‘ಅಣ್ಣ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ’; ರಾಜ್​ಕುಮಾರ್ ನೆನೆದು ಸಹೋದರಿ ನಾಗಮ್ಮ ಕಣ್ಣೀರು

ಇಂದು (ಏಪ್ರಿಲ್ 24) ರಾಜ್​ಕುಮಾರ್ ಅವರ ಜನ್ಮದಿನ. ಈ ವಿಶೇಷ ದಿನದಂದು ನಾಗಮ್ಮ ಕಣ್ಣೀರು ಹಾಕಿದ್ದಾರೆ. ಅಣ್ಣಾವ್ರ ನೆನೆದು ಭಾವುಕ ನುಡಿಗಳನ್ನು ಆಡಿದ್ದಾರೆ.

TV9kannada Web Team

| Edited By: Rajesh Duggumane

Apr 24, 2022 | 3:00 PM

ರಾಜ್​ಕುಮಾರ್ ಅವರು (Rajkumar) ಗಾಜನೂರಿನವರು. ಚಾಮರಾಜನಗರದ ಈ ಗ್ರಾಮದಲ್ಲಿ ರಾಜ್ ತಮ್ಮ ಬಾಲ್ಯವನ್ನು ಕಳೆದರು. ದೊಡ್ಡಗಾಜನೂರಿನಲ್ಲಿ ಅವರ ಸಹೋದರಿ ನಾಗಮ್ಮ (Nagamma) ಇದ್ದಾರೆ. ಇಂದು (ಏಪ್ರಿಲ್ 24) ರಾಜ್​ಕುಮಾರ್ ಅವರ ಜನ್ಮದಿನ. ಈ ವಿಶೇಷ ದಿನದಂದು ನಾಗಮ್ಮ ಕಣ್ಣೀರು ಹಾಕಿದ್ದಾರೆ. ಅಣ್ಣಾವ್ರ ನೆನೆದು ಭಾವುಕ ನುಡಿಗಳನ್ನು ಆಡಿದ್ದಾರೆ. ‘ಅಣ್ಣ ಇದ್ದಿದ್ರೆ ಮುದ್ದಾಡ್ತಿದ್ದೆ. ವರ್ಷವರ್ಷ ಶುಭಾಶಯ ಹೇಳುತ್ತಿದೆ. ಆದರೆ ಅಣ್ಣ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ. ನನ್ನನ್ನು ಯಾಕೆ ಒಬ್ಬಳ್ನೆ ಬಿಟ್ಟು ಹೋದಿರಿ?’ ಎಂದು ನಾಗಮ್ಮ ಕಣ್ಣೀರು ಹಾಕಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್​ ಸಮಾಧಿಗೆ ಅವರ ಕುಟುಂಬದವರು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಇಲ್ಲಿ ನೆರೆದಿದ್ದರು.

ಇದನ್ನೂ ಓದಿ: ರಾಜ್​ಕುಮಾರ್ ಬರ್ತ್​ಡೇ ದಿನ ಶಿವಣ್ಣ ನಟನೆಯ ‘ಘೋಸ್ಟ್​’ ಲುಕ್ ರಿಲೀಸ್​; ಏನಿದರ ಕಥೆ? 

ರಾಘಣ್ಣನ ಹೊಸ ಸಿನಿಮಾಗೆ ಗಾಜನೂರಿನಲ್ಲಿ ಚಾಲನೆ ನೀಡಿದ ನಾಗಮ್ಮ 

Follow us on

Click on your DTH Provider to Add TV9 Kannada