 ಸಿನಿಮಾ

  1. ದಂಗಲ್- ₹2024 ಕೋಟಿ
  2. ಬಾಹುಬಲಿ 2- ₹1810 ಕೋಟಿ
  3. ಆರ್​ಆರ್​ಆರ್​- ₹1100+ ಕೋಟಿ
  4. ಬಜರಂಗಿ ಭಾಯಿಜಾನ್ – ₹969 ಕೋಟಿ
  5. ಸೀಕ್ರೆಟ್ ಸೂಪರ್​ಸ್ಟಾರ್- ₹966 ಕೋಟಿ
  6. ಪಿಕೆ- ₹854 ಕೋಟಿ
  7. ‘ಕೆಜಿಎಫ್ 2’- 818+ ಕೋಟಿ
  8. 8. 2.0- ₹800 ಕೋಟಿ
  9. ಬಾಹುಬಲಿ- ₹650 ಕೋಟಿ
  10. 10 ಸುಲ್ತಾನ್- ₹623 ಕೋಟಿ

ಇನ್ನೂ, ಕೆಲ ವಾರಗಳ ಕಾಲ ‘ಕೆಜಿಎಫ್ 2’ ಅಬ್ಬರ ಮುಂದುವರಿಯಲಿದೆ. ಹಿಂದಿಯಲ್ಲಿ ತೆರೆಗೆ ಬಂದ ‘ಪಿಕೆ’ ಚಿತ್ರವನ್ನು ಹಿಂದಿಕ್ಕಿದರೆ ‘ಕೆಜಿಎಫ್ 2’ಗೆ ಆರನೇ ಸ್ಥಾನ ಸಿಗಲಿದೆ. ಕೆಲ ವಾರಗಳ ಬಳಿಕ ಬೇರೆಬೇರೆ ಭಾಷೆಯ ಬೇರೆ ಬೇರೆ ಸಿನಿಮಾಗಳು ತೆರೆಗೆ ಬರುತ್ತಿರುವುದರಿಂದ ಸಿನಿಮಾದ ಗಳಿಕೆ ಕೊಂಚ ತಗ್ಗಬಹುದು. ಹೀಗಾಗಿ, ಚಿತ್ರದ ಕಲೆಕ್ಷನ್ 900 ಕೋಟಿ ರೂಪಾಯಿ ದಾಟುವುದು ಸ್ವಲ್ಪ ಕಷ್ಟ ಆಗಬಹುದು.

ಇದನ್ನೂ ಓದಿ: ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ

‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ