20 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಆಶ್ರಯ ಪಡೆದು ಭೂಕುಸಿತದಿಂದ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ 11 ವರ್ಷದ ಫಿಲಿಪೈನ್ಸ್ ಬಾಲಕ

ಬಾಕನನ್ನು ಸುರಕ್ಷಿತವಾಗಿ ಹೊರ ತೆಗೆದ ನಂತರ ಆತ ಮೊದಲು ಹೇಳಿದ್ದು ನನಗೆ ಹಸಿವಾಗಿದೆ ಎಂದು. ಅವರ ಕುಟುಂಬ ಮತ್ತು ಸ್ನೇಹಿತರು ಎಲ್ಲಿದ್ದಾರೆ ಎಂದು ಕೇಳಿದಾಗ, ನಾನು ಒಬ್ಬನೇ ಉಳಿದಿದ್ದೇನೆ, ನನ್ನೊಂದಿಗೆ ಯಾರೂ ಇಲ್ಲ ಎಂದು ಹೇಳಿದ್ದಾನೆ.

20 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಆಶ್ರಯ ಪಡೆದು ಭೂಕುಸಿತದಿಂದ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ 11 ವರ್ಷದ ಫಿಲಿಪೈನ್ಸ್ ಬಾಲಕ
ಪವಾಡ ಸದೃಶ ರೀತಿಯಲ್ಲಿ ಬದುಕುಳಿದ 11 ವರ್ಷದ ಫಿಲಿಪೈನ್ಸ್ ಬಾಲಕ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 23, 2022 | 7:42 PM

ವೈರಲ್ ನ್ಯೂಸ್: ಫಿಲಿಪ್ಪೀನ್ಸ್​ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಇಡೀ ದಿನ ರೆಫ್ರಿಜರೇಟರ್​ನಲ್ಲಿ ಆಶ್ರಯ ಪಡೆದು ಪವಾಡ ಸದೃಶ್ಯ (Miraculously) ರೀತಿಯಲ್ಲಿ ಬದುಕುಳಿದಿದ್ದಾನೆ. ಶುಕ್ರವಾರದಂದು ಫಿಲಿಪೈನ್ಸ್‌ನ ಬೇಬೇ ಸಿಟಿಯಲ್ಲಿ ಸಿಜೆ ಜಾಸ್ಮೆ ಎಂದು ಗುರುತಿಸಲಾದ ಫಿಲಿಪಿನೋ ಹುಡುಗ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಉಷ್ಣವಲಯದ ಚಂಡಮಾರುತದ ಮೆಗಿ ತಂದ ಭೂಕುಸಿತದಿಂದ ಮಣ್ಣಿನ ಭಾರೀ ಪ್ರವಾಹವು ಅವನ ಮನೆಗೆ ನುಗ್ಗಿತು. ಚಂಡಮಾರುತದಿಂದ ಪಾರಾಗಲು ಹುಡುಗ ತ್ವರಿತವಾಗಿ ರೆಫ್ರಿಜರೇಟರ್ ಒಳಗೆ ಅಡಗಿಕುಳಿತಿದ್ದಾನೆ. ಅವನು ಅದರೊಳಗೆ 20 ಗಂಟೆಗಳ ಕಾಲ ಅದರಲ್ಲಿ ಆಶ್ರಯ ಪಡೆದಿದ್ದಾನೆ. ಸ್ಥಳೀಯ ಸುದ್ದಿ ವಾಹಿನಿ ವರದಿಯ ಪ್ರಕಾರ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಸಿಜೆ ಹಸ್ಮೆ ಎಂದು ಗುರುತಿಸಲಾದ ಹುಡುಗ ರೆಫ್ರಿಜರೇಟರ್‌ನಲ್ಲಿ ಮಲಗಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದಾರೆ. ಅವನ ಕಾಲು ಮುರಿದಿದ್ದು, ಆದರೆ ಅವನು ಸಂಪೂರ್ಣ ಪವಾಡ ಸದೃಶ್ಯ ಎನ್ನುವಂತೆ ಬದುಕುಳಿದಿದ್ದಾನೆ. ಘಟನೆಯ ಚಿತ್ರಗಳು ಮತ್ತು ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಡಬಲ್-ಡೋರ್ ಫ್ರಿಜ್ನ್​ ಒಳಗೆ ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಳವಾದ ಕೆಸರಿನಲ್ಲಿ ಸಿಲುಕಿ ರಾತ್ರಿಯನ್ನು ಕಳೆದ ನಂತರ ಅವನನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

ಬಾಕನನ್ನು ಸುರಕ್ಷಿತವಾಗಿ ಹೊರ ತೆಗೆದ ನಂತರ ಆತ ಮೊದಲು ಹೇಳಿದ್ದು ನನಗೆ ಹಸಿವಾಗಿದೆ ಎಂದು. ಅವರ ಕುಟುಂಬ ಮತ್ತು ಸ್ನೇಹಿತರು ಎಲ್ಲಿದ್ದಾರೆ ಎಂದು ಕೇಳಿದಾಗ, ನಾನು ಒಬ್ಬನೇ ಉಳಿದಿದ್ದೇನೆ, ನನ್ನೊಂದಿಗೆ ಯಾರೂ ಇಲ್ಲ ಎಂದು ಹೇಳಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಹುಡುಗನ ತಾಯಿ ಮತ್ತು ಕಿರಿಯ ಸಹೋದರ ಕಾಣೆಯಾಗಿದ್ದಾರೆ ಮತ್ತು ಅವನ ತಂದೆ ಮತ್ತೊಂದು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:

ಕುಮಾರಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ: ರೇವಣ್ಣ

RCB vs SRH Playing XI IPL 2022: ಬಲಿಷ್ಠ ಪಡೆಯನ್ನು ಕಣಕ್ಕಿಳಿಸಿದ ಆರ್​​ಸಿಬಿ: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ

Published On - 7:40 pm, Sat, 23 April 22

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM