ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಧನಂಜಯ
‘ಹೆಡ್ ಬುಷ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ತಂಡ ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಭಾಗಿಯಾಗಲಿದೆ. ಬೆಂಗಳೂರಿನಲ್ಲೇ ಈ ಸಿನಿಮಾದ ಶೂಟಿಂಗ್ ನಡೆದಿದೆ.
ಧನಂಜಯ ಅವರು (Dhananjay) ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಪ್ರತಿ ಚಿತ್ರದ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುತ್ತಾರೆ. ಈಗ ಅವರ ನಟನೆಯ ‘ಹೆಡ್ ಬುಷ್’ ಚಿತ್ರದ (Head Bush) ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ತಂಡ ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಭಾಗಿಯಾಗಲಿದೆ. ಬೆಂಗಳೂರಿನಲ್ಲೇ ಈ ಸಿನಿಮಾದ ಶೂಟಿಂಗ್ ನಡೆದಿದೆ. ಸಿನಿಮಾದ ಕಥೆ ರೆಟ್ರೋ ಶೈಲಿಯಲ್ಲಿ ಸಾಗಲಿದೆ. ಭೂಗತ ದೊರೆ ಎಂ.ಪಿ. ಜಯರಾಜ್ ಜೀವನಾಧಾರಿತ ಸಿನಿಮಾ ‘ಹೆಡ್ ಬುಷ್’. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970ರ ಸಮಯದಲ್ಲಿ ಬೆಂಗಳೂರಿನ ಭೂಗತ ಜಗತ್ತು ಹೇಗಿತ್ತು ಎಂಬುದನ್ನು ಈ ಸಿನಿಮಾ ಮೂಲಕ ಶೂನ್ಯ ತೋರಿಸಲು ಹೊರಟಿದ್ದಾರೆ. ಈ ಚಿತ್ರಕ್ಕಾಗಿ ಅನೇಕ ಸೆಟ್ಗಳನ್ನು ಹಾಕಲಾಗಿದೆ. ಜಯರಾಜ್ ಪಾತ್ರದಲ್ಲಿ ಧನಂಜಯ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಧನಂಜಯಗೆ ಸುದೀಪ್ ಸ್ಪೆಷಲ್ ಟ್ರೀಟ್; ಕಿಚ್ಚನ ಕೈರುಚಿ ಸವಿದ ಡಾಲಿ ಫುಲ್ ಖುಷ್
ಧನಂಜಯ ನಟನೆಯ ‘ಹೊಯ್ಸಳ’ ಚಿತ್ರಕ್ಕೆ ನೆರವೇರಿತು ಮುಹೂರ್ತ; ಯಾರೆಲ್ಲಾ ಭಾಗಿ?
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

