ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಪಾರ್ಕ್ ಆಗಿದ್ದ ಕಾರೊಂದು ಹೊತ್ತಿ ಉರಿಯಿತು, ದುಷ್ಕರ್ಮಿಗಳ ಕೈವಾಡ ಶಂಕೆ

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಪಾರ್ಕ್ ಆಗಿದ್ದ ಕಾರೊಂದು ಹೊತ್ತಿ ಉರಿಯಿತು, ದುಷ್ಕರ್ಮಿಗಳ ಕೈವಾಡ ಶಂಕೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 23, 2022 | 9:33 PM

ಅಸಲು ವಿಷಯವೇನೆಂದರೆ ಕಾರಿಗೆ ಬೆಂಕಿ ತಾನಾಗೇ ಹೊತ್ತಿಕೊಂಡಿಲ್ಲ. ಇದರಲ್ಲಿ ದುಷ್ಕರ್ಮಿಗಳ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಯಾರೋ ದಾರಿಹೋಕರು ಅಗ್ನಿಶಾಮಕ ದಳ ಕಚೇರಿಗೆ ಫೋನ್ ಮಾಡಿದ ಬಳಿಕ ಫೈರ್ ಎಂಜಿನ್ ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸಿದೆ.

Bengaluru: ಚಲಿಸುತ್ತಿರುವ ಕಾರುಗಳಲ್ಲಿ ಬೆಂಕಿ ಹೊತ್ತಿಕೊಂಡು ಉರಿದ ಅನಾಹುತಗಳನ್ನು ನಾವು ನಿಮ್ಮ ಗಮನಕ್ಕೆ ಆಗಾಗ ತರುತ್ತಿರುತ್ತೇವೆ. ಶುಕ್ರವಾರವಷ್ಟೇ ಚಿತ್ರದುರ್ಗದ ಹಿರಿಯೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಸರಣಿ ಅಪಘಾತವೊಂದರ ನಂತರ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆಯ ವಿಡಿಯೋವನ್ನು ನಿಮಗೆ ತೋರಿಸಿದ್ದೆವು. ಇಲ್ಲಿರುವ ವಿಡಿಯೋ ಬೆಂಗಳೂರು ನಗರದ್ದು ಮಾರಾಯ್ರೇ. ಶುಕ್ರವಾರ ರಾತ್ರಿ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Shivajinagar police limits) ಬರುವ ಕ್ವೀನ್ಸ್ ರೋಡಲ್ಲಿ (Queen’s Road) (ಕೆಪಿಸಿಸಿ ಕಚೇರಿ ಸಮೀಪ) ರಸ್ತೆ ಪಕ್ಕ ನಿಂತಿದ್ದ ಈ ಕಾರು ಧಗಧಗನೇ ಉರಿಯಲಾರಂಭಿಸಿದೆ. ಕಾರುಗಳಿಗೆ ಬೆಂಕಿ ಹೊತ್ತಿಕೊಂಡಾಗ ಅವು ಒಣಗಿದ ಸೌದೆಯಂತೆ ಉರಿಯಲಾರಂಭಿಸುತ್ತವೆ. ಇದನ್ನ ಎಲ್ಲ ಸಂದರ್ಭಗಳಲ್ಲಿ ನಾವೆಲ್ಲ ನೋಡಿದ್ದೇವೆ.

ರಾತ್ರಿ ಸಮಯ ಮತ್ತು ಬೆಂಕಿ ಹೊತ್ತಕೊಂಡ ಕಾರಿನ ಸುತ್ತಮುತ್ತ ಬೇರೆ ವಾಹನ ಗಳು ಇರದಿದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಅಸಲು ವಿಷಯವೇನೆಂದರೆ ಕಾರಿಗೆ ಬೆಂಕಿ ತಾನಾಗೇ ಹೊತ್ತಿಕೊಂಡಿಲ್ಲ. ಇದರಲ್ಲಿ ದುಷ್ಕರ್ಮಿಗಳ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಯಾರೋ ದಾರಿಹೋಕರು ಅಗ್ನಿಶಾಮಕ ದಳ ಕಚೇರಿಗೆ ಫೋನ್ ಮಾಡಿದ ಬಳಿಕ ಫೈರ್ ಎಂಜಿನ್ ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸಿದೆ.

ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಆಸುಪಾಸಿನ ಸಿಸಿಟಿವಿಗಳ ಫುಟೇಜ್ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ಧರ್ಮ ದಂಗಲ್ ನಡುವೆ ಮೈಸೂರಿನಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ಸಮುದಾಯದ ಯುವಕರು; ವಿಡಿಯೋ ನೋಡಿ