Viral Video: ಸಿಂಹಕ್ಕೆ ಮುಖಾಮುಖಿಯಾದ ಮರಿ ಕತ್ತೆಕಿರುಬಗಳು; ಮುಂದೇನಾಯ್ತು?
Trending Video | Baby Hyenas: ಪುಟಾಣಿ ಕತ್ತೆಕಿರುಬುಗಳು ಹಾಗೂ ಸಿಂಹದ ಮುಖಾಮುಖಿಯ ವಿಡಿಯೋವೊಂದು ವೈರಲ್ ಆಗಿವೆ. ಕತ್ತೆಕಿರುಬಗಳು ವಿಶಿಷ್ಟ ಜೀವಿಗಳು. ಮುಖ್ಯವಾಗಿ ಆಫ್ರಿಕಾದಲ್ಲಿ ಕಂಡುಬರುವ ಇವುಗಳು, ಏಷ್ಯಾ ಭಾಗಗಳಲ್ಲೂ ಸಣ್ಣಪ್ರಮಾಣದಲ್ಲಿವೆ. ಹೈನಾ ಎಂದು ಕರೆಯಲ್ಪಡುವ ಇವುಗಳು ಬೇಟೆಗೆ ಹೆಸರುವಾಸಿ.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ವನ್ಯಪ್ರಾಣಿಗಳ ಕುರಿತ ವಿಡಿಯೋಗಳು ಹೆಚ್ಚಾಗಿ ನೆಟ್ಟಿಗರ ಮನಗೆಲ್ಲುತ್ತವೆ. ಇದೇ ಕಾರಣದಿಂದ ಅವು ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ (Viral Video) ಆಗಿದೆ. ಅದು ಪುಟಾಣಿ ಕತ್ತೆಕಿರುಬುಗಳು ಹಾಗೂ ಸಿಂಹದ ಮುಖಾಮುಖಿಯದ್ದು. ಕತ್ತೆಕಿರುಬಗಳು ವಿಶಿಷ್ಟ ಜೀವಿಗಳು. ಮುಖ್ಯವಾಗಿ ಆಫ್ರಿಕಾದಲ್ಲಿ ಕಂಡುಬರುವ ಇವುಗಳು, ಏಷ್ಯಾ ಭಾಗಗಳಲ್ಲೂ ಸಣ್ಣಪ್ರಮಾಣದಲ್ಲಿವೆ. ಹೈನಾ ಎಂದು ಕರೆಯಲ್ಪಡುವ ಇವುಗಳು ಬೇಟೆಗೆ ಹೆಸರುವಾಸಿ. ಹಾಗೆಯೆ ಇತರ ಪ್ರಾಣಿಗಳು ತಿಂದುಬಿಟ್ಟ ಮಾಂಸವನ್ನು ತಿಂದೂ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಿಂಹವೊಂದು ತನ್ನ ಆಹಾರ ತಿನ್ನುತ್ತಿರುವಾಗ ಎರಡು ಹೈನಾಗಳು ಅದರತ್ತ ತೆರಳಲು ಯತ್ನಿಸುವ ಸಂದರ್ಭದ್ದಾಗಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಮರಿ ಕತ್ತೆಕಿರುಬಗಳು ಸಿಂಹ ಆಹಾರ ತಿನ್ನುತ್ತಿರುವಾಗ ವಾಸನೆ ಗ್ರಹಿಸುತ್ತಾ ಅದರತ್ತ ತೆರಳಿವೆ. ಆಗ ಆಹಾರ ತಿನ್ನುತ್ತಿದ್ದ ಸಿಂಹ ತಲೆಯೆತ್ತಿ ಇವುಗಳನ್ನು ದಿಟ್ಟಿಸಿ ನೋಡಿದೆ. ಎರಡು ಹೈನಾಗಳಿಗೂ ತಾವು ಅಪಾಯಕರ ಸ್ಥಳಕ್ಕೆ ಬಂದಿದ್ದೇವೆ ಎನ್ನುವುದರ ಅರಿವಾಗುತ್ತದೆ. ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ಇವಿಷ್ಟು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ:
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ‘ವೈಲ್ಡ್ ಲೈಫ್ ಅನಿಮಲ್’ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು 1.2 ಲಕ್ಷಕ್ಕೂ ಅಧಿಕ ಜನ ಇಷ್ಟಪಟ್ಟಿದ್ದು, ಈ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ‘ಸಿಂಹದ ನೋಟ ನೋಡಿದರೆ ಕೊಲ್ಲುವಂತಿತ್ತು’ ಎಂಬ ಕ್ಯಾಪ್ಶನ್ ನೀಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಅನೇಕರು, ಸಿಂಹವು ಮರಿ ಹೈನಾಗಳಿಗೆ ಪುಣ್ಯಕ್ಕೆ ಏನೂ ಮಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೇಟೆಗೆ ಸಿಗದ ಆನೆ; ವೈರಲ್ ಆಗಿತ್ತು ಮತ್ತೊಂದು ವಿಡಿಯೋ:
ಇತ್ತೀಚೆಗೆ ಇಂಥದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಸಿಂಹವೊಂದು ಆನೆಯನ್ನು ಬೇಟೆಯಾಡಲು ಪ್ರಯತ್ನಿಸುತ್ತಿತ್ತು. ಸಾಮಾನ್ಯವಾಗಿ ಆನೆಯನ್ನು ಬೇಟೆಯಾಡಲು ಎರಡು ಗಂಡು ಸಿಂಹಗಳಾದರೂ ಒಟ್ಟಾಗಿ ದಾಳಿ ಮಾಡಬೇಕು. ಸಣ್ಣ ಆನೆಯನ್ನಾದರೆ ಪ್ರೌಢ ಸಿಂಹವೊಂದೇ ಬೇಟೆಯಾಡಬಹುದು ಎನ್ನಲಾಗುತ್ತದೆ. ಆ ವಿಡಿಯೋದಲ್ಲಿ ಆನೆಯನ್ನು ಒಂದೇ ಸಿಂಹವು ಬೇಟೆಯಾಡಲು ಮುಂದಾಗಿತ್ತು. ಆದರೆ ತನ್ನ ಪ್ರಯತ್ನದಲ್ಲಿ ಅದು ಯಶಸ್ವಿಯಾಗಲಿಲ್ಲ. ಕೊನೆಗೆ ಆನೆಯಿಂದ ತಪ್ಪಿಸಿಕೊಂಡು ಓಡಬೇಕಾಗಿ ಬಂದಿತು. ವೈರಲ್ ಆಗಿದ್ದ ಆ ವಿಡಿಯೋ ಇಲ್ಲಿದೆ.
— Life and nature (@afaf66551) June 24, 2021
ಇದನ್ನೂ ಓದಿ: Viral: ತನ್ನ ಪ್ರಾಣವನ್ನು ಪಣಕ್ಕಿಟ್ಟು ಸಿಂಹಿಣಿಯನ್ನು ರಕ್ಷಿಸಿದ ಸಿಂಹ; ವಿಡಿಯೋ ವೈರಲ್
ಆನೆ ಮತ್ತು ಸಿಂಹಿಣಿ ಮಧ್ಯೆ ತೀವ್ರ ಕಾಳಗ; ಗೆದ್ದೋರ್ಯಾರು..! ಸೋತವರ್ಯಾರು..! ಇಲ್ಲಿದೆ ವೈರಲ್ ವಿಡಿಯೋ