ಆನೆಗಳ ಹಿಂಡನ್ನು ಕಾಡಿಗಟ್ಟಲು ಮೈಸೂರಿನಿಂದ ಚಿಕ್ಕಮಗಳೂರಿಗೆ ಬಂದ ದಸರಾ ಆನೆಗಳು; ವಿಡಿಯೋ ನೋಡಿ
ಈಗಾಗಲೇ ರೈತರು ಆನೆಗಳ ಕಾಟಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಬೀಕನಹಳ್ಳಿ, ಹಂಪಾಪುರ, ಹುಳಿಯಾರದಹಳ್ಳಿ ಸುತ್ತಮುತ್ತ ಕಾಡಾನೆಗಳ ಉಪಟಳ ಜೋರಾಗಿದ್ದು, ಜಿಲ್ಲೆಯ ಕೆಲ ಭಾಗದ ಜನರು ಆತಂಕಗೊಂಡಿದ್ದಾರೆ.
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ (Chikkamagalur) ಕಾಡಾನೆಗಳ ಕಾಟ ಜೋರಾಗಿದೆ. ರೈತರು ಬೆಳೆದ ಬೆಳೆಗಳನ್ನ ಆನೆಗಳು ನಾಶ ಮಾಡುತ್ತಿವೆ. ಆನೆಗಳ (Elephants) ಕಾಟಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈಗಾಗಲೇ ರೈತರು ಆನೆಗಳ ಕಾಟಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಬೀಕನಹಳ್ಳಿ, ಹಂಪಾಪುರ, ಹುಳಿಯಾರದಹಳ್ಳಿ ಸುತ್ತಮುತ್ತ ಕಾಡಾನೆಗಳ ಉಪಟಳ ಜೋರಾಗಿದ್ದು, ಜಿಲ್ಲೆಯ ಕೆಲ ಭಾಗದ ಜನರು ಆತಂಕಗೊಂಡಿದ್ದಾರೆ. ಹೀಗಾಗಿ ಕಾಡಾನೆಗಳನ್ನ ಕಾಡಿಗೆ ಅಟ್ಟಲು ನಾಗರಹೊಳೆ ಕ್ಯಾಂಪ್ ನಿಂದ ದಸರಾ ಆನೆಗಳನ್ನ ತರಲಾಗಿದೆ. ಅರ್ಜುನ, ಭೀಮನಿಗೆ 75ಕ್ಕೂ ಅಧಿಕ ಸಿಬ್ಬಂದಿಗಳು ಸಾಥ್ ಕೊಟ್ಟಿದ್ದಾರೆ. ಡಿಎಫ್ಒ ಕ್ರಾಂತಿ ನೇತೃತ್ವದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ನಡೆದಿದೆ.
Latest Videos