ರಾಜ್​ಕುಮಾರ್ ಬರ್ತ್​ಡೇ ದಿನ ಶಿವಣ್ಣ ನಟನೆಯ ‘ಘೋಸ್ಟ್​’ ಲುಕ್ ರಿಲೀಸ್​; ಏನಿದರ ಕಥೆ?

ರಾಜ್​ಕುಮಾರ್ ಬರ್ತ್​ಡೇ ದಿನ ಶಿವಣ್ಣ ನಟನೆಯ ‘ಘೋಸ್ಟ್​’ ಲುಕ್ ರಿಲೀಸ್​; ಏನಿದರ ಕಥೆ?
ಘೋಸ್ಟ್​ ಫಸ್ಟ್ ಲುಕ್

ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್​ ನಿರ್ಮಾಣದ ಈ ಸಿನಿಮಾಗೆ ಶ್ರೀನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ತುಂಬಾನೇ ಕುತೂಹಲಕಾರಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ.

TV9kannada Web Team

| Edited By: Rajesh Duggumane

Apr 24, 2022 | 1:41 PM

ಇಂದು (ಏಪ್ರಿಲ್​ 24) ರಾಜ್​ಕುಮಾರ್ (Dr. Rajkumar) ಹಾಗೂ ಅವರ ಅಭಿಮಾನಿಗಳಿಗೆ ವಿಶೇಷ ದಿನ. ಕಾರಣ, ಇಂದು ರಾಜ್​ಕುಮಾರ್ ಅವರ ಜನ್ಮದಿನ. ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ರಾಜ್​ ಫ್ಯಾಮಿಲಿ ಅಭಿಮಾನಿಗಳಿಗೆ ಈ ದಿನ ಗುಡ್​ನ್ಯೂಸ್ ಒಂದು ಸಿಕ್ಕಿದೆ. ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್​’ ಸಿನಿಮಾದ (Ghost Movie) ಫಸ್ಟ್ ಲುಕ್ (ಕಾನ್ಸೆಪ್ಟ್ ಪೋಸ್ಟರ್) ರಿಲೀಸ್ ಮಾಡಲಾಗಿದೆ. ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್​ ನಿರ್ಮಾಣದ ಈ ಸಿನಿಮಾಗೆ ಶ್ರೀನಿ (Director Srini) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ತುಂಬಾನೇ ಕುತೂಹಲಕಾರಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ.

ಫಸ್ಟ್​ ಲುಕ್ ಸಖತ್ ರಾ ಆಗಿ ಮೂಡಿ ಬಂದಿದೆ. ಶಿವರಾಜ್​ಕುಮಾರ್ ಅವರ ಕೈಯಲ್ಲಿ ಎಕೆ47 ಮಾದರಿಯ ಗನ್ ಇದೆ. ಅವರ ಕಡೆಗೆ ಒಂದಷ್ಟು ಗನ್​ಗಳು ಮುಖಮಾಡಿವೆ. ಪೋಸ್ಟರ್​ನಲ್ಲಿ ಕಂಬಿಗಳನ್ನು ಕೂಡ ತೋರಿಸಲಾಗಿದೆ. ಗನ್​ಗಳನ್ನು ನೋಡಿದ ಫ್ಯಾನ್ಸ್ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನ್ನುತ್ತಿದ್ದಾರೆ. ಶಿವಣ್ಣ ಅವರ ವಯಸ್ಸು 60 ಸಮೀಪಿಸಿದೆ. ಆದರೆ, ಅವರ ಎನರ್ಜಿ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಹುಮ್ಮಸಿನಿಂದ ಆ್ಯಕ್ಷನ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ಅವರು ಯಾವ ರೀತಿಯಲ್ಲಿ ಆ್ಯಕ್ಷನ್ ಮೆರೆಯಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಟಾರ್ ನಟರ ಸಿನಿಮಾಗಳು ಕನ್ನಡದಲ್ಲಿ ಸಿದ್ಧಗೊಂಡು, ಪರ ಭಾಷೆಗೆ ಡಬ್​ ಆಗಿ ರಿಲೀಸ್ ಆಗುತ್ತಿದೆ. ‘ಘೋಸ್ಟ್’ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಪೋಸ್ಟರ್​ನಲ್ಲಿ ಈ ವಿಚಾರವನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ‘ಘೋಸ್ಟ್’ ಸಂದೇಶ್ ನಾಗರಾಜ್ ಬ್ಯಾನರ್​ನಲ್ಲಿ ಮೂಡಿ ಬರುತ್ತಿರುವ 29ನೇ ಸಿನಿಮಾ.

ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಶ್ರೀನಿ, ‘ಕನ್ನಡಿಗರ ಸಾರ್ವಕಾಲಿಕ ಆರಾಧ್ಯದೈವ ವರನಟ ಡಾ. ರಾಜ್‍ಕುಮಾರ್ ಅವರ ಜನ್ಮದಿನದ ಅಂಗವಾಗಿ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅವರ ಅಭಿನಯದ ಘೋಸ್ಟ್ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ನಿಮ್ಮ ಮುಂದೆ ಅರ್ಪಿಸುತಿದ್ದೇವೆ. ಹರಸಿ ಪ್ರೀತಿಸಿ ಆಶೀರ್ವದಿಸಿ’ ಎಂದು ಕೋರಿದ್ದಾರೆ.

ಇದನ್ನೂ ಓದಿ: Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್​ ನೀಡುವ ‘ಓಲ್ಡ್​ ಮಾಂಕ್​’

‘ಓಲ್ಡ್​ ಮಾಂಕ್​’ ಗೆದ್ದ ಬಳಿಕ ಶ್ರೀನಿ ಹೊಸ ಚಿತ್ರ ಅನೌನ್ಸ್​; ಈ ಬಾರಿ ಶಿವಣ್ಣ, ಸಂದೇಶ್​ ನಾಗರಾಜ್​ ಜೊತೆ ಸಿನಿಮಾ

Follow us on

Most Read Stories

Click on your DTH Provider to Add TV9 Kannada