ಮನೆಗಿಂತ ಮನಸ್ಸು ಬಹಳ ದೊಡ್ಡದು; ಶ್ರೀ ಸಿದ್ಧೇಶ್ವರ ಸ್ವಾಮೀಜಿ
ಮನುಷ್ಯನಿಗೆ ಮನಸ್ಸು ಎನ್ನುವುದು ಬಹಳ ಮುಖ್ಯ. ನಮ್ಮ ಮನೆ ಸಣ್ಣದಿದ್ದರು ಪರವಾಗಿಲ್ಲ ಆದರೆ ಮನಸ್ಸು ಮಾತ್ರ ದೊಡ್ಡದಿರುಬೇಕು. ಮನೆ ನೋಡಿದರೆ ಬಡವರು. ಆದರೆ ಮನಸ್ಸು ನೊಡಿದರೆ ಬಲ್ಲವರು.
ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ (Siddeshwara Swamiji) ಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಮನುಷ್ಯನಿಗೆ ಮನಸ್ಸು ಎನ್ನುವುದು ಬಹಳ ಮುಖ್ಯ. ನಮ್ಮ ಮನೆ ಸಣ್ಣದಿದ್ದರು ಪರವಾಗಿಲ್ಲ ಆದರೆ ಮನಸ್ಸು ಮಾತ್ರ ದೊಡ್ಡದಿರುಬೇಕು. ಮನೆ ನೋಡಿದರೆ ಬಡವರು. ಆದರೆ ಮನಸ್ಸು ನೊಡಿದರೆ ಬಲ್ಲವರು. ಜಗತ್ತಿನಲ್ಲಿರುವ ಸಾಕಷ್ಟು ಶ್ರೇಷ್ಠರು, ಸಂತರು ಯಾರು ಕೂಡ ದೊಡ್ಡ ದೊಡ್ಡ ಮನೆಗಳನ್ನ ಹೊಂದಿಲ್ಲ ಆದರೆ ಅವರು ಎಷ್ಟು ಸುಂದರ ಜೀವನ ನಡೆಸಿದರು. ಸಾಕ್ರೆಟಿಸ್ ಎನ್ನುವ ಪ್ರಸಿದ್ಧ ವ್ಯಕ್ತಿ ಇದ್ದ. ಆತನ ಮಾತು ಕೇಳಲು ಸಾವಿರ ಸಾವಿರ ಯುವಕರು ಸೇರುತ್ತಿದ್ದರು. ಆತನ ಮಾತು ಆ ಸಾವಿರ ಯುವಕರ ಮನಸ್ಸಿನ ಕತ್ತಲೆಯನ್ನ ಅಜ್ಞಾನವನ್ನ ತೆಗೆದುಹಾಕುತ್ತಿತ್ತು. ಅಂತಹ ಸುಂದರ ಜೀವನದ ಮಾತುಗಳನ್ನು ಹೇಳುತ್ತಿದ್ದರು.
ಇದನ್ನೂ ಓದಿ;
IPL 2022, PBKS vs RCB: ಪಂದ್ಯ ಸೋತರೂ ಎದುರಾಳಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಆರ್ಸಿಬಿ: ಏನದು ಗೊತ್ತೇ?