AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಓಲ್ಡ್​ ಮಾಂಕ್​’ ಗೆದ್ದ ಬಳಿಕ ಶ್ರೀನಿ ಹೊಸ ಚಿತ್ರ ಅನೌನ್ಸ್​; ಈ ಬಾರಿ ಶಿವಣ್ಣ, ಸಂದೇಶ್​ ನಾಗರಾಜ್​ ಜೊತೆ ಸಿನಿಮಾ

‘ಘೋಸ್ಟ್​’ ಚಿತ್ರಕ್ಕೆ ಶ್ರೀನಿ ಕಥೆ ಬರೆದಿದ್ದಾರೆ. ಶಿವರಾಜ್​ಕುಮಾರ್​ ನಾಯಕನಾಗಿ ನಟಿಸಲಿದ್ದು, ಸಂದೇಶ್​ ನಾಗರಾಜ್​ ಅವರು ನಿರ್ಮಾಣ ಮಾಡುತ್ತಿದ್ದಾರೆ.

‘ಓಲ್ಡ್​ ಮಾಂಕ್​’ ಗೆದ್ದ ಬಳಿಕ ಶ್ರೀನಿ ಹೊಸ ಚಿತ್ರ ಅನೌನ್ಸ್​; ಈ ಬಾರಿ ಶಿವಣ್ಣ, ಸಂದೇಶ್​ ನಾಗರಾಜ್​ ಜೊತೆ ಸಿನಿಮಾ
ಶ್ರೀನಿ, ಶಿವರಾಜ್​ಕುಮಾರ್, ಸಂದೇಶ್​ ನಾಗರಾಜ್
TV9 Web
| Updated By: ಮದನ್​ ಕುಮಾರ್​|

Updated on: Apr 09, 2022 | 8:03 AM

Share

ಕನ್ನಡ ಚಿತ್ರರಂಗದಲ್ಲಿ ನಟ-ನಿರ್ದೇಶಕ ಶ್ರೀನಿ (ಎಂ.ಜಿ. ಶ್ರೀನಿವಾಸ್​) ಅವರು ಹಲವು ಸಿನಿಮಾಗಳ ಮೂಲಕ ಜನಮನ ಗೆದ್ದಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಓಲ್ಡ್​ ಮಾಂಕ್​’ ಚಿತ್ರಕ್ಕೆ ಶ್ರೀನಿ (Srini) ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿಯೂ ನಟಿಸಿದರು. ಆ ಚಿತ್ರ ಸೂಪರ್ ಹಿಟ್​ ಆಯಿತು. ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್​ ಮಾಡಿದ ಬಳಿಕ ಟಿವಿಯಲ್ಲೂ ಪ್ರಸಾರವಾಗಿ ಪ್ರೇಕ್ಷಕರಿಂದ ಭೇಷ್​ ಎನಿಸಿಕೊಂಡಿದೆ. ಈಗ ಒಟಿಟಿಗೂ ‘ಓಲ್ಡ್​ ಮಾಂಕ್​’ ಕಾಲಿಟ್ಟು ಸದ್ದು ಮಾಡುತ್ತಿದೆ. ಈ ಗೆಲುವಿನ ಬೆನ್ನಲ್ಲೇ ಅವರ ಹೊಸ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಬಾರಿ ಶ್ರೀನಿ ಅವರಿಗೆ ಬಂಪರ್​ ಚಾನ್ಸ್​ ಸಿಕ್ಕಿದೆ. ಪ್ರತಿಷ್ಠಿತ ಪ್ರೊಡಕ್ಷನ್​ ಹೌಸ್​ ಮತ್ತು ಸೂಪರ್​ ಸ್ಟಾರ್​ ನಟನ ಜೊತೆ ಕೆಲಸ ಮಾಡುವ ಅವಕಾಶ ಅವರ ಪಾಲಾಗಿದೆ. ಹೌದು, ಸಂದೇಶ್​ ನಾಗರಾಜ್​ (Sandesh Nagaraj) ಅವರ ‘ಸಂದೇಶ್​ ಪ್ರೊಡಕ್ಷನ್ಸ್​’ ಬ್ಯಾನರ್​ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾಗೆ ಶ್ರೀನಿ ನಿರ್ದೇಶನ ಮಾಡಲಿದ್ದಾರೆ. ಆ ಚಿತ್ರಕ್ಕೆ ಶಿವರಾಜ್​ಕುಮಾರ್​ (Shivarajkumar) ಹೀರೋ. ಈ ಸೂಪರ್​ ಕಾಂಬಿನೇಷನ್​ನ ಸಿನಿಮಾಗೆ ‘ಘೋಸ್ಟ್​’ ಎಂದು ಶೀರ್ಷಿಕೆ ಇಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ ಕೀರ್ತಿ ‘ಸಂದೇಶ್​ ಪ್ರೊಡಕ್ಷನ್ಸ್​’ ಸಂಸ್ಥೆಗೆ ಇದೆ. ‘ಮಣ್ಣಿನ ದೋಣಿ’, ‘ಮಿಸ್ಟರ್​ ಐರಾವತ’, ‘ಪ್ರಿನ್ಸ್​’, ‘ಅಮರ್​’ ಮುಂತಾದ ಸಿನಿಮಾಗಳು ಈ ಬ್ಯಾನರ್​ನಿಂದಲೇ ಮೂಡಿಬಂದಿದೆ. ಈಗ ಕೆಲವು ಪ್ರಾಜೆಕ್ಟ್​​ಗಳಿಗೆ ಸಂದೇಶ್​ ನಾಗರಾಜ್​ ಅವರು ಬಂಡವಾಳ ಹೂಡುತ್ತಿದ್ದಾರೆ. ಆ ಪೈಕಿ ಶಿವರಾಜ್​ಕುಮಾರ್​ ಮತ್ತು ಶ್ರೀನಿ ಕಾಂಬಿನೇಷನ್​ನ ‘ಗೋಸ್ಟ್​’ ಸಿನಿಮಾ ಸಖತ್​ ನಿರೀಕ್ಷೆ ಮೂಡಿಸಿದೆ.

‘ಶ್ರೀನಿವಾಸ ಕಲ್ಯಾಣ’, ‘ಬೀರ್​ಬಲ್​’, ‘ಓಲ್ಡ್​ ಮಾಂಕ್​’ ಮುಂತಾದ ಸಿನಿಮಾಗಳ ಮೂಲಕ ಶ್ರೀನಿ ಅವರು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ದೊಡ್ಡ ಜವಾಬ್ದಾರಿ ಅವರ ಹೆಗಲೇರಿದೆ. ಶಿವರಾಜ್​ಕುಮಾರ್​ ಅವರ ಸಿನಿಮಾಗೆ ನಿರ್ದೇಶನ ಮಾಡುವುದು ಎಂದರೆ ಸುಲಭದ ಮಾತಲ್ಲ. ಈ ಬಾರಿ ಶ್ರೀನಿ ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂದು ತಿಳಿದುಕೊಳ್ಳುವ ಕೌತುಕ ಜನರಲ್ಲಿ ಮೂಡಿದೆ.

‘ಘೋಸ್ಟ್​’ ಚಿತ್ರಕ್ಕೆ ಶ್ರೀನಿ ಅವರೇ ಕಥೆ ಬರೆದಿದ್ದಾರೆ. ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್​ಕುಮಾರ್​ ಜೊತೆ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಕೂಡ ಚಾಲ್ತಿಯಲ್ಲಿದೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ‘ಓಲ್ಡ್​ ಮಾಂಕ್​’ ಗೆಲುವಿನಿಂದ ಶ್ರೀನಿ ಖುಷಿಯಾಗಿದ್ದಾರೆ. ಪ್ರೇಕ್ಷಕರು ಅವರಿಗೆ ಪ್ರತಿ ದಿನ ಅಭಿನಂದನೆಯ ಸಂದೇಶ ಕಳಿಸುತ್ತಿದ್ದಾರೆ. ಅದರ ಬೆನ್ನಲ್ಲೇ ಅವರ ‘ಘೋಸ್ಟ್​’ ಸಿನಿಮಾ ಅನೌನ್ಸ್​ ಆಗಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ನೀಡಿದೆ.

ಪ್ರಭುದೇವ ಜೊತೆಗೂ ಸಂದೇಶ್​ ನಾಗರಾಜ್​ ಸಿನಿಮಾ:

ಹಲವು ಚಿತ್ರಗಳಿಗೆ ‘ಸಂದೇಶ್​ ಪ್ರೊಡಕ್ಷನ್ಸ್​’ ಸಂಸ್ಥೆ ಬಂಡವಾಳ ಹೂಡುತ್ತಿದೆ. ಕೆಲವೇ ದಿನಗಳ ಹಿಂದೆ ಈ ಬ್ಯಾನರ್​ನಿಂದ ಒಂದು ಬಿಗ್​ ನ್ಯೂಸ್​ ಹೊರಬಿದ್ದಿತ್ತು. ಖ್ಯಾತ ನಟ, ನಿರ್ದೇಶಕ, ಡ್ಯಾನ್ಸ್​ ಕೊರಿಯೋಗ್ರಾಫರ್​ ಪ್ರಭುದೇವ ಜೊತೆಗೆ ಸಂದೇಶ್​ ನಾಗರಾಜ್​ ಸಿನಿಮಾ ಮಾಡುವುದು ಖಚಿತ ಆಗಿತ್ತು. ಅದೊಂದು ಪ್ಯಾನ್​ ಇಂಡಿಯಾ ಸಿನಿಮಾ ಆಗಿರಲಿದ್ದು, ಈಗಾಗಲೇ ಪ್ರಭುದೇವ ಮತ್ತು ಸಂದೇಶ್​ ನಾಗರಾಜ್​ ಅವರು ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂದು ವರದಿ ಆಗಿತ್ತು. ಆ ಸಿನಿಮಾ ಬಗ್ಗೆಯೂ ಹೆಚ್ಚಿನ ಮಾಹಿತಿ ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.

ಇದನ್ನೂ ಓದಿ:

Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್​ ನೀಡುವ ‘ಓಲ್ಡ್​ ಮಾಂಕ್​’

ಯಶ್ ಮಾತಿಗೆ ಕಣ್ಣೀರು ಹಾಕಿದ ಶಿವರಾಜ್​ಕುಮಾರ್

ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್