ರಾಘಣ್ಣನ ಹೊಸ ಸಿನಿಮಾಗೆ ಗಾಜನೂರಿನಲ್ಲಿ ಚಾಲನೆ ನೀಡಿದ ನಾಗಮ್ಮ

ರಾಘಣ್ಣನ ಹೊಸ ಸಿನಿಮಾಗೆ ಗಾಜನೂರಿನಲ್ಲಿ ಚಾಲನೆ ನೀಡಿದ ನಾಗಮ್ಮ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 10, 2022 | 3:27 PM

ರಾಜ್​ಕುಮಾರ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಕೂಡ ಇದೇ ಊರಿನಲ್ಲಿ ನಡೆಯಲಿದೆ.

ಡಾ. ರಾಜ್​ಕುಮಾರ್ ಅವರ (Dr Rajkumar) ಹುಟ್ಟೂರಾದ ಚಾಮರಾಜನಗರದ ಗಾಜನೂರಿನಲ್ಲಿ ‘ಸಂಪತ್ತಿಗೆ ಸವಾಲ್’, ‘ಶ್ರೀನಿವಾಸ ಕಲ್ಯಾಣ’ ಚಿತ್ರಗಳ ಶೂಟಿಂಗ್​ ನಡೆದಿದೆ. ಆದರೆ, ಯಾವುದೇ ಚಿತ್ರದ ಮುಹೂರ್ತ ಇಲ್ಲಿ ನಡೆದಿರಲಿಲ್ಲ. ಈಗ ರಾಘವೇಂದ್ರ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಖಡಕ್​ ಹಳ್ಳಿ ಹುಡುಗರು’ ಚಿತ್ರದ (Khadak Halli Hudugaru)ಮುಹೂರ್ತ ಇಂದು (ಮಾರ್ಚ್​ 10) ನೆರೆವೇರಿದೆ. ರಾಘವೇಂದ್ರ ರಾಜ್​ಕುಮಾರ್ ಅವರ ಸೋದರತ್ತೆ ನಾಗಮ್ಮ ಪೂಜೆ ಮಾಡಿ, ಸಿನಿಮಾಗೆ ಚಾಲನೆ ನೀಡಿದರು. ಈ ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಹೀರೋ ಅಲ್ಲ. ಆದರೆ, ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸಲಿದೆ. ರಾಜ್​ಕುಮಾರ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಕೂಡ ಇದೇ ಊರಿನಲ್ಲಿ ನಡೆಯಲಿದೆ.

ಇದ್ನೂ ಓದಿ: ‘ವೇದ’ ಸಿನಿಮಾ ಮಾಡುವಾಗ ನನ್ನಲ್ಲಿ ಅಪ್ಪುನ ಹುಡಕೋ ಪ್ರಯತ್ನ ಮಾಡಿದ್ದೇನೆ; ಶಿವರಾಜ್​ಕುಮಾರ್

ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್​-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ