ಸುದೀಪ್​ ಜೀವನದಲ್ಲಿ ಬದಲಾವಣೆಗೆ ಕಾರಣವಾದ ಇಬ್ಬರು ಡೈರೆಕ್ಟರ್​ ಇವರು; ವೇದಿಕೆಯಲ್ಲಿ ವಿವರಿಸಿದ ಕಿಚ್ಚ

ಸುದೀಪ್​ ಜೀವನದಲ್ಲಿ ಬದಲಾವಣೆಗೆ ಕಾರಣವಾದ ಇಬ್ಬರು ಡೈರೆಕ್ಟರ್​ ಇವರು; ವೇದಿಕೆಯಲ್ಲಿ ವಿವರಿಸಿದ ಕಿಚ್ಚ

TV9 Web
| Updated By: ಮದನ್​ ಕುಮಾರ್​

Updated on: Apr 24, 2022 | 10:58 AM

Kichcha Sudeepa | Upendra: ‘ಐ ಆ್ಯಮ್​ ಆರ್​’ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಮಾಡಿದ ಬಳಿಕ ಕಿಚ್ಚ ಸುದೀಪ್ ವೇದಿಕೆ ಏರಿದರು. ಉಪೇಂದ್ರ ಮತ್ತು ರಾಮ್​ ಗೋಪಾಲ್​ ವರ್ಮಾ ಬಗ್ಗೆ ಅವರು​ ಮಾತಾಡಿದರು.

ಚಿತ್ರರಂಗದಲ್ಲಿ ಕಿಚ್ಚ ಸುದೀಪ್​ (Kichcha Sudeepa) ಅವರ ಸಾಧನೆ ಅಪಾರ. ಹಲವು ವರ್ಷಗಳ ತಮ್ಮ ವೃತ್ತಿಬದುಕಿನಲ್ಲಿ ಅವರು ಅನೇಕ ತಿರುವುಗಳನ್ನು ಕಂಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಖ್ಯಾತಿ ಗಳಿಸಿದ್ದಾರೆ. ಅವರ ಈ ಪಯಣದಲ್ಲಿ ಕೆಲವು ನಿರ್ದೇಶಕರು ಪ್ರಭಾವ ಬೀರಿದ್ದಾರೆ. ಆ ಪೈಕಿ ಉಪೇಂದ್ರ (Upendra) ಮತ್ತು ರಾಮ್​ ಗೋಪಾಲ್​ ವರ್ಮಾ ಅವರ ಬಗ್ಗೆ ಕಿಚ್ಚ ಸುದೀಪ್​ ಈಗ ಮಾತನಾಡಿದ್ದಾರೆ. ಆರ್​ಜಿವಿ (Ram Gopal Varma) ಮತ್ತು ಉಪ್ಪಿ ಕಾಂಬಿನೇಷನ್​ನ ಹೊಸ ಸಿನಿಮಾ ‘ಐ ಆ್ಯಮ್​ ಆರ್​’ ಚಿತ್ರದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಿದ ಬಳಿಕ ಅವರು ವೇದಿಕೆಯಲ್ಲಿ ಮಾತನಾಡಿದರು. ತಮ್ಮ ಸಿನಿಮಾ ಜರ್ನಿಯಲ್ಲಿ ಉಪೇಂದ್ರ ಮತ್ತು ರಾಮ್ ಗೋಪಾಲ್​ ವರ್ಮಾ ಅವರು ಯಾವ ರೀತಿ ಬದಲಾವಣೆಗೆ ಕಾರಣ ಆಗಿದ್ದಾರೆ ಎಂಬುದನ್ನು ಸುದೀಪ್​ ವಿವರಿಸಿದ್ದಾರೆ.

ಇದನ್ನೂ ಓದಿ:

‘ನವರಸ ನಾಯಕ ಆಗಿದ್ರೆ ಮಾತ್ರ ಹೀಗೆ ನಟಿಸೋಕೆ ಸಾಧ್ಯ’; ಸುದೀಪ್​ ನಟನೆ ಬಗ್ಗೆ ಜಗ್ಗೇಶ್​ ಹೊಗಳಿಕೆ

ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಸುದೀಪ್​ ಎಂದ ನಟ ಜಗ್ಗೇಶ್