2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಾರಣಾಂತರಗಳಿಂದ ಈ ಕಾರ್ಯಕ್ರಮ ಮುಂದೂಡಲ್ಪಡುತ್ತಲೇ ಇತ್ತು. ರಾಜ್ಕುಮಾರ್ ಜನ್ಮದಿನವೇ ಈ ಸಮಾರಂಭ ನಡೆಯುತ್ತಿರುವುದು ವಿಶೇಷ.
2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು (ಏಪ್ರಿಲ್ 24) ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ‘ಶುದ್ಧಿ (ಪ್ರಥಮ)’, ‘ಮಾರ್ಚ್ 22’ (ದ್ವಿತೀಯ), ಪಡ್ಡಾಯಿ (ತುಳು) (ತೃತೀಯ) ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ಹೆಬ್ಬಟ್ ರಾಮಕ್ಕ’ ಸಿನಿಮಾ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೊರಹೊಮ್ಮಿದೆ. ಪುನೀತ್ ರಾಜ್ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾ (Rajakumara Movie) ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಹೊರಹೊಮ್ಮಿದ್ದು, ಈ ಚಿತ್ರಕ್ಕೂ ಪ್ರಶಸ್ತಿ ಸಿಗಲಿದೆ. ಕಾರಣಾಂತರಗಳಿಂದ ಈ ಕಾರ್ಯಕ್ರಮ ಮುಂದೂಡಲ್ಪಡುತ್ತಲೇ ಇತ್ತು. ರಾಜ್ಕುಮಾರ್ ಜನ್ಮದಿನವೇ ಈ ಸಮಾರಂಭ ನಡೆಯುತ್ತಿರುವುದು ವಿಶೇಷ.
ಇದನ್ನೂ ಓದಿ: ಕನ್ನಡದ ಪ್ರಶ್ನೆ ಬಂದಾಗ ಹೋರಾಟ ಮಾಡೇ ಮಾಡುತ್ತೇನೆ ಎಂದರು ಶಿವರಾಜಕುಮಾರ್!
‘ಅಣ್ಣ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ’; ರಾಜ್ಕುಮಾರ್ ನೆನೆದು ಸಹೋದರಿ ನಾಗಮ್ಮ ಕಣ್ಣೀರು