ನವ ದಂಪತಿಗೆ ಧಾರೆ ಎರೆದು, ಅಕ್ಷತೆ ಹಾಕಿದ ಸಾಕು ನಾಯಿ; ವೈರಲ್ ವಿಡಿಯೋ ಇಲ್ಲಿದೆ
ಮೈಸೂರಿನ ಒಂಟಿಕೊಪ್ಪಲ್ ಆಟೋ ಮಹದೇವ್ ಹಾಗೂ ರೂಪ ದಂಪತಿ ಮಗಳ ಮದುವೆ ವಾರದ ಹಿಂದೆ ನಡೆದಿದೆ. ಮದುವೆಯಲ್ಲಿ ಸಾಕು ನಾಯಿ ಧಾರೆ ಎರೆದಿದೆ.
ಮೈಸೂರು: ಪ್ರಾಣಿಗಳಿಗೆ ಪ್ರೀತಿ ಕೊಟ್ಟು ಸಾಕಿದರೆ, ಅವುಗಳು ಕೂಡಾ ಅಷ್ಟೇ ಪ್ರೀತಿ (Love) ನೀಡುತ್ತವೆ. ಅದರಲ್ಲೂ ನಾಯಿ (Dog). ನಿಯತ್ತಿನ ಪ್ರಾಣಿಯಾಗಿರುವ ನಾಯಿ ಮನುಷ್ಯನ ಜೊತೆ ತುಂಬಾ ಬೇಗ ಹೊಂದಿಕೊಳ್ಳುತ್ತದೆ. ಕೆಲವರಂತೂ ನಾಯಿಗಳನ್ನ ತುಂಬಾ ಪ್ರೀತಿಯಿಂದ ಸಾಕಿ, ಸಲಹುತ್ತಾರೆ. ಹೀಗೆ ಮುದ್ದಾಗಿ ಸಾಕಿದ ಸಾಕು ನಾಯಿಯೊಂದು ನವ ದಂಪತಿಗೆ ಶುಭ ಹಾರೈಸಿದೆ. ನಾಯಿ ನವ ದಂಪತಿಗೆ ಶುಭ ಹಾರೈಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೈಸೂರಿನ ಒಂಟಿಕೊಪ್ಪಲ್ ಆಟೋ ಮಹದೇವ್ ಹಾಗೂ ರೂಪ ದಂಪತಿ ಮಗಳ ಮದುವೆ ವಾರದ ಹಿಂದೆ ನಡೆದಿದೆ. ಮದುವೆಯಲ್ಲಿ ಸಾಕು ನಾಯಿ ಧಾರೆ ಎರೆದಿದೆ. ಮಹದೇವ್ ಹಾಗೂ ರೂಪ ದಂಪತಿ ಮದುವೆ ನಂತರ ಸಾಕು ನಾಯಿ ಮೂಲಕ ಅಕ್ಷತೆ ಹಾಕಿಸಿದ್ದಾರೆ. ನಂತರ ಹಾಲು ಬಿಟ್ಟು ಧಾರೆ ಎರೆಸಿದ್ದಾರೆ. ಸಿಜು ಜಾತಿಯ ಮಿಸ್ಟಿ ಹೆಸರಿನ ಸಾಕು ನಾಯಿಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ಎಲ್ಲರೂ ಫಿದಾ ಆಗಿದ್ದಾರೆ.
ಇದನ್ನೂ ಓದಿ
ಕೊಲೆ ಪ್ರಕರಣದಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ಲಂಚ ಪಡೆದು ಕಿರುಕುಳ; ನ್ಯಾಯಕ್ಕಾಗಿ ಆಗ್ರಹಿಸಿ ಕುಟುಂಬಸ್ಥರ ಕಣ್ಣೀರು
EV Explodes: ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ