ಶಿರಾ ಹೆದ್ದಾರಿಯಲ್ಲಿ ಪೊಲೀಸರು ವಾಹನ ಚಾಲಕರ ಮೇಲೆ ದಂಡ ವಿಧಿಸುತ್ತಾರೆ, ರಸೀತಿ ಕೊಡೋದಿಲ್ಲ!
ವಸೂಲಿ ಮಾಡಿದ ಹಣಕ್ಕೆ ರಸೀದಿ ನೀಡಿದರೆ ಮಾತ್ರ ಅದು ಸರ್ಕಾರಕ್ಕೆ ಹೋಗುತ್ತದೆ. ಆದರೆ ಇವರು ಅದನ್ನು ನೀಡುತ್ತಿಲ್ಲ. ಜನರಿಗೂ ರಸೀದಿ ಬೇಕಿಲ್ಲ. ಯಾಕೆಂದರೆ ಇಲ್ಲಿ ನಡೆಯುತ್ತಿರೋದು ಚೌಕಾಶಿಯುಕ್ತ ವ್ಯವಹಾರ. ರೂ. 500 ದಂಡ ಆಗುತ್ತದೆ ಎಂದರೆ, ವಾಹನ ಚಾಲಕರು ನೂರಿನ್ನೂರು ಕೊಡ್ತೀವಿ ಅನ್ನುತ್ತಾರೆ.
ತುಮಕೂರು: ಹೆದ್ದಾರಿ ದರೋಡೆ (highway robbery), ಹಗಲು ದರೋಡೆ ಪದಗಳನ್ನು ನೀವು ಕೇಳಿದ್ದೀರಿ. ಈ ಹೆಸರಲ್ಲಿ ಬಂದಿಬಹುದಾದ ಸಿನಿಮಾಗಳನ್ನೂ ನೋಡಿರುತ್ತೀರಿ. ನೋಡಿಲ್ಲವಾದರೆ ಅದರ ಒಂದು ಟೀಸರ್ (teaser) ನಿಮಗಾಗಿ ಈ ವಿಡಿಯೋನಲ್ಲಿ! ಈ ದೃಶ್ಯ ಗುಟ್ಟಾಗಿ ಸೆರೆ ಹಿಡಿದಿದ್ದು ತುಮಕೂರು. ಏನಾಗುತ್ತಿದೆ ಅಂತ ನೀವೇ ನೋಡಿ ಮಾರಾಯ್ರೇ. ಇಲ್ಲಿ ಕಾಣುತ್ತಿರುವ ಇಬ್ಬರು ಖಾಕಿ ಸಮವಸ್ತ್ರಧಾರಿಗಳು ಪ್ರಾಯಶಃ ಶಿರಾದ (Sira) ಒಂದು ಪೊಲೀಸ್ ಠಾಣೆಯವರಿರಬಹುದು. ಠಾಣೆ ಯಾವುದಾದರೇನು ಹೆದ್ದಾರಿ ದರೋಡೆಯಲ್ಲಿ ಇವರಿಬ್ಬರು ನಿಷ್ಣಾತರು. ಹೆದ್ದಾರಿಯಲ್ಲಿ ವಾಹನಗಳಲ್ಲಿ ಹೋಗುತ್ತಿರುವ ಕೆಲವರನ್ನು ಇವರು ಅಡ್ಡಹಾಕಿ ನಿಲ್ಲಿಸಿ ದಂಡ ವಸೂಲಿ ಮಾಡುತ್ತಿದ್ದಾರೆ. ಜನರಿಂದ ಹಣ ಪಡೆಯುತ್ತಿರುವುದು ನಿಜ, ಆದರೆ ಅದು ನೇರವಾಗಿ ಅವರ ಜೇಬಿಗೆ ಹೋಗುತ್ತಿದೆ. ವಿಡಿಯೋನಲ್ಲಿ ನಿಮಗದು ಸ್ಪಷ್ಟವಾಗಿ ಕಾಣುತ್ತದೆ.
ವಸೂಲಿ ಮಾಡಿದ ಹಣಕ್ಕೆ ರಸೀದಿ ನೀಡಿದರೆ ಮಾತ್ರ ಅದು ಸರ್ಕಾರಕ್ಕೆ ಹೋಗುತ್ತದೆ. ಆದರೆ ಇವರು ಅದನ್ನು ನೀಡುತ್ತಿಲ್ಲ. ಜನರಿಗೂ ರಸೀದಿ ಬೇಕಿಲ್ಲ. ಯಾಕೆಂದರೆ ಇಲ್ಲಿ ನಡೆಯುತ್ತಿರೋದು ಚೌಕಾಶಿಯುಕ್ತ ವ್ಯವಹಾರ. ರೂ. 500 ದಂಡ ಆಗುತ್ತದೆ ಎಂದರೆ, ವಾಹನ ಚಾಲಕರು ನೂರಿನ್ನೂರು ಕೊಡ್ತೀವಿ ಅನ್ನುತ್ತಾರೆ. ಆಮೇಲೆ ಪೊಲೀಸ ಒಂದು ರೇಟ್ ಹೇಳುತ್ತಾರೆ. ಒಬ್ಬ ವ್ಯಕ್ತಿ ವ್ಯವಹಾರ ಕುದುರಿಸಿ ಹಣ ನೀಡುತ್ತಾರೆ, ಅದನ್ನು ಪೊಲೀಸ್ ತಮ್ಮ ಖಾಕಿ ಪ್ಯಾಂಟಿನ ಹಿಂಬದಿಗೆ ಜಾರಿಸುತ್ತಾರೆ. ಆ ಜೇಬಲ್ಲಿ ಕೈ ಹಾಕಿದರೆ ಬೇರೆ ಬೇರೆ ಮುಖಬೆಲೆಯ ಹತ್ತಾರು ನೋಟುಗಳು ಸಿಗಬಹುದು!
ಚೌಕಾಶಿ ಯಾವಮಟ್ಟಿಗೆ ನಡೆಯುತ್ತದೆ ಅಂತ ಪೊಲೀಸ್ ಹೇಳುವ ಮಾತಿನಲ್ಲೇ ಗೊತ್ತಾಗುತ್ತದೆ. ಜನ ನೂರು ಕೊಡ್ತೀನಿ ಇನ್ನೂರು ಕೊಡ್ತೀನಿ ಅಂತ ಹೇಳುತ್ತಿದ್ದರೆ ಅವರು ಸರಿ ಎಷ್ಟೆಷ್ಟು ಕೊಡ್ತೀರೋ ಕೊಡಿ, ಎಲ್ಲರ ದಂಡವನ್ನು ಒಂದರಲ್ಲೇ ಸೇರಿಸಿ ರಸೀದಿ ಹರಿಯಬಹುದು ಅನ್ನುತ್ತಾರೆ. ಇದು ದಿನನಿತ್ಯ ನಡೆಯುವ ಶೋ ಅಂತ ರಸ್ತೆಯಲ್ಲಿ ರೆಗ್ಯುಲರ್ ಆಗಿ ಓಡಾಡುವ ಜನ ಹೇಳುತ್ತಾರೆ.
ಇದನ್ನೂ ಓದಿ: Viral Video: ಮೀರತ್ನಲ್ಲಿ ನಡು ರಸ್ತೆಯಲ್ಲೇ ವ್ಯಕ್ತಿಯನ್ನು ಇರಿದು ಕೊಂದ ದುಷ್ಟರು; ಸಿಸಿಟಿವಿ ವಿಡಿಯೋ ವೈರಲ್