ಯಶ್ ಮಾತಿಗೆ ಕಣ್ಣೀರು ಹಾಕಿದ ಶಿವರಾಜ್​ಕುಮಾರ್

‘ಕೆಜಿಎಫ್​ 2’ ಚಿತ್ರ ಟ್ರೇಲರ್ ರಿಲೀಸ್ ಆಗಿದೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನೆರವೇರಿದೆ. ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿ ಟ್ರೇಲರ್​ ಲಾಂಚ್ ನಡೆದಿದೆ. ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಯಶ್​ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Mar 28, 2022 | 8:21 AM

‘ಕೆಜಿಎಫ್​ 2’ ಚಿತ್ರ (KGF Chapter 2) ಟ್ರೇಲರ್ ರಿಲೀಸ್ ಆಗಿದೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನೆರವೇರಿದೆ. ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿ ಟ್ರೇಲರ್​ ಲಾಂಚ್ ನಡೆದಿದೆ. ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಯಶ್​ ಮಾತನಾಡಿದ್ದಾರೆ. ‘ಅಪ್ಪು ಸರ್​ನ ನಾವು ಮಿಸ್ ಮಾಡಿಕೊಳ್ತಾ ಇದೀವಿ. ಹೊಂಬಾಳೆ (Hombale Films) ಸ್ಟಾರ್ಟ್​ ಆಗಿದ್ದು ಅಪ್ಪು ಅವರ ಚಿತ್ರದಿಂದ. ಶಿವಣ್ಣ ಇಲ್ಲಿದ್ದಾರೆ. ಅವರು ಅಳ್ತಾ ಇರೋದನ್ನು ನೋಡೋಕಾಗಲ್ಲ. ಪುನೀತ್​ ಯಾವಾಗಲೂ ಜೀವಂತ. ಅವರ ಪ್ರೀತಿ ನಮ್ಮ ಹೃದಯದಲ್ಲಿರುತ್ತದೆ. ಶಿವಣ್ಣ ನೀವು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವು ಮುಂದೆ ನಡಿತೀವಿ’ ಎಂದರು ರಾಕಿಂಗ್​ ಸ್ಟಾರ್​. ಯಶ್ (Yash)​ ಮಾತನ್ನು ಕೇಳಿ ಶಿವರಾಜ್​ಕುಮಾರ್ ಕಣ್ಣಲ್ಲಿ ನೀರು ಬಂದಿದೆ. ಶಿವರಾಜ್​ಕುಮಾರ್ ಈ ಮೊದಲು ಕೂಡ ಅಪ್ಪು ಅವರನ್ನು ನೆನೆಪಿಸಿಕೊಂಡು ಅತ್ತಿದ್ದಾರೆ.

ಇದನ್ನೂ ಓದಿ:
‘ಕೆಜಿಎಫ್​ 2’ ವೀಕ್ಷಿಸಿದ್ದಾರೆ ರಾಧಿಕಾ ಪಂಡಿತ್​; ಸಿನಿಮಾ ಬಗ್ಗೆ ಅವರು ಹೇಳಿದ್ದಿಷ್ಟು 

‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​

Follow us on

Click on your DTH Provider to Add TV9 Kannada