ಧನಂಜಯಗೆ ಸುದೀಪ್ ಸ್ಪೆಷಲ್ ಟ್ರೀಟ್​; ಕಿಚ್ಚನ ಕೈರುಚಿ ಸವಿದ ಡಾಲಿ ಫುಲ್​ ಖುಷ್

ಸುದೀಪ್ ಹಾಗೂ ಧನಂಜಯ ನಡುವೆ ಒಳ್ಳೆಯ ಗೆಳೆತನವಿದೆ. ಹೀಗಾಗಿ, ಸುದೀಪ್ ಮನೆಯಲ್ಲಿ ಅವರು ಸೇರಿದ್ದಾರೆ. ಮ್ಯೂಸಿಕ್​ ಡೈರೆಕ್ಟರ್ ವಾಸುಕಿ ವೈಭವ್, ನಿರ್ಮಾಪಕ ಜ್ಯಾಕ್ ಮಂಜು ಮೊದಲಾದವರು ಈ ಔತಣ ಕೂಟದಲ್ಲಿ ಭಾಗಿ ಆಗಿದ್ದಾರೆ.

ಧನಂಜಯಗೆ ಸುದೀಪ್ ಸ್ಪೆಷಲ್ ಟ್ರೀಟ್​; ಕಿಚ್ಚನ ಕೈರುಚಿ ಸವಿದ ಡಾಲಿ ಫುಲ್​ ಖುಷ್
ಸುದೀಪ್ ಆ್ಯಂಡ್ ಟೀಂ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 25, 2022 | 6:15 PM

ಕಿಚ್ಚ ಸುದೀಪ್ ಅವರು (Kichcha Sudeep) ಸ್ಯಾಂಡಲ್​ವುಡ್​ನ ಬೇಡಿಕೆಯ ನಟ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಸುದೀಪ್​ಗೆ ಸ್ಯಾಂಡಲ್​ವುಡ್​ನ (Sandalwood) ಅನೇಕರ ಜತೆ ಒಳ್ಳೆಯ ಆಪ್ತತೆ ಇದೆ. ಸುದೀಪ್ ಅವರು ಧನಂಜಯ (Dhananjay) ಹಾಗೂ ಚಿತ್ರರಂಗದ ಇನ್ನೂ ಕೆಲವರಿಗೆ ವಿಶೇಷ ಟ್ರೀಟ್ ನೀಡಿದ್ದಾರೆ. ಕೆಲ ಹೊತ್ತು ಕುಳಿತು ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಕೈಯ್ಯಾರೆ ರುಚಿರುಚಿಯಾದ ಅಡುಗೆ ಮಾಡಿ ಬಡಿಸಿದ್ದಾರೆ. ಈ ಫೋಟೋವನ್ನು ಧನಂಜಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.

ಕಿಚ್ಚ ಸುದೀಪ್ ಅವರು ನಟನೆ ಮಾತ್ರವಲ್ಲ ಅಡುಗೆಯಲ್ಲೂ ಪಳಗಿದ್ದಾರೆ. ತಮ್ಮ ಮನೆಯ ಟೆರೇಸ್ ಮೇಲೆ ವಿಶೇಷ ಕಿಚನ್ ಕೂಡ ಮಾಡಿಸಿಕೊಂಡಿದ್ದಾರೆ. ಆಪ್ತರ ಜತೆ ಸಮಾಲೋಚನೆ ನಡೆಸಬೇಕು ಎಂದಾಗ ಎಲ್ಲರೂ ಸೇರುವುದು ಇಲ್ಲೇ. ‘ಬಿಗ್ ಬಾಸ್ 8’ರ ಸ್ಪರ್ಧಿಗಳಿಗೆ ಸುದೀಪ್ ತಾವೇ ರುಚಿರುಚಿಯಾದ ಅಡುಗೆ ಮಾಡಿ ಕಳುಹಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಕಿಚ್ಚ ಸುದೀಪ್ ಅಡುಗೆ ಮನೆ ಹೇಗಿದೆ ಎಂಬ ಝಲಕ್ ಕೂಡ ಸಿಕ್ಕಿತ್ತು. ಈಗ ಸುದೀಪ್ ಅವರು ವಿಶೇಷ ಅಡುಗೆ ಮಾಡಿ ಬಡಿಸಿದ್ದಾರೆ.

ಸುದೀಪ್ ಹಾಗೂ ಧನಂಜಯ ನಡುವೆ ಒಳ್ಳೆಯ ಗೆಳೆತನವಿದೆ. ಹೀಗಾಗಿ, ಸುದೀಪ್ ಮನೆಯಲ್ಲಿ ಅವರು ಸೇರಿದ್ದಾರೆ. ಮ್ಯೂಸಿಕ್​ ಡೈರೆಕ್ಟರ್ ವಾಸುಕಿ ವೈಭವ್, ನಿರ್ಮಾಪಕ ಜ್ಯಾಕ್ ಮಂಜು ಮೊದಲಾದವರು ಈ ಔತಣ ಕೂಟದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿವೆ.

‘ಆಮಂತ್ರಿಸಿದ್ದಕ್ಕೆ ಮತ್ತು ಒಳ್ಳೆಯ ಚರ್ಚೆಗೆ ಧನ್ಯವಾದಗಳು. ನಿಮ್ಮ ಕೈ ಅಡುಗೆ ಚೆನ್ನಾಗಿತ್ತು’ ಎಂದು ಧನಂಜಯ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಧನಂಜಯ ಹಾಗೂ ಸುದೀಪ್ ಫ್ರೆಂಡ್​ಶಿಪ್ ನೋಡಿ ಅನೇಕರು ಖುಷಿಪಟ್ಟಿದ್ದಾರೆ.

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಜುಲೈ ಅಂತ್ಯಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲು ತಂಡ ಪ್ಲ್ಯಾನ್ ಮಾಡಿದೆ. ‘ವಿಕ್ರಾಂತ್ ರೋಣ’ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ. ಧನಂಜಯ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಅವರ ನಟನೆಯ ‘ಹೆಡ್​ ಬುಷ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.

ಇದನ್ನೂ ಓದಿ: ಸುದೀಪ್​ ಜೀವನದಲ್ಲಿ ಬದಲಾವಣೆಗೆ ಕಾರಣವಾದ ಇಬ್ಬರು ಡೈರೆಕ್ಟರ್​ ಇವರು; ವೇದಿಕೆಯಲ್ಲಿ ವಿವರಿಸಿದ ಕಿಚ್ಚ

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರದ 3ಡಿ ದೃಶ್ಯ ನೋಡಿ ವಿಮರ್ಶೆ ನೀಡಿದ ಆರ್​ಜಿವಿ