ಮದ್ಯದ ನಶೆಯಲ್ಲಿದ್ದ ಚಾಲಕ ಲಾರಿಯನ್ನು ರಸ್ತೆ ಬಿಟ್ಟು ಫುಟ್ಪಾತ್ ಮೇಲೆ ಹತ್ತಿಸಿದ ಘಟನೆ ರಾಯಚೂರಿನಲ್ಲಿ
ಲಾರಿ ಗುದ್ದಿದ ರಭಸಕ್ಕೆ ಕಂಪೌಂಡ್ ಗೋಡೆ ಧ್ವಂಸಗೊಂಡಿದೆ. ಲಾರಿಗೂ ಹಾನಿಯಾಗಿರುವುದನ್ನು ವಿಡಿಯೋನಲ್ಲಿ ನೀವು ನೋಡಬಹುದು. ಆದರೆ ಅಕ್ಕಿಯ ಚೀಲಗಳಿಗೆ ಏನೂ ಆಗಿಲ್ಲ. ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ಕುಡಿದು ವಾಹನ ಓಡಿಸಬೇಡಿ, ಮದ್ಯದ ಅಮಲಿನಲ್ಲಿ (inebriates state) ಚಿಕ್ಕ ವಾಹನವಾಗಲೀ ಅಥವಾ ದೊಡ್ಡದು, ಓಡಿಸಬಾರದು-ಎಂಬ ಸೈನೇಜ್ ಗಳನ್ನು (signages) ನಾವು ಎಲ್ಲ ಪ್ರಮುಖ ರಸ್ತೆಗಳಲ್ಲಿ ನೋಡುತ್ತಿರುತ್ತೇವೆ. ರಾಯಚೂರಿನಲ್ಲೂ ಅಂಥ ಸೈನೇಜ್ ಗಳನ್ನು ನೋಡಬಹುದು. ಆದರೆ, ಮದ್ಯದ ಅಮಲಿನಲ್ಲಿ ಲಾರಿ ಓಡಿಸುವಾಗ ನಿಯಂತ್ರ ತಪ್ಪಿ ಅಗಲವಾದ ರಸ್ತೆ ಬಿಟ್ಟು ಫುಟ್ ಪಾತ್ ಮೇಲೆ ಹರಿಸಿರುವ ತಮಿಳುನಾಡು (Tamil Nadu) ನೋಂದಣಿ ಹೊಂದಿರುವ ಲಾರಿಯ ಚಾಲಕನಿಗೆ ಕನ್ನಡ ಓದಲು ಬರಲಿಕ್ಕಲ್ಲ. ಚಾಲಕ ಅದೇ ರಾಜ್ಯದನಾಗಿರಬಹುದೆಂದು ನಮ್ಮ ಊಹೆ ಮಾರಾಯ್ರೇ. ಅಕ್ಕಿ ಮೂಟೆಗಳನ್ನು ಹೊತ್ತಿದ್ದ ಲಾರಿ ರಾಯಚೂರಿನಿಂದ (Riachur) ಮಂತ್ರಾಲಯದ ಕಡೆ ಹೊರಟಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ರಾಯಚೂರಿನ ಸ್ಟೇಶನ್ ರಸ್ತೆ.
ಚಾಲಕ ಲಾರಿಯನ್ನು ಫುಟ್ಪಾತ್ ಮೇಲೆ ಹತ್ತಿಸಿ ಲೋಕಾಯುಕ್ತ ಕಚೇರಿಯ ಕಂಪೌಂಡಿಗೆ ಗುದ್ದಿದ್ದಾನೆ. ಅದೃಷ್ಟವಶಾತ್ ಡ್ರೈವರ್ ಮತ್ತು ಕ್ಲೀನರ್ ಇಬ್ಬರಿಗೂ ಗಾಯವಾಗಿಲ್ಲ. ರಾಯಚೂರನಲ್ಲಿ ಅತ್ಯುತ್ತಮ ಗುಣಮಟ್ಟದ ಅಕ್ಕಿ ಸಿಗುತ್ತದೆ. ಇದರ ಪಕ್ಕದ ಜಿಲ್ಲೆ ಕಲಬುರಗಿ ತೊಗರಿ ಕಣಜ ಎನಿಸಿಕೊಂಡಿರುವುದು ನಿಮಗೆ ಗೊತ್ತಿರಬಹುದು. ಅದು ತೊಗರಿಗೆ ಪ್ರಖ್ಯಾತಿ ಹೊಂದಿದ್ದರೆ ರಾಯಚೂರು ಅಕ್ಕಿಗೆ.
ಲಾರಿ ಗುದ್ದಿದ ರಭಸಕ್ಕೆ ಕಂಪೌಂಡ್ ಗೋಡೆ ಧ್ವಂಸಗೊಂಡಿದೆ. ಲಾರಿಗೂ ಹಾನಿಯಾಗಿರುವುದನ್ನು ವಿಡಿಯೋನಲ್ಲಿ ನೀವು ನೋಡಬಹುದು. ಆದರೆ ಅಕ್ಕಿಯ ಚೀಲಗಳಿಗೆ ಏನೂ ಆಗಿಲ್ಲ. ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟದಲ್ಲೊಂದು ವಿಶಿಷ್ಟ ಆಚರಣೆ; ಬೆಂಕಿ ಚೆಂಡುಗಳನ್ನು ಪರಸ್ಪರ ಎಸೆದು ಅಗ್ನಿ ಖೇಲಿ ಆಚರಿಸಿದ ಭಕ್ತರು; ಇಲ್ಲಿದೆ ವೈರಲ್ ವಿಡಿಯೋ