ಟೊಯೊಟಾ ಫಾರ್ಚುನರ್ ಕಾರು ಚಲಾಯಿಸಿದ 8 ವರ್ಷದ ಪಾಕಿಸ್ತಾನ ಬಾಲಕ; ಬಾಲಕನ ಪೋಷಕರನ್ನು ಟೀಕಿಸಿದ ನೆಟ್ಟಿಗರು
ಅಯಾನ್ ಎಂದು ಗುರುತಿಸಲಾದ 8 ವರ್ಷದ ಬಾಲಕ ತನ್ನ 10 ವರ್ಷದ ಅಕ್ಕನೊಂದಿಗೆ ಟೊಯೋಟಾ ಫಾರ್ಚುನರ್ ಮುಂದೆ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ವೈರಲ್ ವೀಡಿಯೋ: ಪಾಕಿಸ್ತಾನದಲ್ಲಿ 8 ವರ್ಷದ ಬಾಲಕ (Boy) ನೊಬ್ಬ ಟೊಯೊಟಾ ಫಾರ್ಚುನರ್ ಕಾರು ಚಲಾಯಿಸುತ್ತಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದಂತೆಯೇ, ಪಾಕಿಸ್ತಾನದಲ್ಲಿ ಚಾಲನಾ ಪರವಾನಗಿ ಪಡೆಯಲು ಒಬ್ಬ ವ್ಯಕ್ತಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆದಾಗ್ಯೂ, ನಿಯಮಗಳನ್ನು ಉಲ್ಲಂಘಿಸಿ, ಪಾಕಿಸ್ತಾನದ ಸಿಯಾಲ್‌ಕೋಟ್‌ನ 8 ವರ್ಷದ ಬಾಲಕ ಟೊಯೊಟಾ ಫಾರ್ಚುನರ್ ಎಸ್‌ಯುವಿಯನ್ನು ರಸ್ತೆಯಲ್ಲಿ ಓಡಿಸುತ್ತಿರುವುದು ಕಂಡುಬಂದಿದೆ.
ಅಯಾನ್ ಎಂದು ಗುರುತಿಸಲಾದ 8 ವರ್ಷದ ಬಾಲಕ ತನ್ನ 10 ವರ್ಷದ ಅಕ್ಕನೊಂದಿಗೆ ಟೊಯೋಟಾ ಫಾರ್ಚುನರ್ ಮುಂದೆ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ತನ್ನ ಕೌಶಲ್ಯವನ್ನು ಪ್ರದರ್ಶಿಸುತ್ತಾ, ಬಾಲಕನು SUVಯ ಬಾಗಿಲು ತೆರೆದು ಕೆಲವು ವಾಹನಗಳು ಹಾದುಹೋಗುವ ರಸ್ತೆಯಲ್ಲಿ ಕಾರನ್ನು ಓಡಿಸುವುದನ್ನು ಕಾಣಬಹುದು. ಬಾಲಕ ತನ್ನ ಎತ್ತರ ಕಡಿಮೆಯಿರುವುದರಿಂದ ಸೀಟಿನ ತುದಿಯಲ್ಲಿ ಕುಳಿತಿ ಕಾರ ಚಾಲನೆ ಮಾದಿದ್ದಾನೆ. ಆತ ಯಾವುದೇ ಸೀಟ್ ಬೆಲ್ಟ್ ಕೂಡ ಧರಿಸಿಲ್ಲ. ಯಾವುದೇ ಹಂತದಲ್ಲಿ, ಬಾಲಕ ಹೆದರದೆ ಕಾರನ್ನು ನಿರ್ವಹಿಸುವಲ್ಲಿ ತನ್ನ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ್ದಾನೆ.
ಅಯಾನ್ ಮತ್ತು ಅರೀಬಾ ಶೋ ಎಂಬ ಯೂಟ್ಯೂಬ್ ಚಾನೆಲ್ ಏಪ್ರಿಲ್ 1 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, 8 ವರ್ಷದ ಬಾಲಕ ಟೊಯೊಟಾ ಫಾರ್ಚುನರ್ನ್ನು ಹೇಗೆ ಓಡಿಸಬಹುದು ಎಂಬುದನ್ನು ನಾವು ಇಂದು ನಿಮಗೆ ತೋರಿಸುತ್ತೇವೆ ಎಂದು ಬರೆಯಲಾಗಿದೆ. ಅಯಾನ್ ವಾಹನ ಚಲಾಯಿಸುವುದನ್ನು ನೋಡಿದ ಯಾರಾದರೂ ಶಾಕ್ ಆಗುತ್ತಾರೆ. ವಿಡಿಯೋ ಪ್ರಕಾರ, ಬಾಲಕ ಆರು ವರ್ಷದವನಾಗಿದ್ದಾಗಿನಿಂದ ಕಾರು ಓಡಿಸುತ್ತಿದ್ದಾನೆ. ವಿಡಿಯೋ ಚಿತ್ರೀಕರಣಗೊಂಡಾಗ ಅವನಿಗೆ ಎಂಟು ವರ್ಷ. ಸದ್ಯ ವಿಡಿಯೋ ವೈರಲ್ ಆಗಿದ್ದು, ಹಲವಾರು ಜನರು ಅದರ ಬಗ್ಗೆ ಪ್ರಶ್ನೆ ಮಾಡಿದ್ದು, ತನ್ನ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವುದಕ್ಕಾಗಿ ಬಾಲಕನ ಪೋಷಕರನ್ನು ಟೀಕಿಸಿದ್ದಾರೆ. ಅಂತಹ ನಡವಳಿಕೆಯು ಕಾನೂನುಬಾಹಿರ, ಬೇಜವಾಬ್ದಾರಿ ಮತ್ತು ಅಪಾಯಕಾರಿಯಾಗಿದ್ದು, ಇದನ್ನು ಪ್ರೋತ್ಸಾಹಿಸಬಾರದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ;
viral video: ಸದ್ದಿಲ್ಲದೆ ಆಸ್ಟ್ರೇಲಿಯಾದ ಬಾರ್ವೊಂದಕ್ಕೆ ಎಂಟ್ರಿ ಕೊಟ್ಟ ಕಾಂಗರೂ; ಮುಂದೇನಾಯ್ತು..!
RCB vs RR: ಇದುವರೆಗೆ 26 ಪಂದ್ಯಗಳಲ್ಲಿ ರಾಜಸ್ಥಾನ- ಆರ್ಸಿಬಿ ಮುಖಾಮುಖಿ; ಇದರಲ್ಲಿ ಯಾರಿಗೆ ಮೇಲುಗೈ ಗೊತ್ತಾ?