Viral Video: ಬಿಹಾರನ ಸರ್ಕಾರಿ ಶಾಲೆ ಆವರಣದಲ್ಲಿ ಬರ್ತ್ ಡೇ ಪಾರ್ಟಿ; ಗನ್ ಹಿಡಿದು ಡ್ಯಾನ್ಸ್​ ಮಾಡಿದ ಯುವಕರು

Viral Video: ಬಿಹಾರನ ಸರ್ಕಾರಿ ಶಾಲೆ ಆವರಣದಲ್ಲಿ ಬರ್ತ್ ಡೇ ಪಾರ್ಟಿ; ಗನ್ ಹಿಡಿದು ಡ್ಯಾನ್ಸ್​ ಮಾಡಿದ ಯುವಕರು
ಗನ್ ಹಿಡಿದು ಯುವಕ ಡ್ಯಾನ್ಸ್​ ಮಾಡುತ್ತಿರುವುದು

ಖಾಸಗಿ ಶಾಲೆಯೊಂದರಲ್ಲಿ ಪಾರ್ಟಿ ಆಯೋಜನೆ ಮಾಡಿ ಡ್ಯಾನ್ಸ್​ ಮಾಡಿದ್ದು ದೊಡ್ಡ ವಿಷಯವೇ ಅಲ್ಲ. ಆದರೆ ಪಾರ್ಟಿಯಲ್ಲಿ ಬಂದೂಕುಗಳು ಮತ್ತು ಸಿಗರೇಟ್‌ಗಳು ಸಹ ಕಾಣಿಸಿಕೊಂಡಿವೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 25, 2022 | 2:42 PM

ವೈರಲ್ ಸುದ್ದಿ: ಸೈಫ್ ಅಲಿ ಖಾನ್​ ಮತ್ತು ಸೋನಾಕ್ಷಿ ಅಭಿನಯಿಸಿರು ಬುಲೆಟ್ ರಾಜಾ ಚಿತ್ರದ ತಮಂಚೆ ಪೆ ಡಿಸ್ಕೋ ಹಾಡನ್ನು ನೀವು ಕೇಳಿರಬಹುದು. ತಮಾಂಚೆ ಎಂದರೆ ಗನ್, ಮತ್ತು ಡಿಸ್ಕೋ ಎಂದರೆ ಡಿಸ್ಕೋ ಎಂದರ್ಥ. ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿದ್ದು, ಹಾಡಿನಲ್ಲಿ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಕೈಯಲ್ಲಿ ಗನ್ (Gun)  ಹಿಡಿದು ನೃತ್ಯ ಮಾಡುವುದನ್ನು ನಾವು ನೋಡಿದ್ದೇವೆ. ಈ ರೀತಿಯಾಗಿ ಗನ್​ ಹಿಡಿದು ಸಿನಿಮಾದಲ್ಲಿ ಅಥವಾ ದರೋಡೆಕೋರರು ಡ್ಯಾನ್ಸ್ ಮಾಡುತ್ತಾರೆ.​​ ಆದರೆ ಶಾಲಾ ಹುಡುಗರು ಈ ರೀತಿಯಾಗಿ ಗನ್ ಹಿಡಿದು ಡ್ಯಾನ್ಸ್​ ಮಾಡಿದ್ದಾರೆ. ಬಿಹಾರದ ಗೋಪಾಲ್‌ಗಂಜ್‌ನ ಟಾಕಿಯಾ ಯಾಕೂಬ್ ಗ್ರಾಮದ ಸರ್ಕಾರಿ ಶಾಲೆಯೊಂದರ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. ಮಾಧ್ಯಮಿಕ ಶಾಲೆಯ ಆವರಣದಲ್ಲಿ ಹುಟ್ಟುಹಬ್ಬವನ್ನು ಆಯೋಜಿಸಲಾಗಿತ್ತು. ಯಾರಿಗಾಗಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಡಿಸ್ಕೋ ತರಹದ ದೃಶ್ಯವನ್ನು ನಿರ್ಮಿಸಿದ್ದು, ನೃತ್ಯಗಾರರನ್ನು ಸಹ ಕರೆಸಲಾಗಿದೆ.

ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ಪಾರ್ಟಿ ಆಯೋಜನೆ ಮಾಡಿ ಡ್ಯಾನ್ಸ್​ ಮಾಡಿದ್ದು ದೊಡ್ಡ ವಿಷಯವೇ ಅಲ್ಲ. ಆದರೆ ಪಾರ್ಟಿಯಲ್ಲಿ ಬಂದೂಕುಗಳು ಮತ್ತು ಸಿಗರೇಟ್‌ಗಳು ಸಹ ಕಾಣಿಸಿಕೊಂಡಿವೆ. ದೈನಿಕ್ ಭಾಸ್ಕರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಹಲವಾರು ಯುವಕರು ಕೆಲವು ನೃತ್ಯಗಾರರೊಂದಿಗೆ ಬಾಲಿವುಡ್ ಮತ್ತು ಹರ್ಯಾನ್ವಿ ಹಾಡುಗಳಿಗೆ ಡ್ಯಾನ್ಸ್​ ಮಾಡುವುದನ್ನು ಕಾಣಬಹುದು. ಯುವಕರು ಅಪ್ರಾಪ್ತರಾಗಿದ್ದರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಡಿಜೆ ಸಂಗೀತಕ್ಕೆ ನೃತ್ಯ ಮಾಡುವಾಗ ಮತ್ತು ಸಿಗರೇಟ್ ಸೇದುವಾಗ ಯುವಕನೊಬ್ಬ ಕ್ಯಾಮೆರಾದ ಕಡೆಗೆ ಗನ್ ತೋರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಮತ್ತೊಬ್ಬ ಯುವಕ ಕೂಡ ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ಅವನ ಪಕ್ಕದಲ್ಲಿ ನೃತ್ಯ ಮಾಡುತ್ತಿದ್ದಾನೆ. ಯುವಕರ ನಂತರ ಡ್ಯಾನ್ಸ್​ ಮಾಡುತ್ತಿರುವ ಹುಡುಗಿರತ್ತ ಬಂದೂಕುಗಳನ್ನು ತೋರಿಸುತ್ತಾರೆ, ಅವರು ತಮ್ಮಿಂದ ಎರಡೂ ಬಂದೂಕುಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಡಿಸ್ಕೋ ಬೀಟ್​ಗೆ ಅವಳು ಡ್ಯಾನ್ಸ್​ ಮಾಡುತ್ತಾಳೆ. ಪೊಲೀಸರು ಘಟನೆಯ ಬಗ್ಗೆ ಗಮನಹರಿಸಿದ್ದು, ವಿಡಿಯೋ ದಲ್ಲಿ ಕಂಡುಬರುವ ಯುವಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ;

Viral Video: ಕಾಲುವೆಗೆ ಬಿದ್ದಿದ್ದ ನಾಯಿಯನ್ನು ಜೆಸಿಬಿಯಲ್ಲಿ ಕಾಪಾಡಿದ ಕಾರ್ಮಿಕ; ವಿಡಿಯೋಗೆ ಭಾರೀ ಮೆಚ್ಚುಗೆ

Viral Video: ಸಿಂಹಕ್ಕೆ ಮುಖಾಮುಖಿಯಾದ ಮರಿ ಕತ್ತೆಕಿರುಬಗಳು; ಮುಂದೇನಾಯ್ತು?

Follow us on

Related Stories

Most Read Stories

Click on your DTH Provider to Add TV9 Kannada