ಪಿಎಸ್ ಐ ನೇಮಕಾತಿ ಹಗರಣದಲ್ಲಿ ಆರೋಪಿಯ ಮನೆಗೆ ಹೋಗಿದ್ದ ಗೃಹ ಸಚಿವರಿಗೆ ನೊಟೀಸ್ ನೀಡಿಲ್ಲ ಯಾಕೆ? ಡಿಕೆ ಶಿವಕುಮಾರ
ಏನಾಗಿದೆ ನಮ್ಮ ಮುಖ್ಯಮಂತ್ರಿಗಳಿಗೆ? ಇಂಥ ಸೂಕ್ಷ್ಮ ವಿಷಯವೂ ಅವರಿಗೆ ಗೊತ್ತಾಗಲಿಲ್ಲವೇ? ಅಕ್ರಮವನ್ನು ಬಯಲಿಗೆಳೆದಿರುವ ನಮ್ಮ ಮುಖಂಡನಿಗೆ ನೊಟೀಸ್ ಕಳಿಸುವ ನೈತಿಕತೆ ಎಲ್ಲಿದೆ ಇವರಿಗೆ? ಎಂದು ಅವರು ಕೇಳಿದರು. ಸಿಐಡಿ ಕಚೇರಿಗೆ ಹೋಗಬಾರದು, ಹೋಗಲೇಕೂಡದು, ಏನಾಗುತ್ತೋ ನೋಡೇಬಿಣೋಣ ಅಂತ ಖರ್ಗೆ ಅವರಿಗೆ ಹೇಳಿರುವುದಾಗಿ ಶಿವಕುಮಾರ್ ಹೇಳಿದರು
ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮವನ್ನು ಬಯಲಿಗೆಳೆದು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಸೂಕ್ತ ದಾಖಲಾತಿಯೊಂದಿಗೆ ಕಚೇರಿಗೆ ಹಾಜರಾಗುವಂತೆ ಸಿಐಡಿ (CID) ನೀಡಿರುವ ನೊಟೀಸ್ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಬೆಂಗಳೂರಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಿಂದೆ ವಿಶ್ವಾಸ್ ಅನ್ನವವರು ಶೇಕಡ 20 ಭ್ರಷ್ಟಾಚಾರದ ಬಗ್ಗೆ ಮಾತಾಡಿದಾಗ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಇನ್ನೊಂದು ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದಾಗ ಎಸಿಬಿ ಅಧಿಕಾರಿಗಳು ಯಾಕೆ ಅವರಿಬ್ಬರ ವಿರುದ್ಧ ಕೇಸ್ ದಾಖಲಿಸಿಕೊಂಡು ನೊಟೀಸ್ ನೀಡಲಿಲ್ಲ ಎಂದು ಕೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿಂದೊಮ್ಮೆ ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರ ಮನೆಗೆ ಭೇಟಿ ನೀಡಿ ದಿವ್ಯಾರಿಂದ ಸನ್ಮಾನ ಮಾಡಿಸಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಸಂಪುಟದಲ್ಲಿ ಮಹತ್ತರ ಖಾತೆ ಹೊಂದಿರುವ ಸಚಿವರನ್ನು ಏನಾದರೂ ಪ್ರಶ್ನಿಸಿದರೇ? ಅವರ ಮನೆಗೆ ಹೋಗಿದ್ದು ಯಾಕೆ ಅಂತ ಕೇಳಿದರೆ? ಅವರಿಗೆ ನೊಟೀಸ್ ನೀಡಿದರೆ? ಇಲ್ಲ. ಏನಾಗಿದೆ ನಮ್ಮ ಮುಖ್ಯಮಂತ್ರಿಗಳಿಗೆ? ಇಂಥ ಸೂಕ್ಷ್ಮ ವಿಷಯವೂ ಅವರಿಗೆ ಗೊತ್ತಾಗಲಿಲ್ಲವೇ? ಅಕ್ರಮವನ್ನು ಬಯಲಿಗೆಳೆದಿರುವ ನಮ್ಮ ಮುಖಂಡನಿಗೆ ನೊಟೀಸ್ ಕಳಿಸುವ ನೈತಿಕತೆ ಎಲ್ಲಿದೆ ಇವರಿಗೆ? ಎಂದು ಅವರು ಕೇಳಿದರು.
ಸಿಐಡಿ ಕಚೇರಿಗೆ ಹೋಗಬಾರದು, ಹೋಗಲೇಕೂಡದು, ಏನಾಗುತ್ತೋ ನೋಡೇಬಿಣೋಣ ಅಂತ ಖರ್ಗೆ ಅವರಿಗೆ ಹೇಳಿರುವುದಾಗಿ ಶಿವಕುಮಾರ್ ಹೇಳಿದರು.
ಒಬ್ಬ ದಲಿತ ಮುಖಂಡನಿಗೆ ವಿನಾಕಾರಣ ನೊಟೀಸು ನೀಡಿರುವುದು ದಲಿತ ಸಂಘಟನೆಗಳಿಗೆ ರೋಷ ತರಿಸಿದೆ. ತಮ್ಮ ಜೊತೆಯಿದ್ದ ಯುವ ದಲಿತ ನಾಯಕರನ್ನು ತೋರಿಸಿ ಇವರೆಲ್ಲ ರಾಜ್ಯದಾಂದ್ಯತ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಹೇಳಿದರು.
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

