ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಕೆಜಿಗೆ ಲಕ್ಷಕ್ಕೂ ಹೆಚ್ಚು ಬೆಲೆ ಇರುವ ಈ ತಳಿ ಭಾರತದಲ್ಲೂ ಇದೆ !

ಸಾಮಾನ್ಯವಾಗಿ ಮಾವಿನ ಕಾಯಿಗಳು ಹಸಿರಾಗಿದ್ದರೆ, ಅದು ಹಣ್ಣಾದ ಮೇಲೆ ಸಿಪ್ಪೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಈ ದುಬಾರಿ ಮಾವು ಹಾಗಲ್ಲ. ಸಿಪ್ಪೆಯ ಬಣ್ಣ ನೇರಳೆಯಾಗಿದ್ದರೆ, ಹಣ್ಣಾದ ಮೇಲೆ ಕಡುಗೆಂಪು.

ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಕೆಜಿಗೆ ಲಕ್ಷಕ್ಕೂ ಹೆಚ್ಚು ಬೆಲೆ ಇರುವ ಈ ತಳಿ ಭಾರತದಲ್ಲೂ ಇದೆ !
ವಿಶ್ವದ ಅತ್ಯಂತ ದುಬಾರಿ ಮಾವು
Follow us
TV9 Web
| Updated By: Lakshmi Hegde

Updated on:Apr 25, 2022 | 3:40 PM

ಈಗಂತೂ ಮಾವಿನ ಸೀಸನ್​. ಬಗೆಬಗೆಯ ಮಾವಿನ ಹಣ್ಣುಗಳನ್ನು ಜನರು ಆಸ್ವಾದಿಸುತ್ತಾರೆ. ಈ ಮಾವೆಂಬುದು ಕೇವಲ ಭಾರತದಲ್ಲಿ ಮಾತ್ರ ಪ್ರಸಿದ್ಧಿಯಾದ ಹಣ್ಣಲ್ಲ. ವಿಶ್ವಾದ್ಯಂತ ಅದೆಷ್ಟೋ ದೇಶಗಳ ಜನರಿಗೆ ಈ ಹಣ್ಣು ಬಲುಪ್ರಿಯ. ಇನ್ನು ಭಾರತದಲ್ಲಂತೂ ಮಾವಿನ ಪುಟ್ಟ ಎಳೆ ಕಾಯಿಯಿಂದ ಹಿಡಿದು ಹಣ್ಣಿನವರೆಗೆ ಬಳಕೆಯಾಗುತ್ತದೆ. ಅದರಲ್ಲೂ ಹಣ್ಣು, ಹಣ್ಣಿನ ಜ್ಯೂಸ್​​ಗಳಂತೂ ಎಲ್ಲರಿಗೂ ಪ್ರಿಯ. ಭಾರತದಲ್ಲಿ ಬೈಂಗನಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಸೇರಿ ಅನೇಕ ವಿಧದ ಮಾವಿನ ತಳಿಯನ್ನು ಬೆಳೆಯಲಾಗುತ್ತದೆ. ರುಚಿಯಲ್ಲಿ, ಬೆಲೆಯಲ್ಲಿ ಒಂದಕ್ಕಿಂದ ಒಂದು  ಹೆಚ್ಚು. ಆದರೆ ವಿಶ್ವದಲ್ಲೇ ಅತ್ಯಂತ ದುಬಾರಿ ಮಾವಿನ ಹಣ್ಣು ಎಲ್ಲಿ ಬೆಳೆಯುತ್ತದೆ? ಅದು ಯಾವ ಜಾತಿಯದ್ದು? ನೋಡಲು ಹೇಗಿರುತ್ತದೆ ಎಂಬುದು ನಿಮಗೆ ಗೊತ್ತಾ?

ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಹೆಗ್ಗಳಿಕೆ ಪಡೆದಿರುವುದು ಮಿಯಾಝಾಕಿ ಮಾವು. ಇದು ನೋಡಲು ನೇರಳೆ ಬಣ್ಣದಲ್ಲಿ ಇರುತ್ತದೆ. ಜಪಾನ್​ನ ಮಿಯಾಝಾಕಿ ಎಂಬ ನಗರದಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದರ ಬೆಲೆ ಕೇಳಿದರೆ ಅಚ್ಚರಿಯಾಗದೆ ಇರದು..ಯಾಕೆಂದರೆ ಈ ಮಿಯಾಝಾಕಿ ಮಾವಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ ಬರೋಬ್ಬರಿ 2.70 ಲಕ್ಷ ರೂಪಾಯಿ. ಇನ್ನೊಂದು ಮಹತ್ವದ ವಿಚಾರವೆಂದರೆ ಈ ತಳಿಯ ಮಾವನ್ನು ಭಾರತದಲ್ಲಿ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಮಿಯಾಝಾಕಿ ಮಾವಿನ ಎರಡು ಮರಗಳನ್ನು ಬೆಳೆಸಲಾಗುತ್ತಿದ್ದು, ಆ ಗಿಡಗಳಿಗೆ ಭರ್ಜರಿ ಭದ್ರತೆ ಕಲ್ಪಿಸಲಾಗಿದೆ. ರಕ್ಷಣೆಗಾಗಿ ಸೆಕ್ಯೂರಿಟಿ ಗಾರ್ಡ್​​ಗಳನ್ನು, ಕಾವಲು ನಾಯಿಗಳನ್ನು ನಿಯೋಜಿಸಲಾಗಿದೆ.

ಮಿಯಾಝಾಕಿ ಮಾವಿನ ಹಣ್ಣುಗಳು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮಾವಿನ ಹಣ್ಣುಗಳು. ಇವುಗಳನ್ನು ಟೈಯ ನೊ ಟೊಮೆಗೋ ಅಥವಾ ಎಗ್ಸ್​ ಆಫ್​ ಸನ್​ಶೈನ್ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಾವಿನ ಕಾಯಿಗಳು ಹಸಿರಾಗಿದ್ದರೆ, ಅದು ಹಣ್ಣಾದ ಮೇಲೆ ಸಿಪ್ಪೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಮಿಯಾಝಾಕಿ ಮಾವು ಹಾಗಲ್ಲ, ಕಾಯಿ ಕಡು ನೇರಳೆ ಬಣ್ಣದಲ್ಲಿದ್ದರೆ, ಅದು ಮಾಗಿ ಹಣ್ಣಾದ ಮೇಲೆ ಕೆಂಪು ಬಣ್ಣವಾಗುತ್ತದೆ. ಅದರ ಆಕೃತಿ ಥೇಟ್ ಡೈನೋಸರ್ ಮೊಟ್ಟೆಯನ್ನು ಹೋಲುತ್ತದೆ. ಹಾಗಾಗಿಯೇ ಈ ಹಣ್ಣುಗಳನ್ನು ಡ್ರ್ಯಾಗನ್ಸ್​ ಮೊಟ್ಟೆ ಎಂದೂ ಕರೆಯಲಾಗುತ್ತದೆ. ಒಂದು ಹಣ್ಣು ಸಾಮಾನ್ಯವಾಗಿ 350 ಗ್ರಾಂ ಇದ್ದು, ಸಕ್ಕರೆ ಅಂಶ ಶೇ.15ರಷ್ಟು ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.

ಈಗೀಗ ವಿಶ್ವದ ಕೆಲವು ಪ್ರದೇಶಗಳಲ್ಲಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದರೂ ಜಪಾನ್​ನ ಮಿಯಾಝಾಕಿ ನಗರವೇ ಇದರ ಮೂಲ. ಕ್ಯುಶು ಪ್ರಾಂತ್ಯದಲ್ಲಿರುವ ಮಿಯಾಝಾಕಿಯಲ್ಲಿ 70-80ರ ದಶಕದಲ್ಲಿ ಈ ತಳಿಯ ಮಾವಿನ ಹಣ್ಣನ್ನು ಬೆಳೆಯಲು ಶುರು ಮಾಡಿದ್ದಾರೆ. ಇಲ್ಲಿ ಅನುಕೂಲಕರ ವಾತಾವರಣವೂ ಇದೆ.  ಇನ್ನು ಮಧ್ಯಪ್ರದೇಶದಲ್ಲಿ ದಂಪತಿ ತಮ್ಮ ಮಾವಿನ ತೋಟದಲ್ಲಿ ಇದರ ಎರಡು ಸಸಿಗಳನ್ನು ನೆಟ್ಟಿದ್ದಾರೆ. ಇವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರಿಂದ ಸಸಿ ಪಡೆದಿದ್ದರು. ಆದರೆ ಆಗ ಅವರಿಗೆ ಈ ಮಾವಿನ ಸಸಿಗೆ ಇಷ್ಟೊಂದು ಮೌಲ್ಯವಿದೆ ಎಂಬುದು ಗೊತ್ತಿತಲಿಲ್ಲ. ಬಳಿಕ ಅದರಲ್ಲಿ ಬಿಟ್ಟ ಮಾವಿನ ಕಾಯಿ ನೇರಳೆ ಬಣ್ಣದಲ್ಲಿ ಇರುವುದನ್ನು ನೋಡಿದ ಮೇಲೆಯೇ ಅವರಿಗೆ ಅರ್ಥವಾಗಿದೆ. ಇದೀಗ ಮಿಯಾಝಾಕಿ ಮಾವಿಗೆ ದಂಪತಿ ದಾಮಿನಿ ಎಂದು ನಾಮಕರಣ ಮಾಡಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಹಾಗೇ, ಈ ಮರಗಳ ರಕ್ಷಣೆಗೆ ಅವರು ಅಪಾರ ವ್ಯವಸ್ಥೆ ಮಾಡಿದ್ದಾರೆ. ಆರು ನಾಯಿಗಳು ಮರವನ್ನು ಕಾಯುತ್ತಿವೆ.

ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಣ ದೇಶ ವಿರೋಧಿಯಾಗಿದ್ದರೆ ನಮ್ಮ ವಿರುದ್ಧವೂ ದೇಶದ್ರೋಹ ಕೇಸ್​ ದಾಖಲಿಸಿ: ದೇವೇಂದ್ರ ಫಡ್ನವೀಸ್​

Published On - 3:39 pm, Mon, 25 April 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್