‘ನವರಸ ನಾಯಕ ಆಗಿದ್ರೆ ಮಾತ್ರ ಹೀಗೆ ನಟಿಸೋಕೆ ಸಾಧ್ಯ’; ಸುದೀಪ್​ ನಟನೆ ಬಗ್ಗೆ ಜಗ್ಗೇಶ್​ ಹೊಗಳಿಕೆ

‘ತೋತಾಪುರಿ’ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರ ಬಗ್ಗೆ ಜಗ್ಗೇಶ್​ ಮಾತನಾಡಿದ ವಿಡಿಯೋ ಇಲ್ಲಿದೆ..

TV9kannada Web Team

| Edited By: Madan Kumar

Apr 21, 2022 | 4:39 PM

ಕಿಚ್ಚ ಸುದೀಪ್ (Kichcha Sudeep)​ ಅವರಿಗೆ ಚಿತ್ರರಂಗದಲ್ಲಿನ ಅನುಭವ ಅಪಾರ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಜಮೌಳಿ, ಅಮಿತಾಭ್​ ಬಚ್ಚನ್​, ರಾಮ್​ ಗೋಪಾಲ್​ ವರ್ಮಾ ಮುಂತಾದವರ ಜೊತೆ ಕೆಲಸ ಮಾಡುವ ಮೂಲಕ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅವರ ಕುರಿತು ನಟ ಜಗ್ಗೇಶ್​ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ತೋತಾಪುರಿ’ ಸಿನಿಮಾದ (Totapuri Movie) ಟೀಸರ್​ ಲಾಂಚ್​ ಕಾರ್ಯಕ್ರಮಕ್ಕೆ ಸುದೀಪ್​ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಈ ವೇಳೆ ‘ಈಗ’ ಸಿನಿಮಾದಲ್ಲಿನ ಅವರ ನಟನೆಯನ್ನು ಜಗ್ಗೇಶ್​ (Jaggesh) ಕೊಂಡಾಡಿದರು. ‘ನವರಸ ನಾಯಕ ಆಗಿದ್ದರೆ ಮಾತ್ರ ಈ ರೀತಿ ನಟಿಸಲು ಸಾಧ್ಯ’ ಎಂದು ಅವರು ಶ್ಲಾಘಿಸಿದರು.

ಇದನ್ನೂ ಓದಿ:

ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಸುದೀಪ್​ ಎಂದ ನಟ ಜಗ್ಗೇಶ್

Fact Check: ‘ಕೆಜಿಎಫ್ 2’ ಬಗ್ಗೆ ಸುದೀಪ್​ ರಿಯಾಕ್ಷನ್ ನೀಡಿದ್ದಾರೆ ಎಂಬ ವಿಡಿಯೋದ ಅಸಲಿಯತ್ತೇನು?

Follow us on

Click on your DTH Provider to Add TV9 Kannada