ಕರ್ನಾಟದಲ್ಲೊಂದು ವಿಶಿಷ್ಟ ಆಚರಣೆ; ಬೆಂಕಿ ಚೆಂಡುಗಳನ್ನು ಪರಸ್ಪರ ಎಸೆದು ಅಗ್ನಿ ಖೇಲಿ ಆಚರಿಸಿದ ಭಕ್ತರು; ಇಲ್ಲಿದೆ ವೈರಲ್ ವಿಡಿಯೋ
ಶತಮಾನಗಳ ಹಿಂದಿನ ಸಂಪ್ರದಾಯದ ಅಂಗವಾಗಿ, ದೇವಸ್ಥಾನದಲ್ಲಿ ನೂರಾರು ಭಕ್ತರು ದುರ್ಗಾ ಮಾತೆಯ ಪೂಜೆಯನ್ನು ಸಲ್ಲಿಸಲು ಅದ್ಭುತವಾದ ಅಗ್ನಿಹೋತ್ರವನ್ನು ಮಾಡಿದರು. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಹಬ್ಬದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಕಟೀಲು : ದಕ್ಷಿಣ ಕನ್ನಡದ ಪ್ರಸಿದ್ಧ ಕಟೀಲು ದೇವಸ್ಥಾನದ ಉತ್ಸವದಲ್ಲಿ ಭಕ್ತರು (Devotees) ಪರಸ್ಪರ ಬೆಂಕಿಯ ಚೆಂಡುಗಳನ್ನು ಎಸೆಯುತ್ತಾ ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಸ್ಥಳೀಯ ಭಾಷೆಯಲ್ಲಿ ತೂಟೆದಾರ ಅಥವಾ ಅಗ್ನಿ ಖೇಲಿ ಎಂದು ಹೇಳಲಾಗುತ್ತದೆ. ಶತಮಾನಗಳ ಹಿಂದಿನ ಸಂಪ್ರದಾಯದ ಅಂಗವಾಗಿ, ದೇವಸ್ಥಾನದಲ್ಲಿ ನೂರಾರು ಭಕ್ತರು ದುರ್ಗಾ ಮಾತೆಯ ಪೂಜೆಯನ್ನು ಸಲ್ಲಿಸಲು ಅದ್ಭುತವಾದ ಅಗ್ನಿಹೋತ್ರವನ್ನು ಮಾಡಿದರು. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಹಬ್ಬದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಮಂಗಳೂರಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಿದ್ದಾರೆ. ಪುರುಷರು ಶರ್ಟ್ ಧರಿಸದೆ ಕೇವಲ ಧೋತಿ ಧರಿಸಿದ್ದು, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯನ್ನು ಸಮಾಧಾನಪಡಿಸಲು ಶತಮಾನಗಳಷ್ಟು ಹಳೆಯದಾದ ವಿಶಿಷ್ಟವಾದ ಆಚರಣೆಯಾದ ಅಗ್ನಿ ಖೇಲಿಯಲ್ಲಿ ಒಬ್ಬರಿಗೊಬ್ಬರು ತಾಳೆಗರಿಗಳಿಗೆ ಬೆಂಕಿ ಹಚ್ಚಿ ಎಸೆದರು. ಆಚರಣೆಯ ಭಾಗವಾಗಿ, ಜನರು ಕೇಸರಿ ಬಣ್ಣದ ಧೋತಿಯನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
#WATCH | Devotees hurled fire at each other as part of a fire ritual ‘Thoothedhara’ or ‘Agni Kheli’ to pay reverence to goddess Durga at Sri Durgaparameshwari temple in Kateel, Karnataka (22.04) pic.twitter.com/q4SHMFAGak
— ANI (@ANI) April 23, 2022
ವಿಶಿಷ್ಟ ಆಚರಣೆಗಳನ್ನು ವೀಕ್ಷಿಸಲು ಹಲವಾರು ಜನರು ನೆರೆದಿದ್ದರು. ಆಚರಣೆಯು ಸುಮಾರು 15 ನಿಮಿಷಗಳ ಕಾಲ ನಡೆಯುತ್ತದೆ. ನಂತರ ಅದನ್ನು ನಿಲ್ಲಿಸಲಾಗುತ್ತದೆ ಮತ್ತು ಭಕ್ತರು ದೇವಾಲಯವನ್ನು ಪ್ರವೇಶಿಸುತ್ತಾರೆ.
ಅಗ್ನಿ ಖೇಲಿ ಆಚರಣೆಯ ಬಗ್ಗೆ: ತೂಥೇಧಾರ ಅಥವಾ ಅಗ್ನಿ ಖೇಲಿ ಆಚರಣೆಯು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ದೇವಸ್ಥಾನದಲ್ಲಿ ಸತತ ಎಂಟು ದಿನಗಳ ಕಾಲ ಮಹಾ ಉತ್ಸವದ ಭಾಗವಾಗಿ ನಡೆಯುತ್ತದೆ. ಆಚರಣೆಯ ಪ್ರಕಾರ, ಪುರುಷರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಒಬ್ಬರನ್ನೊಬ್ಬರು ಎದುರಿಸುತ್ತಾರೆ ಮತ್ತು ಅವರು ಸುಡುವ ತಾಳೆಗರಿಗಳನ್ನು ದೂರದಿಂದ ಪರಸ್ಪರ ಎಸೆಯುತ್ತಾರೆ. ಗುಂಪಿನಲ್ಲಿರುವ ಅಷ್ಟೂ ಜನರನ್ನು ಹೊಡೆಯಲು ಪ್ರತಿಯೊಬ್ಬ ಮನುಷ್ಯನಿಗೆ ಐದು ಬೆಂಕಿ ಎಲೆಗಳನ್ನು ಎಸೆಯಲು ಅನುಮತಿ ಇದೆ. ಭಕ್ತರು ಹಬ್ಬದ ಎಂಟು ದಿನಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ ಮತ್ತು ಮಾಂಸ ಮತ್ತು ಮದ್ಯ ಸೇವನೆಯಿಂದ ದೂರವಿರುತ್ತಾರೆ. ಸುಟ್ಟಗಾಯಗಳಿಂದ ಬಳಲುತ್ತಿರುವ ಎಲ್ಲರಿಗೂ ಕುಂಕುಮ (ಕುಂಕುಮ ಮತ್ತು ಅರಿಶಿನದಿಂದ ಮಾಡಿದ ಕೆಂಪು ಪುಡಿ) ನೀರನ್ನು ಸಿಂಪಡಿಸಲಾಗುತ್ತದೆ. ನಂದಿನಿ ನದಿಯ ಮಧ್ಯದಲ್ಲಿರುವ ದ್ವೀಪದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:
Viral Video: ಬಿಹಾರನ ಸರ್ಕಾರಿ ಶಾಲೆ ಆವರಣದಲ್ಲಿ ಬರ್ತ್ ಡೇ ಪಾರ್ಟಿ; ಗನ್ ಹಿಡಿದು ಡ್ಯಾನ್ಸ್ ಮಾಡಿದ ಯುವಕರು
Viral Video: ಕಾಲುವೆಗೆ ಬಿದ್ದಿದ್ದ ನಾಯಿಯನ್ನು ಜೆಸಿಬಿಯಲ್ಲಿ ಕಾಪಾಡಿದ ಕಾರ್ಮಿಕ; ವಿಡಿಯೋಗೆ ಭಾರೀ ಮೆಚ್ಚುಗೆ